ತಾವುಹಿದ್ ಪಾಷ ಮತ್ತು ಮೊಹಮ್ಮದ್ ರಫಿ ನಡುವೆ ಮಂಗಳವಾರ ಯಾವುದೋ ವಿಚಾರಕ್ಕೆ ದೂರವಾಣಿಯಲ್ಲಿ ಮಾತಿನ ಚಕುಮಕಿ ನಡೆದಿದೆ. ರಾತ್ರಿ 10 ಗಂಟೆ ಸಂದರ್ಭದಲ್ಲಿ ಮುಸ್ಲಿಂ ಬ್ಲಾಕ್‌ನ ಮಸೀದಿ ಹಿಂಭಾಗದ ಮೈದಾನದಲ್ಲಿ ಮೊಹಮ್ಮದ್ ರಫಿ ತನ್ನ ಸ್ನೇಹಿತರ ಜತೆ ಇದ್ದಾಗ ಬೈಕ್‌ನಲ್ಲಿ ಆಗಮಿಸಿದ ತಾವುಹಿದ್ ಪಾಷ, ಏಕಾಏಕಿ ಮೊಹಮ್ಮದ್ ರಫಿ ತಲೆಗೆ ಸೆಂಟ್ರಿಂಗ್ ದೊಣ್ಣೆಯಿಂದ ಹೊಡೆದಿದ್ದಾನೆ. ನಂತರ ಕೆಳಕ್ಕೆ ಬಿದ್ದ ನಂತರ ಮೂರು, ನಾಲ್ಕು ಬಾರಿ ತಲೆಗೆ ದೊಣ್ಣೆಯಿಂದ ಬಲವಾಗಿ ಹೊಡೆದಿದ್ದಾನೆ. ತಡೆಯಲು ಹೋದ ಮೊಹಮ್ಮದ್ ರಫಿ ಸ್ನೇಹಿತರಿಬ್ಬರಿಗೂ ಅವಾಜ್ ಹಾಕಿ ಸ್ಥಳದಿಂದ ಓಡಿಹೋಗಿದ್ದಾನೆ. ತೀವ್ರ ರಕ್ತಸ್ರಾವದಲ್ಲಿ ಬಿದ್ದು ಒದ್ದಾಡುತ್ತಿದ್ದ ಮೊಹಮ್ಮದ್ ರಫಿಯನ್ನು ಸ್ನೇಹಿತರು ಪಟ್ಟಣದ ಸಾರ್ವಜನಿಕ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿ, ಹೆಚ್ಚಿನ ಚಿಕಿತ್ಸೆಗೆ ಮೈಸೂರಿನ ಕೆ.ಆರ್.ಆಸ್ಪತ್ರೆಗೆ ದಾಖಲಿಸಿದ್ದಾರೆ. ತಡರಾತ್ರಿ ಚಿಕಿತ್ಸೆಗೆ ಸ್ಪಂದಿಸದೆ ಮೊಹಮ್ಮದ್ ರಫಿ ಸಾವನ್ನಪ್ಪಿದ್ದಾನೆ.