ಮುಳ್ಳೂರು-ಬಿರ್ವಾಳ್ ರಸ್ತೆ ಕಾಮಗಾರಿ ಶುರು

ಸರಗೂರು ತಾಲೂಕಿನ ಮುಳ್ಳೂರು-ಬಿರ್ವಾಳ್ ರಸ್ತೆ ಕಾಮಗಾರಿ ಪ್ರಾರಂಭಗೊಡಿರುವುದು.
ಸರಗೂರು ತಾಲೂಕಿನ ಮುಳ್ಳೂರು-ಬಿರ್ವಾಳ್ ರಸ್ತೆ ಕಾಮಗಾರಿ ಪ್ರಾರಂಭಗೊಡಿರುವುದು.
Published on
ಸರಗೂರು: ಹಲವು ವರ್ಷಗಳಿಂದ ನನೆಗುದಿಗೆ ಬಿದ್ದಿದ್ದ ಮುಳ್ಳೂರು-ಬಿರ್ವಾಳ್ ರಸ್ತೆ ಅಭಿವೃದ್ಧಿ ಕಾಮಗಾರಿ ಕೊನೆಗೂ ಶುರುವಾಗಿದೆ.
ಮುಳ್ಳೂರು,ಬಿರ್ವಾಳ್ ಗ್ರಾಮಸ್ಥರು ಮುಖಂಡರು ರಸ್ತೆ ದುರಸ್ತಿ ಮಾಡುವಂತೆ ಶಾಸಕ ಅನಿಲ್ ಚಿಕ್ಕಮಾದು ಅವರಿಗೆ ಸಾಕಷ್ಟು ಬಾರಿ ಮನವಿ ಮಾಡಿದ್ದರು. ಈ ಹಿನ್ನೆಲೆಯಲ್ಲಿ ಶಾಸಕ ಅನಿಲ್ ಚಿಕ್ಕಮಾದು ರಸ್ತೆ ಅಭಿವೃದ್ಧಿಗೆ ಇತ್ತೀಚೆಗೆ ಭೂಮಿ ಪೂಜೆ ಮಾಡಿದ್ದರು. ಗುರುವಾರದಿಂದ ರಸ್ತೆ ಕೆಲಸ ಪ್ರಾರಂಭಗೊಂಡಿದೆ.
ಮುಳ್ಳೂರು ಗ್ರಾಮ ಹತ್ತಾರು ಗ್ರಾಮಗಳಿಗೆ ಹೃದಯ ಭಾಗದಂತಿದ್ದು, ಜನಸಂಖ್ಯೆ ಹೆಚ್ಚಿದೆ. ಇಲ್ಲಿಂದ ನೂರಾರು ವಿದ್ಯಾರ್ಥಿಗಳು ನಂಜನಗೂಡು, ಸರಗೂರು, ಹೆಡಿಯಾಲಕ್ಕೆ ಹೋಗಿ ಬರಲು ರಸ್ತೆಯಿಲ್ಲದೇ ತುಂಬ ತೊಂದರೆಯಾಗಿತ್ತು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net