ಸಮಾನತೆಯ ಆದರ್ಶಗಳನ್ನು ಪಾಲಿಸೋಣ

ಮೂಗೂರಿನಲ್ಲಿ ಹಮ್ಮಿಕೊಂಡಿದ್ದ ಅಂಬೇಡ್ಕರ್ ಜಯಂತಿಯಲ್ಲಿ ಅಂಬೇಡ್ಕರ್ ಭಾವಚಿತ್ರಕ್ಕೆ ಮುಖಂಡರು ಮಾಲಾರ್ಪಣೆ ಮಾಡಿದರು. ಗ್ರಾಪಂ ಮಾಜಿ ಸದಸ್ಯ ಪುಟ್ಟ ಮಾದಯ್ಯ, ಎಂ ರಾಜು, ಚಿಕ್ಕಮಾದು, ಕೃಷ್ಣಸ್ವಾಮಿ, ಮಹದೇವ ಸ್ವಾಮಿ, ಕುಮಾರ್, ವಿಶ್ವ ಮಹದೇವ ಮೂರ್ತಿ ಇದ್ದರು.
ಮೂಗೂರಿನಲ್ಲಿ ಹಮ್ಮಿಕೊಂಡಿದ್ದ ಅಂಬೇಡ್ಕರ್ ಜಯಂತಿಯಲ್ಲಿ ಅಂಬೇಡ್ಕರ್ ಭಾವಚಿತ್ರಕ್ಕೆ ಮುಖಂಡರು ಮಾಲಾರ್ಪಣೆ ಮಾಡಿದರು. ಗ್ರಾಪಂ ಮಾಜಿ ಸದಸ್ಯ ಪುಟ್ಟ ಮಾದಯ್ಯ, ಎಂ ರಾಜು, ಚಿಕ್ಕಮಾದು, ಕೃಷ್ಣಸ್ವಾಮಿ, ಮಹದೇವ ಸ್ವಾಮಿ, ಕುಮಾರ್, ವಿಶ್ವ ಮಹದೇವ ಮೂರ್ತಿ ಇದ್ದರು.
Published on
ಮೂಗೂರು: ವಿಶ್ವವೇ ಮೆಚ್ಚುವಂತಹ ಸಮಾನತೆಯ ಆದರ್ಶಗಳನ್ನು ನಾವುಗಳು ಪಾಲಿಸಿದಾಗ ಮಾತ್ರ ಮಹಾತ್ಮರ ಜಯಂತಿ ಆಚರಣೆಗೆ ಮಹತ್ವ ಪಡೆಯಲಿದೆ ಎಂದು ಮುಖಂಡ ಎಂ. ಕೆ. ಸಿದ್ದರಾಜು ಹೇಳಿದರು.
ಗ್ರಾಮದ ಅಂಬೇಡ್ಕರ್ ಬಡಾವಣೆಯ ಸಮುದಾಯ ಭವನ ಆವರಣದ ಬಳಿ ಇರುವ ಅಂಬೇಡ್ಕರ್ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡಿ ಅವರು ಮಾತನಾಡಿದರು.ಮಹಾನ್ ವ್ಯಕ್ತಿಯಾದ ಅಂಬೇಡ್ಕರ್ ಜಯಂತಿಯನ್ನು ಹೊರ ರಾಷ್ಟ್ರಗಳಲ್ಲೂ ಆಚರಣೆ ಮಾಡಲಾಗುತ್ತಿದೆ. ಅವರ ಆದರ್ಶ ಮತ್ತು ತ್ಯಾಗವನ್ನು ನಾವೆಲ್ಲರೂ ಅರ್ಥ ಮಾಡಿಕೊಳ್ಳಬೇಕಿದೆ ಎಂದರು.
ಯುವಜನರು ಮತ್ತು ವಿದ್ಯಾರ್ಥಿಗಳು ಅಧ್ಯಯನಕ್ಕೆ ಹೆಚ್ಚು ಮಹತ್ವ ನೀಡಬೇಕು. ಮಹಾತ್ಮರ ಜೀವನ ಮೌಲ್ಯಗಳನ್ನು ತಮ್ಮಲ್ಲಿ ಅಳವಡಿಸಿಕೊಳ್ಳಬೇಕು. ಪ್ರತಿಯೊಬ್ಬರೂ ಶಿಕ್ಷಣ ಪಡೆದು ಉನ್ನತ ಹುದ್ದೆಗೆ ಏರಬೇಕು. ಉದಾತ್ತ ಆಶಯಗಳನ್ನು ಎತ್ತಿ ಹಿಡಿದು ಪ್ರಬುದ್ಧ ರಾಷ್ಟ್ರ ನಿರ್ಮಾಣಕ್ಕೆ ಕೈ ಜೋಡಿಸಬೇಕು ಎಂದರು. ಮೂಗೂರು ಕೃಷಿ ಪತ್ತಿನ ಸಹಕಾರ ಬ್ಯಾಂಕ್ ಮಾಜಿ ಅಧ್ಯಕ್ಷ ಎಂ. ಆರ್. ಸುಂದರ್ ಮಾತನಾಡಿ,
ಆತ್ಮಸ್ಥೈರ್ಯದಿಂದ ಮುನ್ನಡೆದಾಗ ಮಾತ್ರ ವಿಜಯ ನಮ್ಮದಾಗುತ್ತದೆ ಎಂದರು. ಅಂಬೇಡ್ಕರ್ ರವರ ಜಯಂತಿಯನ್ನು ಮಾತ್ರ ಆಚರಣೆ ಮಾಡಿದರೆ ಸಾಲದು. ಅವರ ಅಸಾಧಾರಣ ಸಾಧನೆ, ಮೌಲ್ಯಯುತ ವಿಚಾರಧಾರೆಗಳನ್ನು ತಿಳಿದು ಜಾಗೃತರಾಗಬೇಕು. ದೇಶಕ್ಕೆ ಅವರು ನೀಡಿದ ಕೊಡುಗೆಯನ್ನು ಅರಿಯಬೇಕು ಎಂದರು.
ಗ್ರಾಪಂ ಮಾಜಿ ಸದಸ್ಯ ಪುಟ್ಟ ಮಾದಯ್ಯ, ಎಂ ರಾಜು, ಚಿಕ್ಕಮಾದು, ಕೃಷ್ಣಸ್ವಾಮಿ, ಮಹದೇವ ಸ್ವಾಮಿ, ಕುಮಾರ್, ವಿಶ್ವ ಮಹದೇವ ಮೂರ್ತಿ, ಪುಟ್ಟ ಮಾದಯ್ಯ, ಚಂದ್ರ ಶೇಖರ ಮೂರ್ತಿ, ದಿಲೀಪ, ಸುಂದ್ರಪ್ಪ, ಮನು ಇತರರು ಹಾಜರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net