ಫೋಟೋಗ್ರಫಿ ಕ್ಷೇತ್ರದಲ್ಲಿ ಹೆಚ್ಚಿನ ಉದ್ಯೋಗವಕಾಶ

ಹುಣಸೂರು ನಗರದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಹಿರಿಯ ಛಾಯಾಗ್ರಾಹಕರನ್ನು ಸನ್ಮಾನಿಸಲಾಯಿತು. ಎಚ್.ಪಿ.ಅಮರನಾಥ್, ಕೆ.ರಾಮಸ್ವಾಮಿ, ಕ್ಸೇವಿಯರ್, ಗಜೇಂದ್ರ ಇತರರಿದ್ದರು.
ಹುಣಸೂರು ನಗರದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಹಿರಿಯ ಛಾಯಾಗ್ರಾಹಕರನ್ನು ಸನ್ಮಾನಿಸಲಾಯಿತು. ಎಚ್.ಪಿ.ಅಮರನಾಥ್, ಕೆ.ರಾಮಸ್ವಾಮಿ, ಕ್ಸೇವಿಯರ್, ಗಜೇಂದ್ರ ಇತರರಿದ್ದರು.
Published on

ಹುಣಸೂರು:

ಫೋಟೋಗ್ರಫಿ ಕ್ಷೇತ್ರದಲ್ಲಿ ಹೆಚ್ಚಿನ ಉದ್ಯೋಗವಕಾಶವಿದ್ದು, ಛಾಯಾಗ್ರಾಹಕರು ವೃತ್ತಿಯಲ್ಲಿ ಇನ್ನಷ್ಟು ಕೌಶಲ ಬೆಳೆಸಿಕೊಳ್ಳಬೇಕು ಎಂದು ನಗರ ಯೋಜನಾ ಪ್ರಾಧಿಕಾರ ಅಧ್ಯಕ್ಷ ಎಚ್.ಪಿ.ಅಮರನಾಥ್ ಸಲಹೆ ನೀಡಿದರು.

ತಾಲೂಕು ಛಾಯಾಗ್ರಾಹಕರ ಸಂಘದಿಂದ ಮಂಗಳವಾರ ನಗರದಲ್ಲಿ ಆಯೋಜಿಸಿದ್ದ 187ನೇ ವಿಶ್ವ ಛಾಯಾಗ್ರಹಣ ದಿನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಛಾಯಾಗ್ರಹಣ ಈಗ ದೊಡ್ಡ ಉದ್ಯಮವಾಗುತ್ತಿದೆ. ಹೊಸ ಹೊಸ ತಂತ್ರಜ್ಞಾನ ಬಂದಿದೆ. ಮೇಲಾಗಿ ಯುವ ಸಮೂಹ ಫೋಟೋಗ್ರಫಿ, ಜಾಹೀರಾತು ಕ್ಷೇತ್ರದಲ್ಲಿ ಹೆಚ್ಚಿನ ಆಸಕ್ತಿ ತೋರುತ್ತಿದೆ. ಉತ್ತಮ ಸುದ್ದಿ ಮೌಲ್ಯ ಹೆಚ್ಚಾಗುವುದು ಅತ್ಯುತ್ತಮ ಫೋಟೋದಿಂದಾಗಿ ಎನ್ನುವುದನ್ನು ಎಲ್ಲರೂ ಗಮನಿಸಬೇಕು ಎಂದರು.
ಛಾಯಾಗ್ರಾಹಕರಾದ ಶ್ರೀನಿವಾಸ್, ಶಿವರಾಜ್, ವಿಜಯ್‌ಕುಮಾರ್, ಲೋಕೇಶ್, ಪುಷ್ಪಾ, ಯೋಗೇಶ್ ಅವರನ್ನು ಸನ್ಮಾನಿಸಲಾಯಿತು. ಎಸ್‌ಎಸ್‌ಎಲ್‌ಸಿ, ಪಿಯುನಲ್ಲಿ ಸಿ ಉತ್ತಮ ಅಂಕ ಪಡೆದ ವಿದ್ಯಾರ್ಥಿಗಳನ್ನು ಅಭಿನಂದಿಸಲಾಯಿತು. ಛಾಯಾಗ್ರಾಹಕರ ಕುಟುಂಬಸ್ಥರಿಗೆ ಆಯೋಜಿಸಿದ್ದ ಕ್ರೀಡಾಕೂಟದಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು.
ಸಂಘದ ಅಧ್ಯಕ್ಷ ಕೆ.ಎಸ್.ರಾಮಸ್ವಾಮಿ, ಜಿಲ್ಲಾ ನಿರ್ದೇಶಕ ಮಂಜು ಕುಪ್ಪಣ್ಣ, ಕೊಡಗು ಸಂಘದ ಅಧ್ಯಕ್ಷ ಆವರ್ತಿ ಮಹದೇವಪ್ಪ, ತಾಲೂಕು ಛಾಯಾಗ್ರಾಹಕರ ಸಂಘದ ಗೌರವಾಧ್ಯಕ್ಷ ಕ್ಸೇವಿಯರ್, ಉಪಾಧ್ಯಕ್ಷ ಎಚ್.ಎಸ್.ದಾಮೋದರ್, ಕಾರ್ಯದರ್ಶಿ ಸುರೇಶ್, ನಿರ್ದೇಶಕರಾದ ಎಚ್.ಎಸ್.ಗಜೇಂದ್ರ, ಶಿವರಾಜ್,ಲೋಕೇಶ್, ಯೋಗಾನಂದ ಹಾಜರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net