ಆರೋಗ್ಯ, ಶಿಕ್ಷಣ ಕ್ಷೇತ್ರಕ್ಕೆ ಹೆಚ್ಚು ಒತ್ತು

ಕೆ.ಆರ್.ನಗರದ ಸರ್ಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜಿನಲ್ಲಿ ಏರ್ಪಡಿಸಿದ್ದ ಕಾಲೇಜು ವಾರ್ಷಿಕೋತ್ಸವ ಕಾರ್ಯಕ್ರಮವನ್ನು ಶಾಸಕ ಡಿ.ರವಿಂಕರ್ ಉದ್ಘಾಟಿಸಿದರು. ವೈ.ಎಸ್.ಜಯಂತ್, ಪ್ರೋ.ಬಿ.ಟಿ.ವಿಜಯ್, ಡಾ.ಎಚ್.ಎಂ.ಕಲಾಶ್ರೀ ಇತರರಿದ್ದರು.
ಕೆ.ಆರ್.ನಗರದ ಸರ್ಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜಿನಲ್ಲಿ ಏರ್ಪಡಿಸಿದ್ದ ಕಾಲೇಜು ವಾರ್ಷಿಕೋತ್ಸವ ಕಾರ್ಯಕ್ರಮವನ್ನು ಶಾಸಕ ಡಿ.ರವಿಂಕರ್ ಉದ್ಘಾಟಿಸಿದರು. ವೈ.ಎಸ್.ಜಯಂತ್, ಪ್ರೋ.ಬಿ.ಟಿ.ವಿಜಯ್, ಡಾ.ಎಚ್.ಎಂ.ಕಲಾಶ್ರೀ ಇತರರಿದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಶಾಸಕ ಡಿ. ರವಿಶಂಕರ್ ಹೇಳಿಕೆ
ಕೆ.ಆರ್.ನಗರ: ಕಾಲೇಜಿನ ಅಭಿವೃದ್ಧಿಗೆ ಅನುದಾನ ನೀಡಲಾಗುತ್ತದೆ. ವಿದ್ಯಾರ್ಥಿಗಳಿಗೆ ಅನುಕೂಲವಾಗುವಂತಹ ಎಲ್ಲ ರೀತಿಯ ಸವಲತ್ತು ಒದಗಿಸಲು ಬದ್ಧನಾಗಿದ್ದೇನೆ ಎಂದು ಶಾಸಕ ಡಿ.ರವಿಶಂಕರ್ ಹೇಳಿದರು.
ಪಟ್ಟಣದ ಸರ್ಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜಿನಲ್ಲಿ ಶುಕ್ರವಾರ ಏರ್ಪಡಿಸಿದ್ದ ಕಾಲೇಜು ವಾರ್ಷಿಕೋತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ಕಾಲೇಜು ವ್ಯಾಸಂಗ ಜೀವನದ ಪ್ರಮುಖ ಘಟ್ಟವಾಗಿದೆ. ಇಲ್ಲಿ ಯಾವುದೇ ಆಲೋಚನೆ ಇಲ್ಲದೆ ಉತ್ತಮ ಅಂಕ ಪಡೆಯಬೇಕೆಂಬ ಮಹದಾಸೆ ಎಲ್ಲರಿಗೂ ಇರುತ್ತದೆ ಎಂದರು.
ಇಂದಿನ ಆಧುನಿಕ ತಂತ್ರಜ್ಞಾನ ಯುಗದಲ್ಲಿ ಮೊಬೈಲ್ ಮನುಷ್ಯನನ್ನು ಬಿಟ್ಟರೂ ಮನುಷ್ಯ ಮೊಬೈಲನ್ನು ಬಿಡಲು ಸಾಧ್ಯವಿಲ್ಲ ಮೊಬೈಲ್ ಮತ್ತು ಮನುಷ್ಯನ ಸಂಬಂಧ ಅಂತಹ ಗರಿಷ್ಠ ಮಟ್ಟಕ್ಕೆ ತಲುಪಿದ್ದು ಇದರಿಂದ ಅನುಕೂಲಕ್ಕಿಂತ ಹೆಚ್ಚು ಅನನುಕೂಲವಾಗುವ ಸಂಭವವಿದೆ. ಆದ್ದರಿಂದ ವಿದ್ಯಾರ್ಥಿಗಳು ತಮಗೆ ಅವಶ್ಯಕತೆವಿದ್ದಾಗ ಮಾತ್ರ ಮೊಬೈಲ್ ಬಳಸಿಕೊಳ್ಳಬೇಕೆಂದು ಸಲಹೆ ನೀಡಿದರು.
ಕಾಲೇಜಿನ ಪ್ರಾಧ್ಯಾಪಕರ ಮತ್ತು ಗುರುಹಿರಿಯರ ಮಾರ್ಗದರ್ಶನದಲ್ಲಿ ಉತ್ತಮ ಮೌಲ್ಯಗಳನ್ನು ರೂಢಿಸಿಕೊಂಡು ವ್ಯಾಸಂಗಕ್ಕೆ ಹೆಚ್ಚು ಗಮನನೀಡಿ ಛಲಬಿಡದೆ ಗುರಿ ಮುಟ್ಟಬೇಕು ಎಂದು ಕಿವಿಮಾತು ಹೇಳಿದರು.
ಆರೋಗ್ಯ ಮತ್ತು ಶಿಕ್ಷಣ ಇಲಾಖೆಗೆ ಹೆಚ್ಚು ಒತ್ತು ನೀಡಲಿದ್ದು, ಈಗಾಗಲೇ ಕಾಲೇಜು ಅಭಿವೃದ್ಧಿಗೆ 1 ಕೋಟಿ ರೂ., ಹಣ ಬಿಡುಗಡೆಯಾಗಿದ್ದು, ಕಾಲೇಜು ಆವರಣದಲ್ಲಿ ಕಾಮಗಾರಿಗಳಿಗೆ ಶೀಘ್ರದಲ್ಲಿ ಭೂಮಿಪೂಜೆ ನೆರವೇರಿಸುವುದಾಗಿ ತಿಳಿಸಿದರು.
ನಿವೃತ್ತ ಪ್ರಾಧ್ಯಾಪಕಿ ಡಾ.ಎಚ್.ಎಂ.ಕಲಾಶ್ರೀ ಮಾತನಾಡಿದರು. ಕಾಲೇಜು ಅಭಿವೃದ್ಧಿ ಸಮಿತಿ ಕಾರ್ಯದರ್ಶಿ ವೈ.ಎಸ್.ಜಯಂತ್, ಕಾಲೇಜು ಪ್ರಾಂಶುಪಾಲ ಪ್ರೊ.ಬಿ.ಟಿ.ವಿಜಯ್, ಸಾಂಸ್ಕೃತಿಕ ಕ್ರೀಡಾ ಸಮಿತಿ ಸಂಚಾಲಕ ಡಾ.ಎಸ್.ಶಂಕರ್, ರೆಡ್‌ಕ್ರಾಸ್ ಸಂಚಾಲಕ ಪಿ.ಪ್ರಶಾಂತ್, ಎನ್‌ಎಸ್‌ಎಸ್ ಕಾರ್ಯಕ್ರಮಾಧಿಕಾರಿ ಡಾ.ಎಸ್.ಕಿರಣ್‌ಕುಮಾರ್, ಕ್ರೀಡಾ ಸಮಿತಿ ಸಂಚಾಲಕ ಡಾ.ಬಿ.ವಿ.ಗಣೇಶ್, ಐಕ್ಯೂಸಿ ಸಂಚಾಲಕಿ ಡಾ.ರೇಣುಕಾದೇವಿ, ಪ್ರಾಧ್ಯಾಪಕರಾದ ಸೋಮಶೇಖರ್, ಗಣೇಶ್, ನಾಗರತ್ನಾ, ವಿದ್ಯಾರ್ಥಿ ಸಂಘದ ಅಧ್ಯಕ್ಷೆ ಸಿ.ಕೆ.ಸಂಜನಾ, ಕಾರ್ಯದರ್ಶಿ ವೇದಾವತಿ, ಕಾಲೇಜು ಅಭಿವೃದ್ಧಿ ಸಮಿತಿ ಸದಸ್ಯರಾದ ತೋಟೇಗೌಡ, ಸಂಪತ್ತೇಗೌಡ, ಗೊರಗುಂಡಿಚಂದ್ರು, ಸುಧಾಕರ್ ಇನ್ನಿತರರು ಹಾಜರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net