ಬದುಕಿಗೆ ಸಂಸ್ಕಾರದ ಶಿಕ್ಷಣ ಅವಶ್ಯ

ಸರಗೂರು ತಾಲೂಕಿನ ಮುಳ್ಳೂರು ಗ್ರಾಮದಲ್ಲಿ ಹಿಂದೂ ಸಮಾವೇಶ ಕಾರ್ಯಕ್ರಮ ಉದ್ಘಾಟಿಸಿದರು.
ಸರಗೂರು ತಾಲೂಕಿನ ಮುಳ್ಳೂರು ಗ್ರಾಮದಲ್ಲಿ ಹಿಂದೂ ಸಮಾವೇಶ ಕಾರ್ಯಕ್ರಮ ಉದ್ಘಾಟಿಸಿದರು.
Published on

ಪ್ರಮುಖ ಮುಖ್ಯಾಂಶಗಳು

  • ಹಂಚೀಪುರ ಮಠದ ಕಿರಿಯಶ್ರೀ ತೋಂಟದಾರ್ಯ ಸ್ವಾಮೀಜಿ ಹೇಳಿಕೆ
ಸರಗೂರು : ಧರ್ಮದ ಉಳಿವಿಗಾಗಿ ಯುವಪೀಳಿಗೆ ಶ್ರಮಿಸುವ ಅಗತ್ಯ ಇದೆ ಎಂದು ಹಂಚೀಪುರ ಮಠದ ಕಿರಿಯಶ್ರೀ ತೋಂಟದಾರ್ಯ ಸ್ವಾಮೀಜಿ ತಿಳಿಸಿದರು.
ತಾಲೂಕಿನ ಮುಳ್ಳೂರು ಗ್ರಾಮದಲ್ಲಿ ಭಾನುವಾರ ಆಯೋಜಿಸಿದ್ದ ಹಿಂದೂ ಸಮಾವೇಶದಲ್ಲಿ ಮಾತನಾಡಿ, ಭಾರತ ಜಗತ್ತಿನಲ್ಲಿಯೇ ಹೆಚ್ಚು ಜನಸಂಖ್ಯೆ ಹಾಗೂ ಅತ್ಯುತ್ತಮ ಭೂ ಪ್ರದೇಶ ಹೊಂದಿದ ರಾಷ್ಟ್ರವಾಗಿದೆ. ಹಿಂದೂಗಳು ಆಗದಿದ್ದರೆ ಮತ್ತೆ ಆಕ್ರಮಣ ನಡೆಯಬಹುದು. ನಮ್ಮದು ಸೋಲಿನ ಇತಿಹಾಸವಲ್ಲ. ಸಂಘರ್ಷದ ಇತಿಹಾಸ, ಹಿಂದೂ ಸಮಾಜದ ಜಾಗೃತಿಗಾಗಿ ನಾಡಿನೆಲ್ಲೆಡೆ ಹಿಂದೂ ಸಂಗಮ ಕಾರ್ಯಕ್ರಮ ನಡೆಸಲಾಗುತ್ತಿದೆ ಎಂದರು.
ಭಾರತೀಯ ಸನಾತನ ಪರಂಪರೆಯಲ್ಲಿ ಯಾರೂ ಬಿಟ್ಟಿ ಭಾಗ್ಯಗಳನ್ನು ನಂಬಿದವರಲ್ಲ. ನಿರಂತರ ಶ್ರಮಪಟ್ಟು ಇಲ್ಲಿನ ರೈತರು ಕೂಲಿ ಕಾರ್ಮಿಕರು ತನ್ನ ಬದುಕು ಕಟ್ಟಿಕೊಂಡಿದ್ದರು. ಇಂಗ್ಲಿಷ್ ಮೆಕಾಲೆ ಶಿಕ್ಷಣ ಪದ್ಧತಿ ಬಂದು ಸನಾತನ ಶಿಕ್ಷಣ ಪದ್ಧತಿ ದೂರವಾದ ಪರಿಣಾಮ ಪರಕೀಯರ ಆಳ್ವಿಕೆ ನಮ್ಮನ್ನು ಮತ್ತಷ್ಟು ಅತಿಕ್ರಮಿಸಿದೆ. ಇಂದು ಕೇವಲ ಆರ್ಥಿಕ ಬದುಕಿನ ಶಿಕ್ಷಣವನ್ನು ನಾವು ಪಡೆಯುತ್ತಿದ್ದು ಬದುಕಿನ ಸಂಸ್ಕಾರದ ಶಿಕ್ಷಣ ಪಡೆಯುವ ಅವಶ್ಯಕತೆ ಇದೆ ಎಂದರು.
ತಾಲೂಕು ಪಂಚಾಯಿತಿ ಮಾಜಿ ಅಧ್ಯಕ್ಷ ರವಿಕುಮಾರ್ ಮಾತನಾಡಿ, ಹಿಂದೂ ಸಂಗಮ ಇದೊಂದು ಜಾಗೃತಿಯ ಸಮಾವೇಶ. ಯುಗಾದಿ-ಶಿವರಾತ್ರಿ ಇವೆಲ್ಲವನ್ನು ಒಳಗೊಂಡ ಮೂಲವೇ ಹಿಂದೂ ಸಂಸ್ಕೃತಿ. ಪ್ರಪಂಚದ ಸನಾತನ ಹಿಂದೂ ಧರ್ಮ, ರಾಮಾಯಣ ಮಹಾಭಾರತ, ಉಪನಿಷತ್ತು, ಹಿಂದೂ ಧರ್ಮದ ಬೇರುಗಳು. ಪ್ರಪಂಚದ ಎಲ್ಲ ದೇಶಗಳು ಭಾರತವನ್ನು ಹಿಂದೂಸ್ಥಾನ ಎಂದು ಕರೆಯುತ್ತವೆ. ಹಿಂದೂಗಳು ಎಂದಿಗೂ ವಿಭಜನೆಯಾಗಬಾರದೆಂದು ಭಜನೆ, ದೇವರ ಧ್ಯಾನವನ್ನು ನಮ್ಮ ಪೂರ್ವಜರು ಮಾಡುತ್ತಿದ್ದರು ಎಂದರು.
ಸಾವಿರಾರು ವರ್ಷಗಳ ಹಿಂದಿನ ಸಿಂಧೂ ಬಯಲಿನ ನಾಗರಿಕತೆ, ಹರಪ್ಪ ಮೊಹೆಂಜೋದಾರೋ, ನಳಂದ, ಬನಾರಸ್‌ಗಳ ಕಾಲದಲ್ಲಿಯೂ ಹಿಂದೂ ಸಂಸ್ಕೃತಿ ಅನಾವರಣಗೊಂಡಿದೆ. ಬಾಂಗ್ಲಾ, ಪಾಕಿಸ್ತಾನ, ಅಫ್ಘಾನಿಸ್ತಾನ, ಚೈನಾ, ಶ್ರೀಲಂಕಾ ದೇಶಗಳು ಇಂದಿಗೂ ನೆಮ್ಮದಿಯಾಗಿಲ್ಲ. ಪ್ರಸ್ತುತ ಜಾತೀಯತೆ ಹೋಗಲಾಡಿಸಲು ಅಂತರಜಾತಿ ವಿವಾಹ ಮಾಡಿಸುವ ಅವಶ್ಯಕತೆ ಇದೆ ಎಂದರು.
 ಸಂಘದ ಮೈಸೂರು ವಿಭಾಗ ಕಾರ್ಯವಾಹ ಮಹೇಶ್, ತಾಪಂ ಮಾಜಿ ಅಧ್ಯಕ್ಷ ಸಿ.ಕೆ.ಗಿರೀಶ್, ಪುಟ್ಟಸ್ವಾಮಿ, ಮುಳ್ಳೂರು ಮತ್ತು ಸುತ್ತಮುತ್ತಲಿನ ಗ್ರಾಮಗಳಿಂದ ಗ್ರಾಮದ ಯಜಮಾನರು, ರಾಜಕೀಯ ಮುಖಂಡರು, ತಾಯಂದಿರು ಮತ್ತು ಮಕ್ಕಳು ಉಪಸ್ಥಿತರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net