ದಾಕ್ಷಾಯಿಣಿ ಅವರು ಪ್ರತಿನಿತ್ಯ ಶಾಲೆಯಿಂದ ಮೊಮ್ಮಕ್ಕಳನ್ನು ಕರೆದುಕೊಂಡು ಬರುತ್ತಿದ್ದರು. ಸೋಮವಾರ ಮಕ್ಕಳನ್ನು ಕರೆದುಕೊಂಡು ಬಾರದ ಹಿನ್ನೆಲೆ ಶಾಲೆಯಿಂದ ಮಗ ಗಿರೀಶ್‌ಗೆ ಕರೆ ಬಂದಿದ್ದು, ತಕ್ಷಣವೇ ತಾಯಿಯ ನಂಬರ್‌ಗೆ ಕರೆ ಮಾಡಿದ್ದಾರೆ. ಆದರೆ ತಾಯಿ ಕರೆ ಸ್ವೀಕರಿಸದಿದ್ದಾಗ ಮನೆಗೆ ಬಂದು ನೋಡಿದಾಗಲೂ ಕಾಣಿಸಲಿಲ್ಲ. ಎಷ್ಟು ಹೊತ್ತಾದರೂ ತಾಯಿಯವರು ಕಣ್ಣಿಗೆ ಬೀಳದ ಹಿನ್ನೆಲೆ ಮೇಲಿನ ಮಹಡಿಗೆ ತೆರಳಿ ಪರಿಶೀಲಿಸಿದಾಗ ಕೃತ್ಯ ಬೆಳಕಿಗೆ ಬಂದಿದೆ. ರಕ್ತದ ಮಡುವಿನಲ್ಲಿ ಬಿದ್ದಿದ್ದ ತಾಯಿಯನ್ನು ಮೈಸೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಸಾವು ಬದುಕಿನ ನಡುವೆ ಹೋರಾಟ ನಡೆಸುತ್ತಿದ್ದಾರೆ.