ಗಾಂಜಾ ನಶೆಯಲ್ಲಿ ದುರ್ವರ್ತನೆ

ಕ್ರೈಮ್
ಕ್ರೈಮ್
Published on
ಮೈಸೂರು: ಗಾಂಜಾ ನಶೆಯಲ್ಲಿ ದುರ್ವರ್ತನೆ ತೋರಿದ ವ್ಯಕ್ತಿ ವಿರುದ್ಧ ದೇವರಾಜ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮೈಸೂರಿನ ದತ್ತನಗರದ ಮಂಜುನಾಥ (50) ಗಾಂಜಾ ಸೇವಿಸಿ ಸಾರ್ವಜನಿಕ ಸ್ಥಳದಲ್ಲಿ ದುರ್ವರ್ತನೆಯಿಂದ ನಡೆದುಕೊಂಡವ. ಮೈಸೂರು ಅರಮನೆ ವರಹಾ ದ್ವಾರದ ಬಳಿ ಬುಧವಾರ ಈತ ಗಾಂಜಾ ನಶೆಯಲ್ಲಿ ಸಾರ್ವಜನಿಕರಿಗೆ ತೊಂದರೆ ಕೊಡುತ್ತಿದ್ದಾಗ ಪೊಲೀಸರ ಕೈಗೆ ಸಿಕ್ಕಿಬಿದ್ದಾನೆ.
ಈತನನ್ನು ಪೊಲೀಸರು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿದಾಗ ಬೀಡಿಯಲ್ಲಿ ಹಾಕಿಕೊಂಡು ಗಾಂಜಾ ಸೇವನೆ ಮಾಡಿರುವುದು ದೃಢಪಟ್ಟಿದೆ. ಪ್ರಕರಣ ದಾಖಲಿಸಿರುವ ಪೊಲೀಸರು, ಈತನಿಗೆ ಗಾಂಜಾ ದೊರೆತ ಬಗ್ಗೆ ತನಿಖೆ ಆರಂಭಿಸಿದ್ದಾರೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net