2025ರ ಮೇ ತಿಂಗಳಿನಲ್ಲಿ ಅಂಚೆ ಸಹಾಯಕ ದೀಪಕ್ ಕಚೇರಿಗೆ ರಜೆ ಹಾಕಿದ್ದ ಸಂದರ್ಭ ಗ್ರಾಹಕರೊಬ್ಬರು ಹಣ ಪಡೆಯಲು ಬಂದ ಸಂದರ್ಭ ಇವರು ನಡೆಸಿದ ಅಕ್ರಮ ಬಯಲಿಗೆ ಬಂತು. ಆ ನಂತರ ಸಾರ್ವಜನಿಕರು ತಮ್ಮ ಹಣ ಹಿಂತಿರುಗಿಸುವಂತೆ ಒತ್ತಾಯಿಸಿ ಅಂಚೆ ಕಚೇರಿಯ ಎದುರು ಸಾಕಷ್ಟು ಹೋರಾಟ ನಡೆಸಿದ್ದರು. ಇದರ ಪರಿಣಾಮ ದೀಪಕ್ ಹಾಗೂ ಕಾರಯ್ಯ ಅವರನ್ನು ಅಂಚೆ ಇಲಾಖೆಯು ಅಮಾನತುಗೊಳಿಸಿ ಪ್ರಕರಣವನ್ನು ಸಿಬಿಐಗೆ ವಹಿಸಲಾಗಿತ್ತು. ಬಿಎನ್‌ಎಸ್ ಮತ್ತು ಭ್ರಷ್ಟಾಚಾರ ತಡೆ ಕಾಯ್ದೆಯಡಿ ಕ್ರಿಮಿನಲ್ ಪಿತೂರಿ, ವಂಚನೆ, ವಿಶ್ವಾಸ ದ್ರೋಹ ಹಾಗೂ ನಕಲಿ ದಾಖಲೆಗಳ ಸೃಷ್ಟಿಗೆ ಸಂಬಂಧಿಸಿದಂತೆ ಇವರಿಬ್ಬರ ಮೇಲೆ ಮಾರ್ಚ್ ತಿಂಗಳಿನಲ್ಲಿ ದೂರು ದಾಖಲಾಗಿತ್ತು.