ಯೋಜನೆಗಳ ವಿರುದ್ಧ ಜಾಗೃತಿ ಮೂಡಿಸಲು ಸಭೆ

 ತಿ.ನರಸೀಪುರ ಪಟ್ಟಣದ ಅಂಬೇಡ್ಕರ್ ಸಮುದಾಯ ಭವನದಲ್ಲಿ ಕರೆಯಲಾಗಿದ್ದ ದಲಿತ ಸಂಘರ್ಷ ಸಮಿತಿಯ ಜಿಲ್ಲಾ ಕಾರ್ಯಕಾರಿ ಸಮಿತಿಯ ಸಭೆಯಲ್ಲಿ ಬೆಟ್ಟಯ್ಯಕೋಟೆ, ಆಲಗೂಡು ಶಿವಕುಮಾರ್, ಶಂಭುಲಿಗಸ್ವಾಮಿ, ಹೆಗ್ಗನೂರು ನಿಂಗರಾಜು, ಬಿ.ಡಿ. ಶಿವಬುದ್ದಿ ಇತರರು ಇದ್ದರು.
ತಿ.ನರಸೀಪುರ ಪಟ್ಟಣದ ಅಂಬೇಡ್ಕರ್ ಸಮುದಾಯ ಭವನದಲ್ಲಿ ಕರೆಯಲಾಗಿದ್ದ ದಲಿತ ಸಂಘರ್ಷ ಸಮಿತಿಯ ಜಿಲ್ಲಾ ಕಾರ್ಯಕಾರಿ ಸಮಿತಿಯ ಸಭೆಯಲ್ಲಿ ಬೆಟ್ಟಯ್ಯಕೋಟೆ, ಆಲಗೂಡು ಶಿವಕುಮಾರ್, ಶಂಭುಲಿಗಸ್ವಾಮಿ, ಹೆಗ್ಗನೂರು ನಿಂಗರಾಜು, ಬಿ.ಡಿ. ಶಿವಬುದ್ದಿ ಇತರರು ಇದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ದಲಿತ ಸಂಘರ್ಷ ಸಮಿತಿ, ಮೈಸೂರು ಜಿಲ್ಲಾ ಸಮಿತಿಗಳು ಭಾಗಿ
ತಿ.ನರಸೀಪುರ : ಬಡವರು ಮತ್ತು ಮಧ್ಯಮ ವರ್ಗದ ಜನರ ವಿರೋಧಿಯಾಗಿರುವ ಕೇಂದ್ರ ಸರ್ಕಾರದ ಎಸ್‌ಐಆರ್ ಕಾಯ್ದೆ ಮತ್ತು ವಿಬಿಜಿ ರಾಮ್ ಜಿ ಯೋಜನೆ ವಿರುದ್ಧ ಜಿಲ್ಲಾ ಮಟ್ಟದಲ್ಲಿ ಜಾಗೃತಿ ಮೂಡಿಸಲು ಪಟ್ಟಣದ ಡಾ.ಬಿ.ಆರ್. ಅಂಬೇಡ್ಕರ್ ಸಮುದಾಯ ಭವನದಲ್ಲಿ ಮಂಗಳವಾರ ಕರೆಯಲಾಗಿದ್ದ ದಲಿತ ಸಂಘರ್ಷ ಸಮಿತಿ, ಮೈಸೂರು ಜಿಲ್ಲಾ ಸಮಿತಿ ಕಾರ್ಯಕಾರಿ ಸಭೆಯಲ್ಲಿ ನಿರ್ಧರಿಸಲಾಯಿತು.
ಹಿರಿಯ ಜಿಲ್ಲಾ ಸಂಚಾಲಕ ಬೆಟ್ಟಯ್ಯಕೋಟೆ ಅಧ್ಯಕ್ಷತೆಯಲ್ಲಿ ಆಯೋಜಿಸಿದ್ದ ಸಭೆಯಲ್ಲಿ ಕೇಂದ್ರ ಸರ್ಕಾರದ ಜನವಿರೋಧಿ ಕಾರ್ಯಕ್ರಮಗಳಾದ ಎಸ್‌ಐಆರ್ ಮತ್ತು ವಿಬಿ ಜಿ ರಾಮ್ ಜಿ ಯೋಜನೆ ವಿರುದ್ಧ ಜಿಲ್ಲಾ ಮಟ್ಟದ ಜಾಗೃತಿ ಕಾರ್ಯಕ್ರಮವನ್ನು ಮೈಸೂರಿನಲ್ಲಿ ಸಮಾನ ಮನಷ್ಕ ಪ್ರಗತಿಪರ ಸಂಘಟನೆಗಳ ಜತೆ ಆಯೋಜಿಸಲು ನಿರ್ಣಯ ಕೈಗೊಳ್ಳಲಾಯಿತು.
ಜಿಲ್ಲೆಯಲ್ಲಿ ಸಂಘಟನೆಯನ್ನು ಬಲಪಡಿಸುವ ಸಲುವಾಗಿ ತಾಲೂಕುಗಳಲ್ಲಿ ಕಾರ್ಯಕಾರಿ ಸಮಿತಿ ಸಭೆಗಳು ಆಗಿಲ್ಲವೊ ಅಂತಹ ತಾಲೂಕುಗಳಲ್ಲಿ ಕಾರ್ಯಕಾರಿ ಸಭೆ ಕರಿದು ನೂತನ ಪದಾಧಿಕಾರಿಗಳ ನೇಮಕ ಮಾಡಲು ಸೂಚಿಸಲಾಯಿತು. ಎಲ್ಲ ತಾಲೂಕುಗಳಲ್ಲಿರುವ ಗಂಭೀರವಾದ ಭೂ ಸಮಸ್ಯೆಗಳು, ದಲಿತರು ಮತ್ತು ಬಡಜನರ ಕುರಿತಾದ ಸಮಸ್ಯೆಗಳನ್ನು ಎರಡು ದಿನದ ಒಳಗೆ ಪಟ್ಟಿ ಮಾಡಿ, ಅಂತಹ ಸಮಸ್ಯೆಗಳ ಬಗ್ಗೆ ಜಿಲ್ಲಾ ಉಸ್ತುವಾರಿ ಸಚಿವರಿಗೆ ತಿಳಿಸಿ. ಆ ಮೂಲಕ ಜಿಲ್ಲಾಡಳಿತ ಮತ್ತು ಸರ್ಕಾರದ ಜತೆ ಮಾತನಾಡಿ ಸಮಸ್ಯೆಗಳ ಪರಿಹಾರಕ್ಕೆ ಪ್ರಯತ್ನಿಸಲು ನಿರ್ಣಯಿಸಲಾಯಿತು.
ದಸಂಸ ಜಿಲ್ಲಾ ಸಂಚಾಲಕ ಆಲಗೂಡು ಶಿವಕುಮಾರ್, ಜಿಲ್ಲಾ ಸಂಘಟನಾ ಸಂಚಾಲಕರಾದ ಶಂಭುಲಿಗಸ್ವಾಮಿ, ಹೆಗ್ಗನೂರು ನಿಂಗರಾಜು, ಖಜಾಂಚಿ ಬಿ.ಡಿ. ಶಿವಬುದ್ದಿ, ಉಪ ವಿಭಾಗೀಯ ಸಂಚಾಲಕರಾದ ಮಂಜು ಶಂಕರಪುರ, ಗೌರಿಪುರ ವೆಂಕಟೇಶ್, ಕೃಷ್ಣಮೂರ್ತಿ ಬಸವಟ್ಟಿಗೆ, ತಾಲೂಕು ಸಂಚಾಲಕರಾದ ಹೊಮ್ಮರಗಳ್ಳಿ ಸಿದ್ದರಾಜು, ಯಾಚೇನಹಳ್ಳಿ ಸೋಮಶೇಖರ್, ಮುತ್ತು ಉಯ್ಯಂಬಳ್ಳಿ, ಮಲಾರ ಮಹೇಶ್,ಅತ್ತಿಕುಪ್ಪೆರಾಮಕೃಷ್ಣ, ಸಿದ್ದೇಶ್, ಸಿದ್ದೇಗೌಡನಹುಂಡಿ ಸುರೇಶ್, ಕುಪ್ಪೇಗಾಲಸೋಮಣ್ಣ, ಆಲಗೂಡು ನಾಗರಾಜ್ ಮೂರ್ತಿ, ಕಿರಗಸೂರುರಜನಿ, ಬನ್ನಹಳ್ಳಿಹುಂಡಿ ಉಮೇಶ್, ಕರೋಹಟ್ಟಿನಾಗೇಶ್, ಮಹದೇವ, ಲಕ್ಷಣ್, ದಾಸಯ್ಯಹೊಳೆಹುಂಡಿ, ಶಿರಮಳ್ಳಿ ರಾಜಶೇಖರ್, ಕಾಳಸ್ವಾಮಿ, ಪುಟ್ಟಯ್ಯ, ಅಂಕಯ್ಯ, ಶಿವರಾಜು, ಹೊಳೆಯಪ್ಪ, ಮರಿಸ್ವಾಮಿ, ಜಯಮಲ್ಲೇಶ, ಶಿವಮೂರ್ತಿ ಇತರರು ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net