ಶ್ರೀರಾಮ ಸಕ್ಕರೆ ಕಾರ್ಖಾನೆ ಆರಂಭಕ್ಕೆ ಸಭೆ

 ಮಿರ್ಲೆ ಗ್ರಾಮದಲ್ಲಿ ಒಂದು ಕೋಟಿ ರೂ. ಅನುದಾನದಲ್ಲಿ ರಸ್ತೆ ಮತ್ತು ಚರಂಡಿ ಅಭಿವೃದ್ಧಿ ಕಾಮಗಾರಿ ಶಾಸಕ ರವಿಶಂಕರ್ ಚಾಲನೆ ನೀಡಿದರು. ನಂದೀಶ್, ಹರೀಶ್ ಕೃಷ್ಣಶೆಟ್ಟಿ, ಆನಂದ್ ಇತರರು ಇದ್ದರು.
ಮಿರ್ಲೆ ಗ್ರಾಮದಲ್ಲಿ ಒಂದು ಕೋಟಿ ರೂ. ಅನುದಾನದಲ್ಲಿ ರಸ್ತೆ ಮತ್ತು ಚರಂಡಿ ಅಭಿವೃದ್ಧಿ ಕಾಮಗಾರಿ ಶಾಸಕ ರವಿಶಂಕರ್ ಚಾಲನೆ ನೀಡಿದರು. ನಂದೀಶ್, ಹರೀಶ್ ಕೃಷ್ಣಶೆಟ್ಟಿ, ಆನಂದ್ ಇತರರು ಇದ್ದರು.
Published on
ಸಾಲಿಗ್ರಾಮ : ಶೀಘ್ರದಲ್ಲೇ ಸಕ್ಕರೆ ಸಚಿವರು ಮತ್ತು ಕಾರ್ಖಾನೆ ಗುತ್ತಿಗೆದಾರ ಮುರುಗೇಶ್ ನಿರಾಣಿ ಹಾಗೂ ರೈತರೊಂದಿಗೆ ಚುಂಚನಕಟ್ಟೆ ಶ್ರೀರಾಮ ಸಕ್ಕರೆ ಕಾರ್ಖಾನೆ ಸಮಸ್ಯೆ ಮತ್ತು ಪ್ರಾರಂಭದ ಬಗ್ಗೆ ಸಭೆ ನಡೆಸಲಾಗುವುದು ಎಂದು ಶಾಸಕ ಡಿ .ರವಿಶಂಕರ್ ಮಾಹಿತಿ ನೀಡಿದರು.
ಮಿರ್ಲೆ ಗ್ರಾಮದಲ್ಲಿ ಒಂದು ಕೋಟಿ ವೆಚ್ಚದ ಕಾಂಕ್ರೀಟ್ ರಸ್ತೆ ಮತ್ತು ಚರಂಡಿ ಕಾಮಗಾರಿಗೆ ಚಾಲನೆ ನೀಡಿ ಮಾತನಾಡಿದರು.
ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ನೇತೃತ್ವದ ಕಾಂಗ್ರೆಸ್ ಸರ್ಕಾರದಲ್ಲಿ ಪ್ರತಿ ಶಾಸಕರಿಗೆ ಮೊದಲ ಹಂತದಲ್ಲಿ 25 ಕೋಟಿ ರೂ. ಅನುದಾನವನ್ನು ಕೊಟ್ಟಿದ್ದರು. ಆ ಅನುದಾನದಲ್ಲಿ ಪ್ರತಿ ಗ್ರಾಮಗಳಿಗೂ ಅನುದಾನ ಕೊಟ್ಟಂತೆ ಮಿರ್ಲೆಗೂ ಪಂಚಾಯಿತ್ ರಾಜ್ ಇಲಾಖೆಯಡಿ ಒಂದು ಕೋಟಿ ರೂ. ಅನುದಾನವನ್ನು ನೀಡಿದ್ದೇನೆ. ಜನರಿಗೆ ತುಂಬಾ ತೊಂದರೆ ಆಗುತ್ತಿರುವ ರಸ್ತೆ ಇದಾಗಿದ್ದು, ಈ ರಸ್ತೆಗೆ ಅನುದಾನ ನೀಡಿ ಕಾಮಗಾರಿಗೆ ಇಂದು ಚಾಲನೆ ನೀಡುತ್ತಿದ್ದೇವೆ. ನಿಮ್ಮೆಲ್ಲರ ಪ್ರೀತಿ ವಿಶ್ವಾಸ ಮತ್ತು ಕೃತಜ್ಞತೆ ಎಲ್ಲವೂ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹಾಗೂ ಪಂಚಾಯತ್ ರಾಜ್ ಗ್ರಾಮೀಣ ಅಭಿವೃದ್ಧಿ ಸಚಿವರಿಗೆ ಸಲ್ಲುತ್ತದೆ ಎಂದರು.
ಗ್ರಾಮದ ಹೃದಯ ಭಾಗವಾಗಿರುವ ಕೆಂಪೇಗೌಡರ ಮನೆಯಿಂದ ಕಾಲೇಜುವರೆಗೆ ಸುಮಾರು 600ಕ್ಕೂ ಹೆಚ್ಚು ಮೀ. ಉದ್ದದ ರಸ್ತೆ ಮತ್ತು ಚರಂಡಿ ನಿರ್ಮಾಣವಾಗುತ್ತಿದ್ದು, ಇಲ್ಲಿಯ ಗ್ರಾಮಸ್ಥರು ಗುಣಮಟ್ಟದೊಂದಿಗೆ ಅಚ್ಚುಕಟ್ಟಾಗಿ ಕೆಲಸ ಮಾಡಿಸಿಕೊಳ್ಳಬೇಕಾಗಿದೆ. ಜತೆಗೆ ಸುರಕ್ಷಿತ ರಸ್ತೆ ನಿರ್ಮಾಣವಾಗಲು ರಸ್ತೆಯ ಪಕ್ಕದಲ್ಲಿ ಬರುವ ಮನೆಯ ಮಾಲೀಕರು ಸಹಕಾರ ನೀಡಬೇಕು ಎಂದು ಮನವಿ ಮಾಡಿದರು.
ಈಗಾಗಲೇ ಗ್ರಾಮ ದೇವತೆ ಹುಣಸಮ್ಮ ದೇವಸ್ಥಾನ ಸುತ್ತ ಜಾತ್ರೆಯಲ್ಲಿ ಸಿಡಿ ಮತ್ತು ತೇರುಗಳು ಹರಿದುಬರಲು ರಸ್ತೆ ಅಭಿವೃದ್ಧಿಗೆ ಅನುಕೂಲವಾಗಲಿ ಎಂದು 30 ಲಕ್ಷ ರೂ. ಅನುದಾನ ನೀಡಲಾಗಿದೆ. ಜತೆಗೆ ಕೋದಂಡರಾಮ ದೇವಸ್ಥಾನ, ವಿರೂಪಕ್ಷಸ್ವಾಮಿ, ಸಣ್ಣಮಠ ಅಭಿವೃದ್ಧಿ ಮಾಡಿಸುವಂತೆ ಬೇಡಿಕೆ ಇಟ್ಟಿದ್ದಿರಿ. ಅತಿ ಶೀಘ್ರದಲ್ಲೇ ಅವುಗಳ ಅಭಿವೃದ್ಧಿಗೂ ಅನುದಾನ ಬಿಡುಗಡೆ ಮಾಡಲಾಗುವುದು ಎಂದು ಭರವಸೆ ನೀಡಿದರು.
ಕಾಂಗ್ರೆಸ್ ಹಿರಿಯ ಕಾರ್ಯದರ್ಶಿ ಮಿರ್ಲೆ ನಂದೀಶ್ ಮಾತನಾಡಿದರು.
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಂ.ಎಸ್.ಮಹದೇವ್,ನಗರ ಕಾಂಗ್ರೆಸ್ ಅಧ್ಯಕ್ಷ ಪ್ರಭಾಕರ್, ರಮೇಶ್, ವಕ್ತಾರ ಸೈಯದ್ ಜಾಬೀರ್, ಕಾಂಗ್ರೆಸ್ ಜಿಲ್ಲಾ ಹಿರಿಯ ಕಾರ್ಯದರ್ಶಿ ನಂದೀಶ್, ತಾಪಂ ಮಾಜಿ ಅಧ್ಯಕ್ಷ ಚಂದು, ಸಣ್ಣರಾಮೇಗೌಡ, ನಿವೃತ್ತ ಶಿಕ್ಷಕ ವಿಶ್ವನಾಥ್, ಮಾಜಿ ಗ್ರಾಪಂ ಸದಸ್ಯ ಹರೀಶ್, ಹೇಮಂತ್, ಬಿಇಒ ಕೃಷ್ಣಪ್ಪ,ಉಪತಹಸೀಲ್ದಾರ್ ಮಹೇಶ್, ಪಂಚಾಯತ್ ರಾಜ್ ಇಲಾಖೆ ಎಇಇ ಆನಂದ್, ಎಇ ಕೃಷ್ಣಮೂರ್ತಿ, ಹೇಮಂತ್, ಕೃಷ್ಣಶೆಟ್ಟಿ, ಕಾಂತರಾಜ್, ರಘು, ಚಂದ್ರಹಾಸ, ಶಾಕುಂತಲಾ, ದಿನೇಶ್, ದೀಪಕ್, ಚೈತ್ರ, ಜಯರಾಮಶೆಟ್ಟಿ, ಪ್ರಜ್ವಲ್, ಪಾಪಣೆ. ಶಾಸಕರ ಆಪ್ತ ಕಾರ್ಯದರ್ಶಿ ನವೀನ್, ಮೇಲೂರು ಮಧು, ಪುನೀತ್, ಬೈರೇಶ್, ಗಂಧನಹಳ್ಳಿ ಯಶ್ವಂತ್ ಇತರರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net