ಜ್ಞಾನ, ಪ್ರಾಮಾಣಿಕತೆ, ಶಿಸ್ತು, ನಿರಂತರ ಕಲಿಕೆ ಇರಲಿ

ನಗರದ ಜ್ಞಾನಭವನದಲ್ಲಿ ಪ್ರವರ್ತನ ಇನ್‌ಸ್ಟಿಟ್ಯೂಟ್‌ನ ಪದವಿ ಪ್ರದಾನ ಸಮಾರಂಭ ಆಯೋಜಿಸಲಾಗಿತ್ತು. ಡಾ.ಎಂ.ಪುಟ್ಟಸ್ವಾಮಿಗೌಡ, ಪ್ರೊ.ಎಂ.ಆರ್.ಗಂಗಾಧರಯ್ಯ, ಪ್ರೊ.ಎಸ್.ಎನ್. ರಾಮೇಗೌಡ, ಮಧು ಜಿ. ಮಾದೇಗೌಡ, ಎಸ್.ವಿ. ಕುಮಾರ್ ಇದ್ದರು.
ನಗರದ ಜ್ಞಾನಭವನದಲ್ಲಿ ಪ್ರವರ್ತನ ಇನ್‌ಸ್ಟಿಟ್ಯೂಟ್‌ನ ಪದವಿ ಪ್ರದಾನ ಸಮಾರಂಭ ಆಯೋಜಿಸಲಾಗಿತ್ತು. ಡಾ.ಎಂ.ಪುಟ್ಟಸ್ವಾಮಿಗೌಡ, ಪ್ರೊ.ಎಂ.ಆರ್.ಗಂಗಾಧರಯ್ಯ, ಪ್ರೊ.ಎಸ್.ಎನ್. ರಾಮೇಗೌಡ, ಮಧು ಜಿ. ಮಾದೇಗೌಡ, ಎಸ್.ವಿ. ಕುಮಾರ್ ಇದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಡಾ.ಎಂ.ಪುಟ್ಟಸ್ವಾಮಿ ಗೌಡ ಕಿವಿಮಾತು ಪದವಿ ಪ್ರದಾನ ಸಮಾರಂಭ
ಓಂ ಶ್ರೀಚೇತನ ಟ್ರಸ್ಟ್ ಆಶ್ರಯದಲ್ಲಿ ಕಾರ್ಯನಿರ್ವಹಿಸುತ್ತಿರುವ ಪ್ರವರ್ತನ ಇನ್‌ಸ್ಟಿಟ್ಯೂಟ್ ವತಿಯಿಂದ ನಗರದ ಜ್ಞಾನಭವನ ಸಭಾಂಗಣದಲ್ಲಿ ಪದವಿ ಪ್ರದಾನ ಸಮಾರಂಭ ಆಯೋಜಿಸಲಾಗಿತ್ತು.
ಓಂ ಶ್ರೀಚೇತನ ಟ್ರಸ್ಟ್ ಅಧ್ಯಕ್ಷ ಡಾ.ಎಂ.ಪುಟ್ಟಸ್ವಾಮಿ ಗೌಡ ಮಾತನಾಡಿ, ಜ್ಞಾನ, ಪ್ರಾಮಾಣಿಕತೆ, ಶಿಸ್ತು ಹಾಗೂ ನಿರಂತರ ಕಲಿಕೆಯ ಮೂಲಕ ಸಮಾಜಕ್ಕೆ ಕೊಡುಗೆ ನೀಡುವ ಜವಾಬ್ದಾರಿಯುತ ವೃತ್ತಿಪರರಾಗಬೇಕು ಎಂದು ಪದವೀಧರರಿಗೆ ಕರೆ ನೀಡಿದರು.
ಬೆಳಗಾವಿಯ ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಎಂ.ಆರ್. ಗಂಗಾಧರಯ್ಯ ಮಾತನಾಡಿ, ಸ್ಪರ್ಧಾತ್ಮಕ ಜಗತ್ತಿನಲ್ಲಿ ನವೀನತೆ, ನಾಯಕತ್ವ ಗುಣಗಳು ಹಾಗೂ ನಿರಂತರ ಕೌಶಲಾಭಿವೃದ್ಧಿಯ ಮಹತ್ವವನ್ನು ವಿವರಿಸಿ ವಿದ್ಯಾರ್ಥಿಗಳಿಗೆ ಪ್ರೇರಣಾದಾಯಕ ಸಂದೇಶ ನೀಡಿದರು.
ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯದ ಮಾಜಿ ಕುಲಪತಿ ಹಾಗೂ ಓಂ ಶ್ರೀಚೇತನ ಟ್ರಸ್ಟ್‌ನ ಮುಖ್ಯ ಸಲಹೆಗಾರ ಪ್ರೊ. ಎಸ್.ಎನ್. ರಾಮೇಗೌಡ ಹಾಗೂ ಕರ್ನಾಟಕ ವಿಧಾನ ಪರಿಷತ್ ಸದಸ್ಯ, ಭಾರತಿ ಎಜುಕೇಷನ್ ಟ್ರಸ್ಟ್ ಅಧ್ಯಕ್ಷ ಮಧು ಜಿ. ಮಾದೇಗೌಡ ಭಾಗವಹಿಸಿ ಪದವೀಧರರಿಗೆ ಶುಭ ಹಾರೈಸಿದರು.
ಟ್ರಸ್ಟಿ ಎಸ್.ವಿ. ಕುಮಾರ್, ಟ್ರಸ್ಟಿ ಡಾ. ಕೆ.ಪಿ. ಧನಂಜಯ, ವ್ಯವಸ್ಥಾಪಕ ನಿರ್ದೇಶಕ ಮಂಜುರಾಂ, ವಿದ್ಯಾರ್ಥಿ ಕಲ್ಯಾಣ ನಿರ್ದೇಶಕಿ ಸಂಕ್ರಾಂತಿ, ಅಕಾಡೆಮಿಕ್ ನಿರ್ದೇಶಕ ಪ್ರೊ. ಎನ್. ರಾಮು, ಪ್ರವರ್ತನ ಇನ್‌ಸ್ಟಿಟ್ಯೂಟ್ ನಿರ್ದೇಶಕ ಪ್ರೊ. ಕೆ.ಪಿ. ವಾಸುದೇವ ಹಾಗೂ ಪ್ರಾಂಶುಪಾಲ ಡಾ. ರಘುನಂದನ ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net