ಲಿಂಗಾಯತ ಧರ್ಮದ ಆಶಯ ಉಸಿರಾಗಲಿ: ಸಚಿವ ಡಾ.ಮಹದೇವಪ್ಪ

ಮಹಿಳೆಯರಿಗೆ ಸಮಾನತೆಯೊಂದಿಗೆ ಆಸ್ತಿ ಹಕ್ಕು ನೀಡುವ ಹಿಂದೂ ಕೋಡ್ ಮಸೂದೆಯನ್ನು ಸಂಸತ್ತಿನಲ್ಲಿ ಸೋಲಿಸಿದವರು ಇದೀಗ ಮಹಿಳಾ ಮೀಸಲಾತಿ ಕುರಿತು ಮಾತನಾಡುತ್ತಿದ್ದಾರೆ.   ಸತಿ ಸಹಗಮನ ಪದ್ಧತಿ ಪರ ಇದ್ದ ಇದೇ ಸನಾತನವಾದಿಗಳೇ ಮಹಿಳೆಯರ ಸ್ಥಾನಮಾನದ ಬಗ್ಗೆ ಪಾಠ ಮಾಡಲು ಮುಂದಾಗಿದ್ದಾರೆ. ಇಂತಹ ಸನಾತನವಾದದ ವಿರುದ್ಧ ಹೋರಾಡಿದ ಲಿಂಗಾಯತ ಧರ್ಮದ ಆಶಯ ಉಸಿರಾಗಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್.ಸಿ.ಮಹದೇವಪ್ಪ ಹೇಳಿದರು.
ಮಹಿಳೆಯರಿಗೆ ಸಮಾನತೆಯೊಂದಿಗೆ ಆಸ್ತಿ ಹಕ್ಕು ನೀಡುವ ಹಿಂದೂ ಕೋಡ್ ಮಸೂದೆಯನ್ನು ಸಂಸತ್ತಿನಲ್ಲಿ ಸೋಲಿಸಿದವರು ಇದೀಗ ಮಹಿಳಾ ಮೀಸಲಾತಿ ಕುರಿತು ಮಾತನಾಡುತ್ತಿದ್ದಾರೆ. ಸತಿ ಸಹಗಮನ ಪದ್ಧತಿ ಪರ ಇದ್ದ ಇದೇ ಸನಾತನವಾದಿಗಳೇ ಮಹಿಳೆಯರ ಸ್ಥಾನಮಾನದ ಬಗ್ಗೆ ಪಾಠ ಮಾಡಲು ಮುಂದಾಗಿದ್ದಾರೆ. ಇಂತಹ ಸನಾತನವಾದದ ವಿರುದ್ಧ ಹೋರಾಡಿದ ಲಿಂಗಾಯತ ಧರ್ಮದ ಆಶಯ ಉಸಿರಾಗಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್.ಸಿ.ಮಹದೇವಪ್ಪ ಹೇಳಿದರು.
Published on

ಪ್ರಮುಖ ಮುಖ್ಯಾಂಶಗಳು

  • ಹಿಂದೂ ಕೋಡ್ ಮಸೂದೆ ಸೋಲಿಸಿದವರು ಇದೀಗ ಮಹಿಳಾ ಮೀಸಲಾತಿ ಕುರಿತು ಮಾತನಾಡುತ್ತಿದ್ದಾರೆ.
  • ವಚನ ಸಾಹಿತ್ಯ ಚಳವಳಿ ಮೂಲಕ ಜಾತಿ-ಧರ್ಮದ ಭೇದ ಕಳೆಯಲು ಕ್ರಾಂತಿ ನಡೆಸಿದ ಸಮಾಜ ಸುಧಾರಕ
ಮೈಸೂರು: ಮಹಿಳೆಯರಿಗೆ ಸಮಾನತೆಯೊಂದಿಗೆ ಆಸ್ತಿ ಹಕ್ಕು ನೀಡುವ ಹಿಂದೂ ಕೋಡ್ ಮಸೂದೆಯನ್ನು ಸಂಸತ್ತಿನಲ್ಲಿ ಸೋಲಿಸಿದವರು ಇದೀಗ ಮಹಿಳಾ ಮೀಸಲಾತಿ ಕುರಿತು ಮಾತನಾಡುತ್ತಿದ್ದಾರೆ. 
ಸತಿ ಸಹಗಮನ ಪದ್ಧತಿ ಪರ ಇದ್ದ ಇದೇ ಸನಾತನವಾದಿಗಳೇ ಮಹಿಳೆಯರ ಸ್ಥಾನಮಾನದ ಬಗ್ಗೆ ಪಾಠ ಮಾಡಲು ಮುಂದಾಗಿದ್ದಾರೆ. ಇಂತಹ ಸನಾತನವಾದದ ವಿರುದ್ಧ ಹೋರಾಡಿದ ಲಿಂಗಾಯತ ಧರ್ಮದ ಆಶಯ ಉಸಿರಾಗಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್.ಸಿ.ಮಹದೇವಪ್ಪ ಹೇಳಿದರು.
ಮೈಸೂರಿನ ಕಲಾಮಂದಿರದಲ್ಲಿ ಸೋಮವಾರ ಆಯೋಜಿಸಿದ್ದ ಬಸವ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದರು
ಬಸವಣ್ಣವರು ತಮ್ಮ 8ನೇ ವಯಸ್ಸಿನಲ್ಲೇ ಅಕ್ಕನಿಗೆ ಜನಿವಾರ ಹಾಕದಿದ್ದರಿಂದ ಅದು ಲಿಂಗ ತಾರತಮ್ಯವೆಂದು ಸಿಡಿದೆದ್ದರು. ಬಸವ ತತ್ವವೆಂದರೆ ಸಮಾನತೆ, ಮಾನವತಾವಾದ, ಸಮ ಸಮಾಜ ನಿರ್ಮಾಣವಾಗಿದೆ.
 ವಿಶ್ವದ ಪ್ರೇರಣ ಶಕ್ತಿಯಾದ ಅವರ ನಿಲುವು ವರ್ಣಾಶ್ರಮ ಧರ್ಮದ ವಿರುದ್ಧವಾಗಿತ್ತು. ವಚನ ಸಾಹಿತ್ಯ ಚಳವಳಿ ಮೂಲಕ ಜಾತಿ-ಧರ್ಮದ ಭೇದ ಕಳೆಯಲು ಕ್ರಾಂತಿ ನಡೆಸಿದ ಸಮಾಜ ಸುಧಾರಕ ಎಂದು ಬಣ್ಣಿಸಿದರು.
ಬುದ್ಧನ ನಂತರ ದೇಶದಲ್ಲಿ ಸಮ ಸಮಾಜ ನಿರ್ಮಾಣದ ಗುರಿ ಸಾಧಿಸಿದ್ದು ಬಸವಣ್ಣನವರು ಮಾತ್ರ. ಬಳಿಕ ಅಂಬೇಡ್ಕರ್ ಇವರ ಹಾದಿಯಲ್ಲೇ ನಡೆದರು. ಬಸವಣ್ಣ ನಾಡಿನ ಸಾಂಸ್ಕೃತಿಕ ನಾಯಕರೆಂದು ರಾಜ್ಯ ಸರ್ಕಾರ ಘೋಷಿಸಿದ್ದು, ನಮ್ಮ ನಡೆ ನುಡಿಗಳಲ್ಲಿ ಬಸವಮಯ ಆಗಬೇಕು ಎಂದರು.
ಬುದ್ಧ, ಬಸವ, ಅಂಬೇಡ್ಕರ್, ಜ್ಯೋತಿಬಾಫುಲೆ, ನಾರಾಯಣಗುರು, ಗಾಂಧೀಜಿ, ಪೆರಿಯಾರ್, ಲೋಹಿಯಾ ಅವರು ವರ್ಣಾಶ್ರಮ ಧರ್ಮದ ತಾರತಮ್ಯ ವಿರೋಧಿಸಿದರು. 800 ವರ್ಷದ ಹಿಂದೆಯೇ ಅನುಭವ ಮಂಟಪ ಸ್ಥಾಪಿಸಿ, ಜಾತಿ ಬಲವಿಲ್ಲದ ಅಲ್ಲಮಪ್ರಭು ಅವರನ್ನು ಶೂನ್ಯ ಪೀಠದ ಅಧ್ಯಕ್ಷರನ್ನಾಗಿ ಮಾಡಿ, ಯಾವುದೇ ತಾರತಮ್ಯ ಇಲ್ಲದ ಪ್ರಜಾಪ್ರಭುತ್ವವಾದಿ ಸಭೆ ನಡೆಸಿದರು. ಆದರೆ, ಈಗ ಜಾತಿ ಇಲ್ಲದವರಿಗೆ, ಮಹಿಳೆಯರಿಗೆ ಯಾರು ಅಧಿಕಾರ ಕೊಡುತ್ತಾರೆ ಎಂದು ಪ್ರಶ್ನಿಸಿದರು.
ಬುದ್ಧ-ಬಸವ-ಅಂಬೇಡ್ಕರ್ ದೊಡ್ಡ ಪ್ರಜಾಪ್ರಭುತ್ವವಾದಿಗಳು. ಅವರು ಜನರ ಜೀವನ ಮೌಲ್ಯವನ್ನು ಉನ್ನತೀಕರಿಸಿದರು. ಬಲಾಢ್ಯರು ಬಲಹೀನ ಮೇಲೆ ದಬ್ಬಾಳಿಕೆ ನಡೆಸಿದಾಗ, ಪ್ರತಿಭಟಿಸುವ ಶಕ್ತಿ ನೀಡುವ ಚೇತನರು. ಬಸವ ತತ್ವ ನಮಗೆ ಅನಿವಾರ್ಯ ಎಂದರು.
ಕನ್ನಡ ಮತ್ತು ಸಂಸ್ಕೃತಿ ಸಚಿವ ಶಿವರಾಜ್ ತಂಗಡಗಿ ಮಾತನಾಡಿ, ಕೋಮುವಾದಕ್ಕೆ ಯುವಜನರು ಬಲಿಯಾಗಿದ್ದು, ಇದನ್ನು ತಡೆಯುವ ಸಲುವಾಗಿಯೇ ಇಲಾಖೆಯು ಪ್ರತಿ ಜಿಲ್ಲೆಯಲ್ಲೂ ಬಸವ ಜಯಂತಿ ಆಚರಣೆ ಮಾಡುವ ಮೂಲಕ ಬಸವ ತತ್ವ ಪಾಲನೆಗೆ ಮುಂದಾಗಿದೆ ಎಂದು ಹೇಳಿದರು.
ಸುತ್ತೂರು ಮಠದ ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಸಂಸದ ಸುನೀಲ್ ಬೋಸ್, ಶಾಸಕರಾದ ತನ್ವೀರ್ ಸೇಠ್, ಕೆ.ಹರೀಶ್‌ಗೌಡ, ಜಿ.ಟಿ.ದೇವೇಗೌಡ, ಗಣೇಶ್‌ಪ್ರಸಾದ್, ವಿಜಯಾನಂದ ಕಾಶಪ್ಪನವರ್, ಎಂಎಲ್‌ಸಿಗಳಾದ ಡಾ.ಡಿ.ತಿಮ್ಮಯ್ಯ, ಕೆ.ಶಿವಕುಮಾರ್, ಡಾ.ಯತೀಂದ್ರ ಸಿದ್ದರಾಮಯ್ಯ, ಸಿ.ಎನ್.ಮಂಜೇಗೌಡ, ಕರ್ನಾಟಕ ಭೋವಿ ಅಭಿವೃದ್ಧಿ ನಿಗಮದ ಅಧ್ಯಕ್ಷ ಎಂ.ರಾಮಪ್ಪ, ರಾಜ್ಯ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಉಪಾಧ್ಯಕ್ಷೆ ಡಾ.ಪುಷ್ಪಾ ಅಮರನಾಥ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಕಾರ್ಯದರ್ಶಿ ಜೆ.ಮಂಜುನಾಥ್, ನಿರ್ದೇಶಕ ಬಿ.ಎಸ್.ಮಂಜುನಾಥಸ್ವಾಮಿ, ಪ್ರಾದೇಶಿಕ ಆಯುಕ್ತ ನಿತೇಶ್ ಪಾಟೀಲ, ಜಿಲ್ಲಾಧಿಕಾರಿ ಜಿ.ಲಕ್ಷ್ಮೀಕಾಂತರೆಡ್ಡಿ ಇನ್ನಿತರರು ಪಾಲ್ಗೊಂಡಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net