ನಾದಬ್ರಹ್ಮ ಸಂಗೀತಸಭಾದಲ್ಲಿ ಮಂಗಳವಾರ ಆಯೋಜಿಸಿದ್ದ ಎಂ.ಬಿ.ಅನಂತಸ್ವಾಮಿ ಸಾಂಸ್ಕೃತಿಕ ಮತ್ತು ಸೇವಾ ಟ್ರಸ್ಟ್‌ನ ನಾಲ್ಕನೇ ವಾರ್ಷಿಕೋತ್ಸವವನ್ನು ಜಯಪ್ಪ ಹೊನ್ನಾಳಿ ಉದ್ಘಾಟಿಸಿದರು. ವಿಕ್ರಂ ಅಯ್ಯಂಗಾರ್, ಅಂಶಿ ಪ್ರಸನ್ನಕುಮಾರ್, ಗೋಲ್ಡನ್ ಸುರೇಶ್, ಯಶಸ್ವಿನಿ ಲೋಕೇಶ್, ಕಾಂತರಾಜು, ದಾಸಪ್ಪ ಇತರರಿದ್ದರು.
ಸಾಧನೆ ಎಂಬುದು ಸಾಧಕನ ಸ್ವತ್ತು. ಅದು ಯಾರೊಬ್ಬರೂ ಆಸ್ತಿಯೂ ಅಲ್ಲ
ಕಲೆಯಿಂದಲೇ ಕಲಾವಿದನಿಗೆ ಬೆಲೆ
ಮೈಸೂರು: ಕಲೆ ಇರುವುದು ವಿಕಾಸಕ್ಕೆ ಹೊರತು ವಿಲಾಸಕ್ಕಲ್ಲ, ಸುಕೃತಿಗೆ ಹೊರತು ವಿಕೃತಿಗಲ್ಲ ಎಂಬುದನ್ನು ಎಂ.ಬಿ.ಅನಂತಸ್ವಾಮಿ ಅವರು ಕಲೆಯಲ್ಲಿ ಕಂಡುಕೊಂಡಿದ್ದರು ಎಂದು ಶರಣ ಸಾಹಿತ್ಯ ಪರಿಷತ್ ನಗರ ಅಧ್ಯಕ್ಷ ಜಯಪ್ಪ ಹೊನ್ನಾಳಿ ಬಣ್ಣಿಸಿದರು.
ನಗರದ ನಾದಬ್ರಹ್ಮ ಸಂಗೀತ ಸಭಾದಲ್ಲಿ ಆಯೋಜಿಸಿದ್ದ ಎಂ.ಬಿ.ಅನಂತಸ್ವಾಮಿ ಸಾಂಸ್ಕೃತಿಕ ಮತ್ತು ಸೇವಾ ಟ್ರಸ್ಟ್‌ನ 4ನೇ ವಾರ್ಷಿಕೋತ್ಸವ ಉದ್ಘಾಟಿಸಿ ಅವರು ಮಾತನಾಡಿದರು.
ಸಾಧನೆ ಎಂಬುದು ಸಾಧಕನ ಸ್ವತ್ತು. ಅದು ಯಾರೊಬ್ಬರೂ ಆಸ್ತಿಯೂ ಅಲ್ಲ. ಕಲಾವಿದನಿಗೆ ಜಾತಿ ಇಲ್ಲ. ಕಲೆಯಿಂದಲೇ ಆತನಿಗೆ ಬೆಲೆ ಎಂಬುದನ್ನು ಅನಂತಸ್ವಾಮಿ ಮನಗಂಡಿದ್ದರು. ಅದಕ್ಕಾಗಿ ಈ ಸಾಧನೆಗೆ ಪರಿಶ್ರಮ, ಪ್ರಾಮಾಣಿಕತೆ, ಕೌಶಲ, ಭಾವಕೋಶದಿಂದ ಕಲೆಯನ್ನು ಕರಗತ ಮಾಡಿಕೊಂಡಿದ್ದರು ಎಂದರು.
ಇದಕ್ಕಾಗಿ ಮೈಸೂರು ಮಹಾರಾಜದ ಮದಂಗ ಚಕ್ರವರ್ತಿ, ರಾಜ್ಯ ಸರ್ಕಾರದಿಂದ ಕರ್ನಾಟಕ ಕಲಾತಿಲಕ ಪ್ರಶಸ್ತಿಯನ್ನು ಎಂ.ಬಿ.ಅನಂತಸ್ವಾಮಿ ಪಡೆದಿದ್ದರು. ತಮ್ಮ ಪ್ರತಿಭೆಯಿಂದಲೇ ಅರಮನೆ, ಗುರುಮನೆ, ನೆರಮನೆಯಿಂದ ಸನ್ಮಾನಿತರಾಗಿ ಅಪಾರ ಹೆಸರು ಸಂಪಾದಿಸಿದ್ದರು ಎಂದರು.
ಕೆಎಂಪಿಕೆ ಚಾರಿಟಬಲ್ ಟ್ರಸ್ಟ್ ಅಧ್ಯಕ್ಷ ವಿಕ್ರಂ ಅಯ್ಯಂಗಾರ್, ಹಿರಿಯ ಪತ್ರಕರ್ತ ಅಂಶಿ ಪ್ರಸನ್ನಕುಮಾರ್, ಚನ್ನಕೇಶ್ವರ ಸ್ಕೂಲ್ ಮತ್ತು ಕಾಲೇಜಿನ ಅಧ್ಯಕ್ಷ ಯಶಸ್ವಿನಿ ಲೋಕೇಶ್, ಜಿಲ್ಲಾ ಚಿನ್ನ-ಬೆಳ್ಳಿ ಕೆಲಸಗಾರರ ಅಭಿವೃದ್ಧಿ ಸಂಘದ ಗೋಲ್ಡನ್ ಟಿ.ಸುರೇಶ್, ಬ್ರಾಹ್ಮಣ ಸಮಾಜದ ಮುಖಂಡ ಕೆ. ರಘುರಾಂ ವಾಜಪೇಯಿ ಮುಖ್ಯ ಅತಿಥಿಗಳಾಗಿದ್ದರು.
ಕರ್ನಾಟಕ ಪೊಲೀಸ್ ವಾದ್ಯ ವೃಂದದ ಆರ್.ದಾಸಪ್ಪ ಅವರನ್ನು ಸನ್ಮಾನಿಸಲಾಯಿತು.
ಟ್ರಸ್ಟ್ ಅಧ್ಯಕ್ಷ ಎ.ಕಾಂತರಾಜು ಅಧ್ಯಕ್ಷತೆ ವಹಿಸಿದ್ದರು. ಕಾರ್ಯದರ್ಶಿ ಚಂದ್ರು, ಟ್ರಸ್ಟಿನ ಖಜಾಂಚಿ ಬಿ.ಆರ್.ಜ್ಯೋತಿ, ನಿರ್ದೇಶಕರಾದ ಬಿ.ನಾಗೇಶ್, ಕೆ.ಮಂಜುನಾಥ್, ಸಿ. ಮಹದೇವ, ಎ.ಸುಗುಣ ಕಾಂತರಾಜು, ಜ್ಯೋತಿ, ಎಂ.ಎಸ್. ಲಕ್ಷ್ಮಿಕಾಂತ್ ಇತರರಿದ್ದರು.
ಹಂಸಧ್ವನಿ ಭಜನಾ ಮಂಡಳಿಯ ಭುವನೇಶ್ವರಿ ಮಂಜುನಾಥ್, ವಿದುಷಿ ಡಾ.ಎಂ.ಟಿ.ಶ್ರುತಿ ರಂಜಿನಿ ತಂಡದವರು ಸಾಂಸ್ಕೃತಿಕ ಕಾರ್ಯಕ್ರಮ ನಡೆಸಿಕೊಟ್ಟರು. ನಂತರ ವಾದ್ಯ ತ್ರಯೋ-ವೀಣಾ, ಪಿಟೀಲು, ಕೊಳಲು ಮತ್ತು ಲಯವಾದ್ಯ ವಿನ್ಯಾಸ, ಪದ್ಮಶ್ರೀ ಧನುರ್ ವೀಣಾ ಪೀಠ ತಂಡದಿಂದ ಪಿಟೀಲು ವಾದನ ನಡೆಯಿತು. ವಿದ್ವಾನ್ ಎಚ್.ಎಸ್.ತಾಂಡವಮೂರ್ತಿ ನಿರ್ದೇಶನ ಮಾಡಿದರು.