ಬನ್ನೂರಿನಲ್ಲಿ ಬೃಹತ್ ಆರೋಗ್ಯ, ರಕ್ತದಾನ ಶಿಬಿರ

Blood Camp
Blood Camp
Published on
ಬನ್ನೂರು: ಪಟ್ಟಣದಲ್ಲಿ ಜು.20ರ ಸೋಮವಾರ ಬೃಹತ್ ಆರೋಗ್ಯ ಮತ್ತು ರಕ್ತದಾನ ಶಿಬಿರವನ್ನು ಹಮ್ಮಿಕೊಂಡಿದ್ದು ಸಾರ್ವಜನಿಕರು ಈ ಶಿಬಿರದ ಅನುಕೂಲ ಪಡೆದುಕೊಳ್ಳುವಂತೆ ಡಾ.ಎಂ.ಬಿ.ಮಂಜೇಗೌಡ ಸ್ನೇಹ ಬಳಗ ಮತ್ತು ನೇಗಿಲಯೋಗಿ ಸಮಾಜಸೇವಾ ಟ್ರಸ್ಟ್ ಸದಸ್ಯರು ತಿಳಿಸಿದ್ದಾರೆ.
ಪಟ್ಟಣದ ಮಂಡ್ಯ ಮುಖ್ಯರಸ್ತೆಯ ಬಿಜಿಎಸ್ ಶಾಲೆಯ ಪಕ್ಕದಲ್ಲಿರುವ ಶ್ರೀನಿವಾಸ ಕಲ್ಯಾಣ ಮಂಟಪದಲ್ಲಿ ಅಂದು ಬೆಳಗ್ಗೆ 9.30ಕ್ಕೆ ಆಯೋಜಿಸಲಾಗಿರುವ ಶಿಬಿರದಲ್ಲಿ, ನುರಿತ ವೈದ್ಯರಿಂದ ಆರೋಗ್ಯ ಸಮಸ್ಯೆಗಳಿಗೆ ಉಚಿತವಾಗಿ ಚಿಕಿತ್ಸೆ ನೀಡುವಂತ ಕಾರ್ಯಕ್ರಮವನ್ನು ಡಾ.ಎಂ.ಬಿ. ಮಂಜೇಗೌಡ ಜನ್ಮದಿನದ ಅಂಗವಾಗಿ ಹಮ್ಮಿಕೊಂಡಿದ್ದು, ಕಾವೇರಿ ಹಾರ್ಟ್ ಮತ್ತು ಮಲಿ ್ಟಸ್ಪೆಷಾಲಿಟಿ ಆಸ್ಪತ್ರೆ, ಕೆಂಪೇಗೌಡ ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರ, ಒಕ್ಕಲಿಗರ ದಂತ ವೈದ್ಯಕೀಯ ಆಸ್ಪತ್ರೆ, ಜೆಎಸ್‌ಎಸ್ ಆಯುರ್ವೇದ ಆಸ್ಪತ್ರೆ , ಅಪೂರ್ವ ಡಯಾಬಿಟಿಸ್ ಫೌಂಡೇಷನ್, ಜಯದೇವ ಹೃದ್ರೋಗ ಆಸ್ಪತ್ರೆ, ಕೆ.ಆರ್.ಆಸ್ಪತ್ರೆ ರಕ್ತನಿಧಿ ಕೇಂದ್ರ, ಬನ್ನೂರಿನ ವೆಂಕಟೇಶ್ವರ ಕ್ಲಿನಿಕ್, ವಿಜಯ್ ಕ್ಲಿನಿಕ್, ಸ್ಕಿನ್ ಸ್ಪೆಷಲಿಸ್ಟ್, ಕುಟುಂಬ ವೈದ್ಯರ ತಂಡ ಆಗಮಿಸಿ ತಪಾಸಣೆ ಮಾಡಿ ಉಚಿತವಾಗಿ ಚಿಕಿತ್ಸೆ ನೀಡಲಾಗುತ್ತಿದ್ದು, ಸುತ್ತಮುತ್ತಲಿನ ಗ್ರಾಮಸ್ಥರು ಇದರ ಸದುಪಯೋಗ ಪಡೆದುಕೊಳ್ಳುವಂತೆ ಪ್ರಕಟಣೆ ಕೋರಿದೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net