ಮೈಸೂರಿನ ಕಾವೇರಿ ಹಾರ್ಟ್ ಮತ್ತು ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ, ಬೆಂಗಳೂರು ಕೆಂಪೇಗೌಡ ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರ, ಒಕ್ಕಲಿಗರ ಸಂಘದ ದಂತ ವೈದ್ಯಕೀಯ ಮಹಾವಿದ್ಯಾಲಯದ ಸಹಯೋಗದಲ್ಲಿ ವಿಶ್ರಾಂತ ಕುಲಪತಿ ಡಾ.ಎಂ.ವಿ.ಶೇಖರ್, ಹೃದ್ರೋಗ ತಜ್ಞ ಡಾ.ಕೆ.ಎಸ್.ಸದಾನಂದ, ರಕ್ತ ನಿಧಿ ಕೇಂದ್ರದ ಡಾ.ಕುಸುಮಾ, ಡೆಂಟಲ್ ಕ್ಲಿನಿಕ್ ಡಾ.ಎಸ್.ಡಿ.ಮೀನಾಕುಮಾರಿ, ಕುಟುಂಬ ವೈದ್ಯ ಡಾ.ತಮ್ಮಯ್ಯ, ಡಾ.ವಿಜಯಕುಮಾರ್, ಡಾ.ಶಿವಕುಮಾರ್ ಹಾಗೂ ಡಾ.ಪ್ರಕಾಶ್ ಅವರ ಮಾರ್ಗದರ್ಶನ ಮತ್ತು ಸಹಕಾರದೊಂದಿಗೆ ಆಯೋಜಿಸಿರುವ ಶಿಬಿರದಲ್ಲಿ ಸಾಮಾನ್ಯ ವೈದ್ಯಕೀಯ ತಪಾಸಣೆ ಸೇರಿದಂತೆ ಸ್ತ್ರೀರೋಗ ಮತ್ತು ಪ್ರಸೂತಿ ತಪಾಸಣೆ, ಮಕ್ಕಳ ತಪಾಸಣೆ, ಮೂಳೆ ಮತ್ತು ಸಂಧಿ ತಪಾಸಣೆ, ಕಣ್ಣಿನ ತಪಾಸಣೆ, ದಂತ ತಪಾಸಣೆ, ಕಿವಿ ಮೂಗು ಗಂಟಲು ತಪಾಸಣೆ, ಚರ್ಮರೋಗ ತಪಾಸನೆ, ಇಸಿಜಿ, ರಕ್ತದೊತ್ತಡ, ರಕ್ತದಲ್ಲಿನ ಸಕ್ಕರೆ ಪರೀಕ್ಷೆ, ಹಿಮೋಗ್ಲೋಬಿನ್ ಪರೀಕ್ಷೆ ನಡೆಸಲಾಗುವುದು ಎಂದು ಡಾ.ಎಂ.ಬಿ.ಮಂಜೇಗೌಡ ತಿಳಿಸಿದರು.