ಬ್ರಾಹ್ಮಣರು ಸಾಮೂಹಿಕವಾಗಿ ಯಜ್ಞೋ ಪವಿತ್ರಂ ಜನಿವಾರ ಬದಲಾಯಿಸಿಕೊಂಡು, ಸಂಧ್ಯಾವಂದನೆ, ಗಾಯತ್ರಿ ಜಪ ಮಾಡಿದರು. ಈ ಸಂದರ್ಭ ಮಾತನಾಡಿದ ಯೋಗ ನರಸಿಂಹ ಸ್ವಾಮಿ ದೇವಸ್ಥಾನದ ಆಡಳಿತಾಧಿಕಾರಿ ಎನ್. ಶ್ರೀೀನಿವಾಸನ್, ಹಿಂದೂ ಧರ್ಮದಲ್ಲಿ ವೇದ ಮತ್ತು ಶಾಸ್ತ್ರ ಅಧ್ಯಯನಕ್ಕೆ ಬಹಳ ಮಹತ್ವವಿದೆ. 8ನೇ ವರ್ಷಕ್ಕೆ ವಟುವಿಗೆ ಉಪನಯನ ಮಾಡಿ ಗಾಯತ್ರಿ ಮಂತ್ರ ಉಪದೇಶಿಸಿ ಗುರುಕುಲಕ್ಕೆ ಕಳಿಸುವ ಪಂಪರೆಯಿತ್ತು, ಯಜುರ್ ವೇದ ಋಗ್ವೇದ ಪ್ರಕಾರವಾಗಿ ಶಾಸ್ತ್ರಗಳನ್ನ ಪಾಲಿಸುವ ವೈದೀಕರು ತಮ್ಮ ಋಷಿಗಳಿಗೆ ಪೂಜಿಸಿ ಯಜ್ಞೋಪವೀತ ಜನಿವಾರ ಧಾರಣೆ ಮಾಡುವ ಉಪಾಕರ್ಮ್ ಧರ್ಮರಕ್ಷಣೆಯ ಪ್ರತೀಕವಾಗಿದೆ, ಸಾವಿರಾರು ವರ್ಷಗಳ ಹಿಂದೆ ಸಂವತ್ಸರಗಳ ಹಬ್ಬಗಳಲ್ಲಿ ಪಂಚಾಂಗ ನಿರ್ಣಯಿಸಿರುವಂತೆ ಮಹೂರ್ತ ಆಚರಣೆ ಪಾಲಿಸುವ ಕ್ರಮಕ್ಕೆ ಮೊದಲೇ ನಿಶ್ಚಯಿಸಿರುತ್ತದೆ ಎಂದರೆ ಸನಾತನ ಧರ್ಮದ ಶಕ್ತಿಯ ಸಂಕೇತವಾಗಿದೆ ಎಂದರು