ಕೌಶಲಾಭಿವೃದ್ಧಿಯ ಮೊದಲ ಹಂತವಾಗಿ ಪ್ರಾಥಮಿಕ ಶಿಕ್ಷಣವನ್ನು ಬಲಪಡಿಸುವ ಅಗತ್ಯವಿದೆ. ಕೌಶಲಾಧಾರಿತ ಪಠ್ಯಕ್ರಮ, ಉತ್ತಮ ಸಾಕ್ಷರತೆ, ತಾಂತ್ರಿಕ ಜ್ಞಾನ ಹಾಗೂ ಡಿಜಿಟಲ್ ಅರಿವು ಇಲ್ಲದೆ ಉನ್ನತ ಮಟ್ಟದ ತರಬೇತಿ ಸಾಧ್ಯವಿಲ್ಲ. ಕೌಶಲಾಭಿವೃದ್ಧಿ ಕಾರ್ಯಕ್ರಮಗಳು ಮಾರುಕಟ್ಟೆಯ ನಿಜವಾದ ಬೇಡಿಕೆಗಳಿಗೆ ಹೊಂದಿಕೊಳ್ಳಬೇಕು. ಸಾರ್ವಜನಿಕ-ಖಾಸಗಿ ಸಹಭಾಗಿತ್ವ ಇಂದಿನ ಪರಿಸ್ಥಿತಿಯಲ್ಲಿ ಅವಶ್ಯಕವಾಗಿದೆ. ಪಠ್ಯಕ್ರಮ ರೂಪಿಸುವಿಕೆ, ಫೆಲೋಶಿಪ್ ಕಾರ್ಯಕ್ರಮಗಳು ಮತ್ತು ಉದ್ಯೋಗಾವಕಾಶ ಕಲ್ಪಿಸುವಲ್ಲಿ ಉದ್ಯಮ ವಲಯ ಸಕ್ರಿಯ ಪಾತ್ರವಹಿಸಬೇಕು ಎಂಬ ಹೇಳಿದರು.