ಏನಿದು ಪ್ರಕಟಣೆ: ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾದ ಲೋಗೋವನ್ನು ಡಿಪಿಯಲ್ಲಿ ಹಾಕಿದ್ದ ನಂಬರ್‌ನಿಂದ ಇತ್ತೀಚೆಗೆ ವಾಟ್ಸಾಪ್ ಸಂದೇಶ ಬಂದಿದೆ. ಅದರಲ್ಲಿ ಆಪ್ ಒಂದನ್ನು ಡೌನ್ಲೋಡ್ ಮಾಡಿಕೊಂಡು ನಿಮ್ಮ ಬ್ಯಾಂಕ್ ಖಾತೆಯ ಮಾಹಿತಿ ಪಡೆಯಬಹುದು ಎಂದು ತಿಳಿಸಲಾಗಿದೆ. ಇದನ್ನು ನಂಬಿದ ಅವರು, ಎಪಿಕೆ ಫೈಲ್ ಅನ್ನು ಡೌನ್ಲೋಡ್ ಮಾಡಿಕೊಂಡಿದ್ದಾರೆ. ನಂತರ ಅವರ ಖಾತೆಯಿಂದ ಒಮ್ಮೆ 10 ಲಕ್ಷ ರೂ. ಹಾಗೂ ಮತ್ತೊಮ್ಮೆ 2,09,300 ರೂ. ಸೇರಿ ಒಟ್ಟು 12,09,300 ರೂ. ತ್ವರಿತ ಪಾವತಿ ಸೇವೆ(ಐಎಂಪಿಎಸ್) ಮೂಲಕ ಅಪರಿಚಿತ ಖಾತೆಗೆ ವರ್ಗಾವಣೆಯಾಗಿದೆ.