ಗಾಂಜಾ ಮಾರಲು ಯತ್ನಿಸುತ್ತಿದ್ದವನ ಬಂಧನ

ಬಂಧಿತ ಆರೋಪಿಯೊಂದಿಗೆ ಬೈಲುಕುಪ್ಪೆ ಪೊಲೀಸ್ ಠಾಣೆಯ ರವಿ, ಮುದ್ದುರಾಜ್, ಪ್ರಸನ್ನ ರವಿಕುಮಾರ್, ಜಾವಿದ್ ಇದ್ದರು.
ಬಂಧಿತ ಆರೋಪಿಯೊಂದಿಗೆ ಬೈಲುಕುಪ್ಪೆ ಪೊಲೀಸ್ ಠಾಣೆಯ ರವಿ, ಮುದ್ದುರಾಜ್, ಪ್ರಸನ್ನ ರವಿಕುಮಾರ್, ಜಾವಿದ್ ಇದ್ದರು.
Published on
ಬೈಲುಕುಪ್ಪೆ: ಗಾಂಜಾ ಮಾರಲು ಯತ್ನಿಸುತ್ತಿದ್ದ ಆರೋಪಿಯನ್ನು ಬೈಲುಕುಪ್ಪೆ ಠಾಣೆ ಪೊಲೀಸರು ಬುಧವಾರ ಬಂಧಿಸಿದ್ದಾರೆ.
ಪಿರಿಯಾಪಟ್ಟಣ ತಾಲೂಕು ಆಯರ ಬೀಡು ಗ್ರಾಮದ ಜಾವಿದ (50) ಬಂಧಿತ. ಆಲನಹಳ್ಳಿಯಿಂದ ಆಯರ ಬೀಡಿಗೆ ಹೋಗುವ ಮುಖ್ಯರಸ್ತೆ ಬದಿಯಲ್ಲಿ ಗಾಂಜಾ ಮಾರಾಟ ಮಾಡಲು ಯತ್ನಿಸುತ್ತಿದ್ದ ಎಂಬ ಖಚಿತ ಮಾಹಿತಿ ಮೇರೆಗೆ ವೃತ್ತ ನಿರೀಕ್ಷಕ ದೀಪಕ್, ಪಿಎಸ್‌ಐ ರವಿಕುಮಾರ್ ಮಾರ್ಗದರ್ಶನದಲ್ಲಿ ಪಿಎಸ್‌ಐ ರವಿ ಹಾಗೂ ಸಿಬ್ಬಂದಿ ಕಾರ್ಯಾಚರಣೆ ನಡೆಸಿ ಬಂಧಿಸಿದರು.
ಬಂಧಿತನಿಂದ 249 ಗ್ರಾಂ ಗಾಂಜಾ ವಶಕ್ಕೆ ಪಡೆಯಲಾಗಿದೆ. ದೂರು ದಾಖಲಿಸಿಕೊಂಡಿರುವ ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ. ಕಾರ್ಯಾಚರಣೆಯಲ್ಲಿ ಪೊಲೀಸ್ ಸಿಬ್ಬಂದಿ ಮುದ್ದುರಾಜ್, ಪ್ರಸನ್ನ, ರವಿಕುಮಾರ್, ಸ್ಥಳೀಯ ನಿವಾಸಿ ನಿಸಾರ್ ಅಹಮದ್ ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net