ಸಂಸ್ಕೃತಿ ಚಿಂತಕ ಶಂಕರ್ ದೇವನೂರು ಸಮಾರಂಭ ಉದ್ಘಾಟಿಸಿ ಮಾತನಾಡಿ, ಗುರುಗಳಾದ ಪ್ರೊ.ಮಲೆಯೂರು ಗುರುಸ್ವಾಮಿ ಅವರು ಸಾಹಿತ್ಯ ವಲಯದಲ್ಲಿ ಗಗನಕ್ಕೆ ಏರಿದ ನಕ್ಷತ್ರ. ಮುಗ್ಧತೆ, ಸರಳತೆ, ಸೌಜನ್ಯದ ಮಗುವಾಗಿದ್ದರು. ವಚನ ಸಾಹಿತ್ಯದ ಬಗ್ಗೆ ಹೆಚ್ಚು ಪ್ರೀತಿ ಹುಟ್ಟಿಸಿದರು. ಅವರ ಕೃತಿಗಳನ್ನು ಓದುವುದೇ ಗೌರವ ಎಂದು ಹೇಳಿದರು.