ಮೈಸೂರು ಮೃಗಾಲಯದಲ್ಲಿ ಗಂಡು ಹುಲಿ ಸಾವು

 ಮೈಸೂರು ಮೃಗಾಲಯದ ಪೃಥ್ವಿ ಹುಲಿ
ಮೈಸೂರು ಮೃಗಾಲಯದ ಪೃಥ್ವಿ ಹುಲಿ
Published on
ಮೈಸೂರು: ನಗರದ ಚಾಮರಾಜೇಂದ್ರ ಮೃಗಾಲಯದಲ್ಲಿ ಅನಾರೋಗ್ಯದಿಂದ ಬಳಲುತ್ತಿದ್ದ 13 ವರ್ಷದ ‘ಪೃಥ್ವಿ’ ಹೆಸರಿನ ಹುಲಿ ಬುಧವಾರ ಮೃತಪಟ್ಟಿದೆ.
ಈ ಹುಲಿಯು ನರ ದೌರ್ಬಲ್ಯದ ಸಮಸ್ಯೆಯಿಂದ ಬಳಲುತಿತ್ತು. ಕಳೆದ ಎರಡು ದಿನಗಳಿಂದ ಆಹಾರವನ್ನು ತ್ಯಜಿಸಿತ್ತು. ಹುಲಿಯನ್ನು ಉಳಿಸಿಕೊಳ್ಳಲು ಮೃಗಾಲಯದ ವೈದ್ಯರು ಸಾಕಷ್ಟು ಪ್ರಯತ್ನ ನಡೆಸಿದ್ದರು. ಪೃಥ್ವಿಯ ಆರೋಗ್ಯದಲ್ಲಿ ಸೋಮವಾರ ದಿಢೀರಾಗಿ ಏರುಪೇರು ಕಂಡು ಬಂತು. ತಕ್ಷಣ ಹುಲಿಯನ್ನು ಕೂರ್ಗಳ್ಳಿಯ ಚಾಮುಂಡಿ ವನ್ಯಜೀವಿ ರಕ್ಷಣೆ, ಸಂರಕ್ಷಣೆ ಹಾಗೂ ಸಂತಾನಾಭಿವೃದ್ಧಿ ಕೇಂದ್ರಕ್ಕೆ ಕೊಂಡೊಯ್ದು ಚಿಕಿತ್ಸೆ ನೀಡಲಾಯಿತು. ಆದರೆ, ಚಿಕಿತ್ಸೆಗೆ ಹುಲಿಯ ದೇಹ ಸ್ಪಂದಿಸದೆ ಮೃತಪಟ್ಟಿದೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net