ಮಂಡ್ಯದಲ್ಲಿ ಮಲಬಾರ್ ಗೋಲ್ಡ್-ಡೈಮಂಡ್ಸ್ ಮಳಿಗೆ ಶುಭಾರಂಭ

ಮಲಬಾರ್ ಗೋಲ್ಡ್ ಮತ್ತು ಡೈಮಂಡ್ಸ್ ಸಂಸ್ಥೆಯು ಮಂಡ್ಯದಲ್ಲಿ ನಿರ್ಮಿಸಿರುವ ನೂತನ ಮಳಿಗೆಯನ್ನು ಖ್ಯಾತ ನಟಿ ಶ್ರೀನಿಧಿ ಶೆಟ್ಟಿ ಉದ್ಘಾಟಿಸಿದರು. ಫಿಲ್ಸರ್ ಬಾಬು, ಸಂಸ್ಥೆಯ ಆಡಳಿತ ಮಂಡಳಿ ಸದಸ್ಯರು, ಗ್ರಾಹಕರು, ಆಹ್ವಾನಿತ ಅತಿಥಿಗಳು ಹಾಗೂ ಗಣ್ಯರು ಉಪಸ್ಥಿತರಿದ್ದರು.
ಮಲಬಾರ್ ಗೋಲ್ಡ್ ಮತ್ತು ಡೈಮಂಡ್ಸ್ ಸಂಸ್ಥೆಯು ಮಂಡ್ಯದಲ್ಲಿ ನಿರ್ಮಿಸಿರುವ ನೂತನ ಮಳಿಗೆಯನ್ನು ಖ್ಯಾತ ನಟಿ ಶ್ರೀನಿಧಿ ಶೆಟ್ಟಿ ಉದ್ಘಾಟಿಸಿದರು. ಫಿಲ್ಸರ್ ಬಾಬು, ಸಂಸ್ಥೆಯ ಆಡಳಿತ ಮಂಡಳಿ ಸದಸ್ಯರು, ಗ್ರಾಹಕರು, ಆಹ್ವಾನಿತ ಅತಿಥಿಗಳು ಹಾಗೂ ಗಣ್ಯರು ಉಪಸ್ಥಿತರಿದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಖ್ಯಾತ ನಟಿ ಶ್ರೀನಿಧಿ ಶೆಟ್ಟಿ ಉದ್ಘಾಟನೆ
ಮಂಡ್ಯದಲ್ಲಿ ಮಲಬಾರ್ ಗೋಲ್ಡ್ ಮತ್ತು ಡೈಮಂಡ್ಸ್ ಸಂಸ್ಥೆಯ ಬೃಹತ್ ಹಾಗೂ ಅತ್ಯಾಧುನಿಕ ಮಳಿಗೆ ಸೋಮವಾರ ಶುಭಾರಂಭಗೊಂಡಿದೆ.
ಈ ಮೊದಲಿದ್ದ ಮಳಿಗೆಗಳಿಗಿಂತಲೂ ವಿಶಾಲವಾಗಿ ನಿರ್ಮಿಸಿರುವ ನೂತನ ಮಳಿಗೆ ಆಧುನಿಕ ಸೌಲಭ್ಯಗಳು, ವಿಶಾಲ ಆಭರಣ ಸಂಗ್ರಹ ಹಾಗೂ ಉತ್ತಮ ಗ್ರಾಹಕ ಸೇವೆಗೆ ಆದ್ಯತೆ ನೀಡಲಾಗಿದೆ.
ನೂತನ ಮಳಿಗೆಗೆ ಖ್ಯಾತ ನಟಿ ಶ್ರೀನಿಧಿ ಶೆಟ್ಟಿ ಉದ್ಘಾಟಿಸಿದರು. ಕರ್ನಾಟಕ ಪ್ರಾದೇಶಿಕ ಮುಖ್ಯಸ್ಥ ಫಿಲ್ಸರ್ ಬಾಬು, ಸಂಸ್ಥೆಯ ಆಡಳಿತ ಮಂಡಳಿ ಸದಸ್ಯರು, ಗ್ರಾಹಕರು, ಆಹ್ವಾನಿತ ಅತಿಥಿಗಳು ಹಾಗೂ ಗಣ್ಯರು ಉಪಸ್ಥಿತರಿದ್ದರು.
ನೂತನ ಮಳಿಗೆಯಲ್ಲಿ ಚಿನ್ನ, ವಜ್ರ, ಪ್ಲಾಟಿನಂ, ರತ್ನ ಹಾಗೂ ಬೆಳ್ಳಿ ಆಭರಣಗಳ ವಿಶಾಲ ಸಂಗ್ರಹ ಪ್ರದರ್ಶಿಸಲಾಗಿದೆ. ಮದುವೆ, ಹಬ್ಬ-ಹರಿದಿನ, ಉಡುಗೊರೆ, ಸಮಕಾಲಿನ ಶೈಲಿ ಹಾಗೂ ದೈನಂದಿನ ಬಳಕೆಗೆ ತಕ್ಕ ಆಭರಣಗಳ ಆಯ್ಕೆ ಗ್ರಾಹಕರಿಗೆ ಲಭ್ಯವಿದೆ.
ಉದ್ಘಾಟನಾ ಅಂಗವಾಗಿ ಜು.19ರವರೆಗೆ ಪ್ರತಿ ಖರೀದಿ ಮೇಲೆ ಉಚಿತ ಬೆಳ್ಳಿ ನಾಣ್ಯ ನೀಡುವ ವಿಶೇಷ ಕೊಡುಗೆಯನ್ನು ಸಂಸ್ಥೆ ಘೋಷಿಸಿದೆ.
ಜಾಗತಿಕ ಮಾನದಂಡಗಳಿಗೆ ಅನುಗುಣವಾಗಿ ವಿನ್ಯಾಸಗೊಳಿಸಿರುವ ಈ ಮಳಿಗೆ ವಿಶಾಲ ಒಳಾಂಗಣ, ಆಕರ್ಷಕ ಪ್ರದರ್ಶನ ವಿಭಾಗಗಳು ಹಾಗೂ ವೈಯಕ್ತಿಕ ಗ್ರಾಹಕ ಸೇವಾ ವ್ಯವಸ್ಥೆ ಕಲ್ಪಿಸಲಾಗಿದೆ. ಇದರಿಂದ ಗ್ರಾಹಕರು ಹೆಚ್ಚು ಆರಾಮದಾಯಕ ಹಾಗೂ ಉತ್ತಮ ಶಾಪಿಂಗ್ ಅನುಭವ ಪಡೆಯಲಿದ್ದಾರೆ.
ಗ್ರಾಹಕರು ಹಲವು ವರ್ಷಗಳಿಂದ ನಮ್ಮ ಮೇಲೆ ಇಟ್ಟಿರುವ ವಿಶ್ವಾಸವೇ ಇನ್ನಷ್ಟು ದೊಡ್ಡ ಹಾಗೂ ಪ್ರೀಮಿಯಂ ಶೋರೂಂ ನಿರ್ಮಿಸಲು ಪ್ರೇರಣೆಯಾಗಿದೆ. ಮಂಡ್ಯ ಪ್ರಮುಖ ಮಾರುಕಟ್ಟೆಯಾಗಿದ್ದು, ಈ ಹೊಸ ಮಳಿಗೆ ಮೂಲಕ ವಿಶಾಲ ಸಂಗ್ರಹ, ಉತ್ತಮ ಸೌಲಭ್ಯ ಹಾಗೂ ಉನ್ನತ ಮಟ್ಟದ ಶಾಪಿಂಗ್ ಅನುಭವವನ್ನು ಒದಗಿಸಲು ಸಾಧ್ಯವಾಗಲಿದೆ ಎಂದು ಮಲಬಾರ್ ಗ್ರೂಪ್ ಅಧ್ಯಕ್ಷ ಎಂ.ಪಿ.ಅಹಮ್ಮದ್ ತಿಳಿಸಿದ್ದಾರೆ.
ಮಲಬಾರ್ ಗೋಲ್ಡ್ ಮತ್ತು ಡೈಮಂಡ್ಸ್‌ನಲ್ಲಿ ‘ಒನ್ ಇಂಡಿಯಾ, ಒನ್ ಗೋಲ್ಡ್ ರೇಟ್’, ಪಾರದರ್ಶಕ ಬೆಲೆ ನಿಗದಿ, ಪ್ರಮಾಣಿತ ಚಿನ್ನ, ಪ್ರಮಾಣಿಕೃತ ವಜ್ರಗಳು, ಜೀವಿತಾವಧಿ ನಿರ್ವಹಣಾ ಸೇವೆ ಹಾಗೂ ಮರು ಖರೀದಿ ಭರವಸೆ ಸೇರಿದಂತೆ ವಿವಿಧ ಗ್ರಾಹಕ ಸ್ನೇಹಿ ಸೌಲಭ್ಯಗಳು ಮುಂದುವರಿಯಲಿವೆ ಎಂದು ಪ್ರಕಟಣೆ ತಿಳಿಸಿದೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net