ಸುತ್ತೂರು ಜಾತ್ರಾ ಮಹೋತ್ಸವ ಯಶಸ್ವಿಗೊಳಿಸಿ

ತಿ.ನರಸೀಪುರ ಪಟ್ಟಣಕ್ಕೆ ಆಗಮಿಸಿದ ಸುತ್ತೂರು ಜಾತ್ರೋತ್ಸವದ ಪ್ರಚಾರ ರಥವನ್ನು ಮುಖಂಡರು ಪುಷ್ಪಾರ್ಚನೆ ಮಾಡಿ ಸ್ವಾಗತಿಸಿದರು. ಶ್ರೀ ಸಿದ್ದಲಿಂಗ ಶಿವಾಚಾರ್ಯ ಸ್ವಾಮೀಜಿ, ಶ್ರೀ ಷಡಕ್ಷರ ದೇಶಿಕೇಂದ್ರ ಸ್ವಾಮೀಜಿ, ಬಿ. ಎಂ.ಶಿವಮಲ್ಲಪ್ಪ, ತೊಟ್ಟವಾಡಿ ರವಿ, ಸಿ.ಎಂ.ಪ್ರಕಾಶ್, ಕೆ.ವಿ. ಶಿವಶಂಕರ್, ಎಸ್.ಕೆ.ಕಿರಣ್, ಪರಮೇಶ್ ಪಟೇಲ್, ಕೆಇಬಿ ಸಿದ್ದಲಿಂಗಸ್ವಾಮಿ ಇತರರು ಇದ್ದರು.
ತಿ.ನರಸೀಪುರ ಪಟ್ಟಣಕ್ಕೆ ಆಗಮಿಸಿದ ಸುತ್ತೂರು ಜಾತ್ರೋತ್ಸವದ ಪ್ರಚಾರ ರಥವನ್ನು ಮುಖಂಡರು ಪುಷ್ಪಾರ್ಚನೆ ಮಾಡಿ ಸ್ವಾಗತಿಸಿದರು. ಶ್ರೀ ಸಿದ್ದಲಿಂಗ ಶಿವಾಚಾರ್ಯ ಸ್ವಾಮೀಜಿ, ಶ್ರೀ ಷಡಕ್ಷರ ದೇಶಿಕೇಂದ್ರ ಸ್ವಾಮೀಜಿ, ಬಿ. ಎಂ.ಶಿವಮಲ್ಲಪ್ಪ, ತೊಟ್ಟವಾಡಿ ರವಿ, ಸಿ.ಎಂ.ಪ್ರಕಾಶ್, ಕೆ.ವಿ. ಶಿವಶಂಕರ್, ಎಸ್.ಕೆ.ಕಿರಣ್, ಪರಮೇಶ್ ಪಟೇಲ್, ಕೆಇಬಿ ಸಿದ್ದಲಿಂಗಸ್ವಾಮಿ ಇತರರು ಇದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ತಾಲೂಕು ಕೃಷಿಕ ಸಮಾಜದ ಅಧ್ಯಕ್ಷ ಬಿ.ಎಂ.ಶಿವಮಲ್ಲಪ್ಪ ಮನವಿ
ತಿ.ನರಸೀಪುರ: ಹಳ್ಳಿಗಾಡಿನ ಸೊಗಡಿನೊಂದಿಗೆ ಪ್ರತಿ ವರ್ಷವೂ ಅರ್ಥಪೂರ್ಣವಾಗಿ ಅಚ್ಚುಕಟ್ಟಾಗಿ ಆಯೋಜನೆಗೊಳ್ಳುವ ಸುತ್ತೂರು ಜಾತ್ರಾ ಮಹೋತ್ಸವ ನಾಡಿನ ಸಂಸ್ಕೃತಿಯ ಪ್ರತೀಕ ಎಂದು ತಾಲೂಕು ಕೃಷಿಕ ಸಮಾಜದ ಅಧ್ಯಕ್ಷ ಬಿ.ಎಂ.ಶಿವಮಲ್ಲಪ್ಪ ಹೇಳಿದರು.
ಪಟ್ಟಣದ ಜೆಎಸ್‌ಎಸ್ ಸಭಾಭವನದ ಮುಂಭಾಗ ಸೋಮವಾರ ಪಟ್ಟಣಕ್ಕೆ ಆಗಮಿಸಿದ ಸುತ್ತೂರು ಜಾತ್ರೋತ್ಸವದ ಪ್ರಚಾರ ರಥವನ್ನು ಸ್ವಾಗತಿಸಿ ಮಾತನಾಡಿದ ಅವರು, ಅಕ್ಷರ ದಾಸೋಹದ ಮೂಲಕ ಸಾಮಾಜಿಕ ಸೇವೆಯನ್ನು ಸಲ್ಲಿಸುತ್ತಿರುವ ಸುತ್ತೂರು ಮಠ ಧಾರ್ಮಿಕತೆಯನ್ನು ಉಳಿಸಿ, ಬೆಳೆಸುವ ಸಮಾಜವನ್ನು ಸನ್ಮಾರ್ಗದತ್ತ ಕೊಂಡೊಯ್ಯುತ್ತಿದೆ ಎಂದರು.
ತಾಲೂಕಿನಿಂದಲೂ ಸಾವಿರಾರು ಜನರು ಜಾತ್ರೋತ್ಸವದಲ್ಲಿ ಭಾಗಿಯಾಗಿ ಶಿವರಾತ್ರಿಶ್ವರ ಶಿವಯೋಗಿಗಳವರ ಕೃಪೆಗೆ ಪಾತ್ರರಾಗಬೇಕೆಂದು ಮನವಿ ಮಾಡಿದರು.
ವಾಟಾಳು ಮಠದ ಶ್ರೀ ಸಿದ್ದಲಿಂಗ ಶಿವಾಚಾರ್ಯ ಸ್ವಾಮೀಜಿ, ಮುಡುಕನಪುರ ಮಠದ ಶ್ರೀ ಷಡಕ್ಷರ ದೇಶಿಕೇಂದ್ರ ಸ್ವಾಮೀಜಿ, ಬೆನಕನಹಳ್ಳಿ ಮಠದ ಶ್ರೀ ಇಮ್ಮಡಿ ಬಸವಲಿಂಗ ಸ್ವಾಮೀಜಿ, ವೀರಶೈವ ಲಿಂಗಾಯತ ಮಹಾಸಭಾ ಅಧ್ಯಕ್ಷ ಸಿ.ಎಂ.ಪ್ರಕಾಶ್, ಪ್ರಧಾನ ಕಾರ್ಯದರ್ಶಿ ಕೆ.ವಿ.ಶಿವಶಂಕರ್, ಉಪಾಧ್ಯಕ್ಷ ಎಸ್.ಕೆ.ಕಿರಣ್, ಕಾರ್ಯದರ್ಶಿ ಪರಮೇಶ್ ಪಟೇಲ್, ಕಾರ್ ಮಲ್ಲಪ್ಪ, ನಿರ್ದೇಶಕರಾದ ಎಸ್.ಬಿ.ಸುಗಂಧರಾಜು, ಕೆ.ಎಂ.ಮಲ್ಲು, ಓಂಕಾರಸ್ವಾಮಿ, ತೊಟ್ಟವಾಡಿ ಕುಮಾರ್, ಚಂದ್ರಧರ, ಹಿರಿಯೂರು ನವೀನ್, ತೊಂಟೇಶ್, ಮಾಯಪ್ಪ, ಮಹದೇವಸ್ವಾಮಿ, ಮಂಜುನಾಥ್, ಶಂಭುದೇವನಪುರ ರಮೇಶ್, ಕೆ.ಇ.ಬಿ ಸಿದ್ದಲಿಂಗಸ್ವಾಮಿ, ತುರಗನೂರು ಮಲ್ಲೇಶ್, ಜಾಗತಿಕ ಲಿಂಗಾಯತ ಮಹಾಸಭಾಧ್ಯಕ್ಷ ತೊಟ್ಟವಾಡಿ ರವಿ, ಶರಣ ಸಾಹಿತ್ಯ ಪರಿಷತ್ ಅಧ್ಯಕ್ಷ ಸೋಮಶೇಖರಪ್ಪ, ವೀರಶೈವ ಲಿಂಗಾಯತ ಮಹಾಸಭಾ ಯುವ ಘಟಕ ಅಧ್ಯಕ್ಷ ಕೆ.ಎನ್.ಅಶೋಕ್, ಹೋಟೆಲ್ ರಾಜಣ್ಣ, ಜಿ.ಎಲ್. ಉಮೇಶ್, ಜೆಎಸ್‌ಎಸ್ ಭವನ ವ್ಯವಸ್ಥಾಪಕ ಯೋಗೇಶ್, ಸಂತೋಷ್, ಅಕ್ಕಿ ನಾಗಪ್ಪ, ಅಡುಗೆ ಪ್ರಭು, ಸಂಚಾಲಕ ಪಂಚಾಕ್ಷರಿ ಹಾಗೂ ಇತರರು ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net