ನಾಮಫಲಕದಲ್ಲಿ ಕನ್ನಡ ಕಡ್ಡಾಯವಾಗಿ ಬಳಸಿ

ಬೈಲುಕುಪ್ಪೆ ಟಿಬೆಟಿಯನ್ ಕ್ಯಾಂಪ್‌ಗಳ ವಾಣಿಜ್ಯ ಮಳಿಗೆಗಳ ನಾಮಫಲಕಕ್ಕೆ ಕನ್ನಡ ಕಡ್ಡಾಯಕ್ಕೆ ಒತ್ತಾಯಿಸಿ ಲುಕ್ಸುಮ್ ಅವರಿಗೆ ಎಂ.ಕೃಷ್ಣ ಮನವಿ ಸಲ್ಲಿಸಿದರು.
ಬೈಲುಕುಪ್ಪೆ ಟಿಬೆಟಿಯನ್ ಕ್ಯಾಂಪ್‌ಗಳ ವಾಣಿಜ್ಯ ಮಳಿಗೆಗಳ ನಾಮಫಲಕಕ್ಕೆ ಕನ್ನಡ ಕಡ್ಡಾಯಕ್ಕೆ ಒತ್ತಾಯಿಸಿ ಲುಕ್ಸುಮ್ ಅವರಿಗೆ ಎಂ.ಕೃಷ್ಣ ಮನವಿ ಸಲ್ಲಿಸಿದರು.
Published on

ಪ್ರಮುಖ ಮುಖ್ಯಾಂಶಗಳು

  • ಟಿಬೆಟಿಯನ್ ಕ್ಯಾಂಪ್ ಸೆಟಲ್ಮೆಂಟ್ ವ್ಯವಸ್ಥಾಕಪರಿಗೆ ಮನವಿ
ಬೈಲುಕುಪ್ಪೆ: ಬೈಲುಕುಪ್ಪೆ ಟಿಬೇಟಿಯನ್ ಸುತ್ತಮುತ್ತಲಿನ ಕ್ಯಾಂಪ್, ಕೈಗಾರಿಕಾ ಘಟಕ ಹಾಗೂ ವಾಣಿಜ್ಯ ಮಳಿಗೆ, ಹೋಟೆಲ್, ಅಂಗಡಿ ಮುಂಗಟ್ಟು ನಡೆಸುವವರು ನಾಮಫಲಕದಲ್ಲಿ ಕನ್ನಡ ಭಾಷೆಯನ್ನು ಕಡ್ಡಾಯವಾಗಿ ಬಳಸುವಂತೆ ಕೊಡಗು ಕಾವಲುಪಡೆ ಆಗ್ರಹಿಸಿದೆ.
ಕೊಡಗು ಕಾವಲು ಪಡೆ ಜಿಲ್ಲಾಧ್ಯಕ್ಷ ಎಂ.ಕೃಷ್ಣ ಅವರು ಕನ್ನಡ ನಾಮಫಲಕ ಅಳವಡಿಕೆಗೆ ಆಗ್ರಹಿಸಿ ಪಿರಿಯಾಪಟ್ಟಣ ತಾಲೂಕಿನ ಟಿಡಿಎಲ್ ಕ್ಯಾಂಪ್ ನ್ಯೂ ಸಪ್ಲಿಮೆಂಟ್ ಕಚೇರಿ ಆವರಣದಲ್ಲಿ ಟಿಡಿಎಲ್ ನ್ಯೂ ಸೆಟಲ್ಮೆಂಟ್ ವ್ಯವಸ್ಥಾಪಕ ಲುಕ್ಸುಮ್ ಅವರಿಗೆ ಮನವಿ ಪತ್ರ ನೀಡಿದರು. ಮನವಿ ಪತ್ರ ಸ್ವೀಕರಿಸಿದ ಅಧಿಕಾರಿಗಳು ಈ ಬಗ್ಗೆ ಕ್ರಮ ತೆಗೆದುಕೊಳ್ಳುವುದಾಗಿ ತಿಳಿಸಿದರು.
ಕುಶಾಲನಗರದ ಕಾವಲು ಪಡೆ ಘಟಕದ ಅಧ್ಯಕ್ಷ ಸಮೀರ್, ಕುಶಾಲನಗರದ ತಾಲೂಕು ಮಹಿಳಾ ಘಟಕದ ಅಧ್ಯಕ್ಷೆ ಇಂದಿರಾ, ಬೈಲುಕುಪ್ಪೆ ಗ್ರಾಮದ ಕಾವಲು ಪಡೆ ಸದಸ್ಯ ರಘು ಇತರರು ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net