ಮೈಸೂರು ಜಿಲ್ಲಾ ಹಾಲು ಒಕ್ಕೂಟಗಳ ಸಹಕಾರ ಸಂಘಗಳ ನಿಯಮಿತವು ಕರ್ನಾಟಕ ಹಾಲು ಮಹಾಮಂಡಳಿಯ ಒಡೆತನದ ಪಶು ಆಹಾರ ಘಟಕಗಳಿಗೆ ಪಶು ಆಹಾರ ಉತ್ಪಾದನೆಗೆ ಅವಶ್ಯವಿರುವ ಮೆಕ್ಕೆಜೋಳವನ್ನು ರಾಜ್ಯ ಸರ್ಕಾರ ನಿಗದಿಪಡಿಸಿದ ಬೆಂಬಲ ಬೆಲೆ ಪ್ರತಿ ಕ್ವಿಂಟಲ್ಗೆ 2,400 ರೂ.(ಮೂಲ ಬೆಲೆ, ಎರಡು ಗೋಣಿಚೀಲದ ಮೊತ್ತ ಮತ್ತು ಸಾಗಾಣಿಕೆ ಮೊತ್ತ ಸೇರಿದಂತೆ)ನಂತೆ ಗುಣಮಟ್ಟ ನಿಬಂಧನೆಗೊಳಪಟ್ಟು ರೈತರಿಂದ ನೇರವಾಗಿ ಖರೀದಿಸಲು ತೀರ್ಮಾನವಾಗಿರುತ್ತದೆ.