ಜೀವನದಲ್ಲಿ ಯಶಸ್ವಿಯಾಗಲು ನಿಷ್ಠೆ, ಪ್ರಮಾಣಿಕತೆ ಅಗತ್ಯ

  ಜ್ಞಾನಬುತ್ತಿ ಸಂಸ್ಥೆಯಲ್ಲಿ ಮಂಗಳವಾರ ಸಂಜೆ ಆಯೋಜಿಸಿದ್ದ  ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತರಬೇತಿ ಶಿಬಿರದಲ್ಲಿ ಡಿಸಿಪಿ ಕೆ.ಎಸ್.ಸುಂದರ್‌ರಾಜು ಮಾತನಾಡಿದರು. ಡಿ.ಉದಯ್ ಕುಮಾರ್, ಎಚ್.ಬಾಲಕೃಷ್ಣ, ಪ್ರೊ.ವಿ.ಜಯಪ್ರಕಾಶ್, ಡಾ.ಐಪನಹಳ್ಳಿ ವಸಂತ್ ಕುಮಾರ್ ಇನ್ನಿತರರಿದ್ದರು
ಜ್ಞಾನಬುತ್ತಿ ಸಂಸ್ಥೆಯಲ್ಲಿ ಮಂಗಳವಾರ ಸಂಜೆ ಆಯೋಜಿಸಿದ್ದ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತರಬೇತಿ ಶಿಬಿರದಲ್ಲಿ ಡಿಸಿಪಿ ಕೆ.ಎಸ್.ಸುಂದರ್‌ರಾಜು ಮಾತನಾಡಿದರು. ಡಿ.ಉದಯ್ ಕುಮಾರ್, ಎಚ್.ಬಾಲಕೃಷ್ಣ, ಪ್ರೊ.ವಿ.ಜಯಪ್ರಕಾಶ್, ಡಾ.ಐಪನಹಳ್ಳಿ ವಸಂತ್ ಕುಮಾರ್ ಇನ್ನಿತರರಿದ್ದರು
Published on

ಪ್ರಮುಖ ಮುಖ್ಯಾಂಶಗಳು

  • ಡಿಸಿಪಿ ಕೆ.ಎಸ್.ಸುಂದರ್ ರಾಜು ಅಭಿಪ್ರಾಯ
  • ಜ್ಞಾನ ಎಂಬುದು ಯಾರ ಸ್ವತ್ತಲ್ಲ.
  • ಪ್ರತಿಯೊಬ್ಬ ಸಾಧಕರ ಹಿಂದೆ ಕಠಿಣ ಪರಿಶ್ರಮ
ಮೈಸೂರು: ಅಭ್ಯಾಸದೊಂದಿಗೆ ನಿಷ್ಠೆ, ಪ್ರಾಮಾಣಿಕ ಪ್ರಯತ್ನ ಮಾಡಿದರೆ ಪ್ರತಿಯೊಬ್ಬ ವಿದ್ಯಾರ್ಥಿ ಸಹ ಜೀವನದಲ್ಲಿ ಯಶಸ್ವಿಯಾಗಬಹುದು  ಎಂದು ಡಿಸಿಪಿ ಕೆ.ಎಸ್.ಸುಂದರ್‌ರಾಜು ಹೇಳಿದರು.
ನಗರದ ಲಕ್ಷ್ಮೀಪುರಂ ಪ್ರೌಢಶಾಲೆ ಮತ್ತು ಪದವಿ ಪೂರ್ವ ಕಾಲೇಜಿನ ಆವರಣದಲ್ಲಿರುವ ಜ್ಞಾನಬುತ್ತಿ ಸಂಸ್ಥೆಯಲ್ಲಿ ಮಂಗಳವಾರ ಸಂಜೆ ಆಯೋಜಿಸಿದ್ದ ಪಿಸಿ, ಪಿಎಸ್‌ಐ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ 50 ದಿನಗಳ ಉಚಿತ ತರಬೇತಿ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದರು.
ಜ್ಞಾನ ಎಂಬುದು ಯಾರ ಸ್ವತ್ತಲ್ಲ. ಅದನ್ನು ಸರಿಯಾದ ಸಮಯದಲ್ಲಿ ಅಳವಡಿಸಿಕೊಂಡರೆ ಮಾತ್ರ ಉನ್ನತ ಸ್ಥಾನ ಕಟ್ಟಿಟ್ಟ ಬುತ್ತಿ. ಪ್ರಸ್ತುತ ದಿನಮಾನಗಳಲ್ಲಿ ವಿದ್ಯಾರ್ಥಿಗಳಿಗೆ ಉನ್ನತ ಶಿಕ್ಷಣ, ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ನೂರಾರು ಸಂಸ್ಥೆಗಳಿದ್ದರೂ ಈ ಅವಕಾಶ ಬಳಸಿಕೊಳ್ಳದೇ ಪ್ರಯತ್ನದಿಂದ ಹಿಂದೆ ಸರಿಯುತ್ತಿದ್ದಾರೆ. ಸರ್ಕಾರಿ ಶಾಲಾ ಕಾಲೇಜುಗಳಲ್ಲಿ ಓದಿದವರು ಎಲ್ಲ ಪ್ರಮುಖ ಹುದ್ದೆಗಳ ಚುಕ್ಕಾಣಿ ಹಿಡಿದು ಆಡಳಿತ ಕೇಂದ್ರಗಳಲ್ಲೂ ಕಾರ್ಯನಿರ್ವಹಿಸುತ್ತಿದ್ದಾರೆ ಎಂದರು.
ಪ್ರತಿಯೊಬ್ಬ ಸಾಧಕರ ಹಿಂದೆ ಕಠಿಣ ಪರಿಶ್ರಮ ಇರುತ್ತದೆ. ಅವರನ್ನು ಗಮನದಲ್ಲಿಟ್ಟುಕೊಂಡು ವಿದ್ಯಾರ್ಥಿಗಳು ಪ್ರತಿಯೊಂದು ಕೆಲಸ ಮಾಡುವ ಮುನ್ನ ದೃಢ ಸಂಕಲ್ಪ ಮಾಡಿದರೆ ಮಾತ್ರ ಉನ್ನತ ಹುದ್ದೆಯಲ್ಲಿ ಸೇವೆ ಸಲ್ಲಿಸಬಹುದಾಗಿದೆ ಎಂದು ಸ್ಪರ್ಧಾರ್ಥಿಗಳಿಗೆ ಸಲಹೆ ನೀಡಿದರು. ಯಾವುದೇ ಹುದ್ದೆಗೆ ಸೇರಬಯಸುವ ವಿದ್ಯಾರ್ಥಿಗಳು ತಮ್ಮ ಕೆಲಸದಲ್ಲಿ ಸೇವೆ ಎಂಬ ಮನೋಭಾವ ಅಳವಡಿಸಿಕೊಂಡರೆ ಉನ್ನತ ಹೆಸರನ್ನು ಮಾಡಬಹುದಾಗಿದೆ ಎಂದರು.
ಶಾಲಾ ಶಿಕ್ಷಣ ಇಲಾಖೆಯ ಉಪ ನಿರ್ದೇಶಕ ಡಿ.ಉದಯ್ ಕುಮಾರ್ ಮಾತನಾಡಿ, ಮಾಹಿತಿ, ಜ್ಞಾನ ಮತ್ತು ಬುದ್ಧಿವಂತಿಕೆ  ಈ ಮೂರು ಪ್ರಮುಖ ಅಂಶಗಳನ್ನು ಓದುವ ಹವ್ಯಾಸದಲ್ಲಿ ಅಳವಡಿಸಿಕೊಂಡರೆ ಪ್ರತಿಯೊಬ್ಬರೂ ಗುರಿ ತಲುಪಬಹುದು. ಪ್ರತಿಯೊಂದು ವಿಷಯವನ್ನು ಬುದ್ಧಿವಂತಿಕೆಯಿಂದ ಅಧ್ಯಯನ ಮಾಡಿದರೇ ಮಾತ್ರ ಪರೀಕ್ಷೆಗಳಲ್ಲಿ ಉತ್ತಮ ಅಂಕ ಪಡೆಯಬಹುದು ಎಂದು ಕಿವಿಮಾತು ಹೇಳಿದರು.
ಅಖಿಲ ಭಾರತ ವಯಸ್ಕರ ಶಿಕ್ಷಣ ಕೌನ್ಸಿಲ್‌ನ ನಿರ್ದೇಶಕ ವೈ.ಎನ್.ಶಂಕರೇಗೌಡ ಮಾತನಾಡಿ, ಆಲೋಚನೆ ಕ್ರಮ ಪಠ್ಯವಾರು ವಿಂಗಡಿಸಿಕೊಂಡರೆ ಆಗ ಮಾತ್ರ ಪ್ರತಿ ವಿಷಯದ ಬಗ್ಗೆ ಜ್ಞಾನವನ್ನು ಪಡೆಯಬಹುದು. ಪ್ರತಿಯೊಬ್ಬರು ಹಿಂಜರಿಕೆಯನ್ನು ಹಿಮ್ಮೆಟ್ಟಿ  ಮುಂದೆ ಸಾಗಬೇಕು ಎಂದು ಹೇಳಿದರು.
ಸಂಸ್ಥೆಯ ಎಚ್.ಬಾಲಕೃಷ್ಣ, ಪ್ರೊ.ವಿ.ಜಯಪ್ರಕಾಶ್, ಡಾ.ಐಪನಹಳ್ಳಿ ವಸಂತ್ ಕುಮಾರ್, ಡಾ.ಎಸ್.ಬಿ.ಎಂ.ಪ್ರಸನ್ನ, ಕೆ.ವೈ. ನಾಗೇಂದ್ರ, ಕಿರಣ್ ಕೌಶಿಕ್, ಜೈನಹಳ್ಳಿ ಸತ್ಯನಾರಾಯಣಗೌಡ, ಡಾ.ಪಳಿನಿಸ್ವಾಮಿ ಮೂಡುಗೂರು, ಡಾ.ವಿ.ಕೃಷ್ಣಕುಮಾರ್, ಯು.ಎಂ. ಶರದ್‌ರಾವ್, ಎಂ.ರಾಜೀವ್ ಶರ್ಮ ಪಾಲ್ಗೊಂಡಿದ್ದರು. 
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net