ಗಡಿ ಇಲ್ಲದಿರುವುದರಿಂದ ಎಲ್ಲ ಭಾಷಿಕರನ್ನು ತಲುಪುತ್ತಿದೆ ಸಾಹಿತ್ಯ

ಮೈಸೂರು ಸಾಹಿತ್ಯ ದಾಸೋಹದಿಂದ ನಗರದಲ್ಲಿ ಆಯೋಜಿಸಿದ್ದ 127ನೇ ಸಾಹಿತ್ಯ ದಾಸೋಹ ಕಾರ್ಯಕ್ರಮದಲ್ಲಿ ಪ್ರಭಾಶಾಸ್ತ್ರಿ ಜೋಶ್ಯುಲ ಅವರ ಅನುವಾದಿತ ‘ಸ್ವಾತಿ ಮುತ್ತು’ ಕಥಾ ಸಂಕಲನ ಬಿಡುಗಡೆಗೊಳಿಸಲಾಯಿತು. ಮಡ್ಡೀಕೆರೆ ಗೋಪಾಲ್, ಅಂಶಿ ಪ್ರಸನ್ನಕುಮಾರ್, ರಂಗನಾಥ್ ಮೈಸೂರು, ಎಂ.ಆರ್. ಆನಂದ್, ಪ್ರಭಾಶಾಸ್ತ್ರಿ ಇತರರು ಇದ್ದರು.
ಮೈಸೂರು ಸಾಹಿತ್ಯ ದಾಸೋಹದಿಂದ ನಗರದಲ್ಲಿ ಆಯೋಜಿಸಿದ್ದ 127ನೇ ಸಾಹಿತ್ಯ ದಾಸೋಹ ಕಾರ್ಯಕ್ರಮದಲ್ಲಿ ಪ್ರಭಾಶಾಸ್ತ್ರಿ ಜೋಶ್ಯುಲ ಅವರ ಅನುವಾದಿತ ‘ಸ್ವಾತಿ ಮುತ್ತು’ ಕಥಾ ಸಂಕಲನ ಬಿಡುಗಡೆಗೊಳಿಸಲಾಯಿತು. ಮಡ್ಡೀಕೆರೆ ಗೋಪಾಲ್, ಅಂಶಿ ಪ್ರಸನ್ನಕುಮಾರ್, ರಂಗನಾಥ್ ಮೈಸೂರು, ಎಂ.ಆರ್. ಆನಂದ್, ಪ್ರಭಾಶಾಸ್ತ್ರಿ ಇತರರು ಇದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಉತ್ತಮ ಹಾಗೂ ಜನಪ್ರಿಯ ಸಾಹಿತ್ಯ ಯಾವುದೇ ಭಾಷೆಯನ್ನು ಬೇಕಾದರೂ ತಲುಪಬಹುದು
  • ಅನುವಾದ ಕಾರ್ಯದ ಮೂಲಕ ಎಲ್ಲರು ತಮ್ಮದೇ ಭಾಷೆಗಳಲ್ಲಿ ಓದಬುಹದು
ಮೈಸೂರು:ಸಾಹಿತ್ಯಕ್ಕೆ ಯಾವುದೇ ಗಡಿ ಇಲ್ಲದಿರುವುದರಿಂದ ಎಲ್ಲ ಭಾಷಿಕರನ್ನು ಅನುವಾದದ ಮೂಲಕವೂ ತಲುಪುತ್ತದೆ ಎಂದು ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷ ಮಡ್ಡೀಕೆರೆ ಗೋಪಾಲ್ ಹೇಳಿದರು.
ಮೈಸೂರು ಸಾಹಿತ್ಯ ದಾಸೋಹದಿಂದ ವಿವೇಕಾನಂದ ವೃತ್ತದ ಬಳಿಯ ಶ್ರೀಶಾರದಾ ಕಲಾ ಕೇಂದ್ರದ ಸಭಾಂಗಣದಲ್ಲಿ ಆಯೋಜಿಸಿದ್ದ 127ನೇ ಸಾಹಿತ್ಯ ದಾಸೋಹ ಕಾರ್ಯಕ್ರಮದಲ್ಲಿ ಪ್ರಭಾಶಾಸ್ತ್ರಿ ಜೋಶ್ಯುಲ ಅವರ ಅನುವಾದಿತ ‘ಸ್ವಾತಿ ಮುತ್ತು’ ಕಥಾ ಸಂಕಲನ ಬಿಡುಗಡೆಗೊಳಿಸಿ ಮಾತನಾಡಿದರು.
ಎಲ್ಲ ದೇಶ, ಭಾಷೆಗಳಲ್ಲಿಯೂ ಸಾಹಿತ್ಯವಿದೆ. ಉತ್ತಮ ಹಾಗೂ ಜನಪ್ರಿಯ ಸಾಹಿತ್ಯ ಯಾವುದೇ ಭಾಷೆಯನ್ನು ಬೇಕಾದರೂ ತಲುಪಬಹುದು. ಅದಕ್ಕೆ ಯಾವುದೇ ಗಡಿ ಇಲ್ಲ. ಅನುವಾದ ಕಾರ್ಯದ ಮೂಲಕ ಎಲ್ಲ ಭಾಷೆಗಳಿಗೂ ತಲುಪುತ್ತಿದೆ. ಇದಕ್ಕಾಗಿಯೇ ಎಲ್ಲ ದೇಶಗಳಲ್ಲಿಯೂ ತಮ್ಮದೇ ಅನುವಾದ ಘಟಕಗಳನ್ನು ಆರಂಭಿಸಲಾಗಿದೆ ಎಂದು ಹೇಳಿದರು.
ಈ ಕಥಾ ಸಂಕಲನದ ಮೂಲ ತೆಲುಗಿನ ಲೇಖಕ ಸಿ.ಎನ್.ಚಂದ್ರಶೇಖರ್ ಅವರು, ಪ್ರತಿ ಕಥೆಯ ಅಂತ್ಯದಲ್ಲೂ ಓದುಗರ ಕಲ್ಪನೆಗೆ ಮೀರಿ ಸಿನಿಮೀಯ ಮಾದರಿಯಲ್ಲಿ ತಿರುವು ನೀಡಿದ್ದಾರೆ. ಅದೇ ರೀತಿ ಚೇತೋಹಾರಿ ಜೀವನೋತ್ಸವ ಇರುವ ಪ್ರಭಾಶಾಸ್ತ್ರಿ ಜೋಶ್ಯುಲ ಅವರು ಕಥೆಗೆ ಜೀವ ಕೊಡುವ ಕೆಲಸ ಮಾಡಿದ್ದಾರೆ. ಕಥೆಗಳನ್ನು ಓದಿದರೆ ಭಾಷಾಂತರ ಎನಿಸಲ್ಲದಂತೆ ಓದಿಸಿಕೊಂಡು ಹೋಗುತ್ತದೆ ಎಂದರು.
ಈ ಸಂಕಲನದಲ್ಲಿ ಕೆಲವೊಂದು ಪತ್ತೆದಾರಿ ಕಥೆಗಳೂ ಇವೆ. ಕಥೆಗಾರರ ವಸ್ತು ಆಯ್ಕೆಯಲ್ಲಿ ವಿಭಿನ್ನತೆ ಇದೆ. ವಿಶಿಷ್ಟ ಶೆಲಿ ಮತ್ತು ತಂತ್ರಗಾರಿಕೆಯಿಂದ ಕಥೆಗಳನ್ನು ಕಟ್ಟಿಕೊಟ್ಟಿದ್ದಾರೆ ಎಂದು ಅವರು ಶ್ಲಾಘಿಸಿದರು.
ಹೊಯ್ಸಳ ಕನ್ನಡ ಸಂಘದ ಗೌರವ ಕಾರ್ಯದರ್ಶಿ ರಂಗನಾಥ್ ಮೈಸೂರು ಕೃತಿ ಕುರಿತು ಮಾತನಾಡಿ, ಈ ಕಥಾ ಸಂಕಲನವನ್ನು ಓದಿದರೆ ಅನುವಾದ ಎನಿಸುವುದಿಲ್ಲ. ಆ ರೀತಿ ಪ್ರಭಾಶಾಸ್ತ್ರಿ ಅವರು ಕನ್ನಡ ನೆಲದ ಮಣ್ಣಿಗೆ ತಕ್ಕಂತೆ ಅನುವಾದಿಸಿದ್ದಾರೆ. ಇಲ್ಲಿ ಸರಳ, ಸುಂದರ ಕಥೆಗಳಿವೆ ಎಂದರು.
ಕನ್ನಡ ಮತ್ತು ತೆಲುಗು ಸೋದರ ಭಾಷೆಗಳಿದ್ದಂತೆ. ಈ ರೀತಿಯ ಅನುವಾದದಿಂದ ಎರಡು ಭಾಷೆಗಳ ಸಂಸ್ಕೃತಿ ಪರಿಚಯವಾಗುತ್ತದೆ. ಭಾಷಾ ಬಾಂಧವ್ಯ ಬೆಳೆಯುತ್ತದೆ ಎಂದು ಅಭಿಪ್ರಾಯಪಟ್ಟರು.
ಸಾಹಿತ್ಯ ದಾಸೋಹ ಕಾರ್ಯಕ್ರಮವನ್ನು ಹಿರಿಯ ಪತ್ರಕರ್ತ ಅಂಶಿ ಪ್ರಸನ್ನಕುಮಾರ್ ಉದ್ಘಾಟಿಸಿದರು. ಮೈಸೂರು ಸಾಹಿತ್ಯ ದಾಸೋಹದ ಸಂಸ್ಥಾಪಕ ಎಂ.ಆರ್. ಆನಂದ್ ಅಧ್ಯಕ್ಷತೆ ವಹಿಸಿದ್ದರು. ಯಾಚೇನಹಳ್ಳಿ ನನ್ನಪ್ಪ ಸಾಂಸ್ಕೃತಿಕ ಕಲಾ ತಂಡದ ಸಂಸ್ಥಾಪಕ ಮಹದೇವ್, ಹಿಮಬಿಂದು, ಪ್ರೊ.ಆರ್.ಎ. ಕುಮಾರ್, ಪ್ರೊ.ಎಂ.ವಿ. ಸುಧಾ, ಕೆರೋಡಿ ಲೋಲಾಕ್ಷಿ, ರಮೇಶ್, ನಾರಾಯಣ ರಾವ್, ಸಿ.ಎಸ್. ರಾಘವೇಂದ್ರ, ಕಾಳಿಹುಂಡಿ ಶಿವಕುಮಾರ್, ಪರಮೇಶ್ ಕೆ. ಉತ್ತನಹಳ್ಳಿ, ರಾಧಿಕಾ ಚಂದ್ರಶೇಖರ್, ಅಣ್ಣಾಮಲೆ ಇತರರು ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net