ಇಲ್ಲದವರ ಬದುಕಿಗೆ ಬೆಳಕಾಗುವುದೇ ಜೀವನ

ಹನಗೋಡು ಹೋಬಳಿಯ ತಟ್ಟೆಕೆರೆ ಮಾರುತಿ ಪ್ರೌಢಶಾಲೆಗೆ ಹುಣಸೂರು ರೋಟರಿ ಕ್ಲಬ್ ವತಿಯಿಂದ ಶುದ್ಧ ವಾಟರ್ ಫಿಲ್ಟರನ್ನು ಕೊಡುಗೆಯಾಗಿ ನೀಡಿದರು. ರಮೇಶ್, ರಾಜೇಗೌಡ, ಕೃಷ್ಣಕುಮಾರ್ ಇತರರು ಇದ್ದರು.
ಹನಗೋಡು ಹೋಬಳಿಯ ತಟ್ಟೆಕೆರೆ ಮಾರುತಿ ಪ್ರೌಢಶಾಲೆಗೆ ಹುಣಸೂರು ರೋಟರಿ ಕ್ಲಬ್ ವತಿಯಿಂದ ಶುದ್ಧ ವಾಟರ್ ಫಿಲ್ಟರನ್ನು ಕೊಡುಗೆಯಾಗಿ ನೀಡಿದರು. ರಮೇಶ್, ರಾಜೇಗೌಡ, ಕೃಷ್ಣಕುಮಾರ್ ಇತರರು ಇದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ವಲಯ ಸೇನಾನಿ ರೋ. ಕೆ.ರಮೇಶ್ ಹೇಳಿಕೆ
ಹನಗೋಡು: ಇರುವವರ ನಡುವೆ ಇಲ್ಲದವರ ಬದುಕಿಗೆ ನೆರವು ನೀಡಿ ಬೆಳಕಾಗುವುದೇ ಜೀವನ ಎಂದು ವಾಟರ್ ಫಿಲ್ಟರ್ ದಾನಿ ವಲಯ ಸೇನಾನಿ ರೋ. ಕೆ.ರಮೇಶ್ ಹೇಳಿದರು.
ಹೋಬಳಿಯ ತಟ್ಟೆಕೆರೆ ಮಾರುತಿ ಪ್ರೌಢಶಾಲೆಗೆ ಹುಣಸೂರು ರೋಟರಿ ಕ್ಲಬ್ ವತಿಯಿಂದ ಶುಕ್ರವಾರ ಶುದ್ಧ ವಾಟರ್ ಫಿಲ್ಟರನ್ನು ಕೊಡುಗೆಯಾಗಿ ನೀಡಿದರು. ನಂತರ ಮಾತನಾಡಿದ ಅವರು, ಸಾಮಾಜಿಕ ಸೇವಾ ಕಾರ್ಯವನ್ನು ರೋಟರಿ ಸಂಸ್ಥೆ ನಿರಂತರವಾಗಿ ಮಾಡಿಕೊಂಡು ಬರುತ್ತಿದೆ ಎಂದು ಮೆಚ್ಚುಗೆ ವ್ಯಕಪಡಿಸಿದರು.
ಸಹಾಯಕ ಪ್ರಾಂತಪಾಲ ತಿರುಮಲಪುರ ರಾಜೇಗೌಡ ಮಾತನಾಡಿ, ಜೀವ ಚಿಕ್ಕದು, ಆದರೆ ಜೀವನ ದೊಡ್ಡದಿದೆ. ಉಳ್ಳವರು ಸ್ನೇಹದಿಂದ ಸಹಾಯಾಸ್ತ ನಮ್ಮದಾಗಬೇಕು. ಆಗ ಮಾತ್ರ ನಮ್ಮ ಬದುಕು ಸಾರ್ಥಕತೆ ಪಡೆದುಕೊಳ್ಳಲಿದೆ ಎಂದರು.
ವಿದ್ಯಾರ್ಥಿಗಳು ವಿದ್ಯಾಭ್ಯಾಸಕ್ಕೆ ಖಾಸಗಿ, ಸರ್ಕಾರಿ ಶಾಲೆ ಎಂಬ ಭೇದಬೇಡ. ಅಲ್ಲಿನ ಆಡಂಬರದ ಜೀವನ ಶೈಲಿಗೆ ಮಾರುಹೋಗದೇ ಸರ್ಕಾರಿ ಶಾಲೆಯಲ್ಲಿ ಉತ್ತಮ ಶಿಕ್ಷಕರಿದ್ದು, ಶ್ರದ್ಧೆಯಿಂದ ಶಿಕ್ಷಣ ಪಡೆದು ಪಾಲಕರಿಗೆ, ಶಿಕ್ಷಕರಿಗೆ ಗೌರವ ತಂದುಕೊಡಿ ಎಂದರು.
ಡಾ ಸರೋಜಿನಿ ವಿಕ್ರಂ, ಪುಣ್ಯ ಭೂಮಿ ಶಾಲೆಯ ಅಧ್ಯಕ್ಷ ಎಚ್.ವೈ.ಮಹದೆವ್, ರೋಟರಿ ಕಾರ್ಯದರ್ಶಿ ಧರ್ಮಾಪುರ ಶ್ಯಾಮ್, ಧನಂಜಯ್, ಸುನೀಲ್ ಕುನಾರ್, ದೈಹಿಕ ಶಿಕ್ಷಣ ಶಿಕ್ಷಕ ಶ್ರೀಧರ್, ಮಾನಸಾ, ಪುಷ್ಪಲತಾ, ಗರೀಶ್ ಸೇರಿದಂತೆ ಇತರರು ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net