ವಿಕ್ರಂ ಅಯ್ಯಂಗಾರ್, ಮಂಜುನಾಥ್, ಕೃಷ್ಣಪ, ಲೋಹಿತ್, ಗಗನ್‌ಗೌಡ ಅವರಿಗೆ ಪರಿಸರ ಪ್ರೇಮಿ ಪ್ರಶಸ್ತಿ ನೀಡಿ ಗೌರವಿಸಲಾಯಿತು. ನಾರಾಯಣಗೌಡ, ಕೆ.ರಘುರಾಮ ವಾಜಪೇಯಿ, ಕೆ.ಬಿ.ಲಿಂಗರಾಜು, ಅಪೂರ್ವಾ ಸುರೇಶ್ ಇದ್ದರು.
ಪ್ಲಾಸ್ಟಿಕ್‌ಮುಕ್ತ ದೇಶ ಕಟ್ಟಲು ಎಲ್ಲರೂ ಮುಂದಾಗೋಣ ಎಂದು ಮೈಸೂರು ಹೋಟೆಲ್ ಮಾಲೀಕರ ಸಂಘದ ಅಧ್ಯಕ್ಷ ನಾರಾಯಣಗೌಡ ಸಲಹೆ ನೀಡಿದರು.
ನಗರದ ಚಾಮುಂಡಿಪುರಂನ ಖಾಸಗಿ ಹೋಟೆಲ್ ಸಭಾಂಗಣದಲ್ಲಿ ಅರಿವು ಸಂಸ್ಥೆಯಿಂದ ಬುಧವಾರ ಆಯೋಜಿಸಿದ್ದ ವಿಶ್ವ ಪರಿಸರ ದಿನ ಹಾಗೂ ಪ್ರಶಸ್ತಿ ಪ್ರದಾನ ಕಾರ್ಯಕ್ರಮದಲ್ಲಿ ಮಾತನಾಡಿದರು.
ಪ್ಲಾಸ್ಟಿಕ್ ಬಳಕೆಯಿಂದ ಪರಿಸರಕ್ಕೆ ಧಕ್ಕೆಯಾಗುತ್ತಿದೆ. ವಿದ್ಯಾವಂತರೇ ಪ್ಲಾಸ್ಟಿಕ್ ಬಳಸುತ್ತಿದ್ದಾರೆ. ಪರಿಸರದ ಮಹತ್ವ ತಿಳಿದಿದ್ದರೂ ಅನಕ್ಷರಸ್ಥರ ರೀತಿಯಲ್ಲಿ ಪರಿಸರವನ್ನು ನಾಶ ಮಾಡುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಪರಿಸರವನ್ನು ಕಾಪಾಡಿ, ಅದನ್ನು ಮುಂದಿನ ಪೀಳಿಗೆಗೆ ಕೊಡುಗೆಯಾಗಿ ನೀಡಬೇಕು. ಪ್ರತಿಯೊಬ್ಬರೂ ಮನೆಗೊಂದು ಮರ ಬೆಳೆಸುವ ಮೂಲಕ ಪರಿಸರವನ್ನು ಉಳಿಸಬೇಕು ಎಂದರು.
ಇದೇ ವೇಳೆ ಸಾಧಕರಾದ ವಿಕ್ರಂ ಅಯ್ಯಂಗಾರ್, ಮಂಜುನಾಥ್, ಕೃಷ್ಣಪ, ಲೋಹಿತ್, ಗಗನ್‌ಗೌಡ ಅವರಿಗೆ ಪರಿಸರ ಪ್ರೇಮಿ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಸಮಾಜ ಸೇವಕ ಕೆ.ರಘುರಾಮ ವಾಜಪೇಯಿ ಮಾತನಾಡಿದರು. ವಾಣಿಜ್ಯ ಮತ್ತು ಕೈಗಾರಿಕೆ ಸಂಸ್ಥೆ ಅಧ್ಯಕ್ಷ ಕೆ.ಬಿ.ಲಿಂಗರಾಜು, ಅಪೂರ್ವ ಸ್ನೇಹ ಬಳಗದ ಅಧ್ಯಕ್ಷ ಅಪೂರ್ವ ಸುರೇಶ್, ಮುಖಂಡರಾದ ನಜರ್‌ಬಾದ್ ನಟರಾಜ್, ಬಸವರಾಜ್ ಬಸಪ್ಪ, ಕೇಬಲ್ ಮಹೇಶ್, ಜಿ ರಾಘವೇಂದ್ರ ಇತರರಿದ್ದರು.