ಕೈವಾರ ತಾತಯ್ಯರ ಸಿದ್ಧಾಂತ ಅರಿತು ಬದುಕೋಣ

ಕೆ.ಆರ್.ನಗರದ ಆಡಳಿತ ಸೌದದ ಕಚೇರಿಯಲ್ಲಿ ಆಯೋಜಿಸಿದ್ದ ಶ್ರೀ ಕೈವಾರ ತಾತಯ್ಯ ಶ್ರೀ ಯೋಗಿ ನಾರಾಯಣ ಯತೀಂದ್ರ ಅವರ ಜಯಂತಿ ಆಚರಣೆ ಕಾರ್ಯಕ್ರಮದಲ್ಲಿ ಗಣ್ಯರು ಭಾವಚಿತ್ರಕ್ಕೆ ಪುಷ್ಪಾರ್ಚನೆ ನೆರವೇರಿಸಿದರು. ವಿಧಾನ ಪರಿಷತ್ ಮಾಜಿ ಸದಸ್ಯ ಕೆ.ಸಿ.ಪುಟ್ಟಸಿದ್ದಶೆಟ್ಟಿ, ಗ್ರೇಡ್-2 ತಹಸೀಲ್ದಾರ್ ಚಂದ್ರಶೇಖರ್, ಪುರಸಭೆ ಮಾಜಿ ಅಧ್ಯಕ್ಷ ನರಸಿಂಹರಾಜು, ಎಡತೊರೆ ಬಣಜಿಗ ಸಂಘದ ತಾಲೂಕು ಅಧ್ಯಕ್ಷ ಟಿ.ಎನ್.ದಯಾನಂದ್, ಪ್ರಧಾನ ಕಾರ್ಯದರ್ಶಿ ಮಳಲಿರಾಘು ಇನ್ನಿತರರು ಇದ್ದರು.
ಕೆ.ಆರ್.ನಗರದ ಆಡಳಿತ ಸೌದದ ಕಚೇರಿಯಲ್ಲಿ ಆಯೋಜಿಸಿದ್ದ ಶ್ರೀ ಕೈವಾರ ತಾತಯ್ಯ ಶ್ರೀ ಯೋಗಿ ನಾರಾಯಣ ಯತೀಂದ್ರ ಅವರ ಜಯಂತಿ ಆಚರಣೆ ಕಾರ್ಯಕ್ರಮದಲ್ಲಿ ಗಣ್ಯರು ಭಾವಚಿತ್ರಕ್ಕೆ ಪುಷ್ಪಾರ್ಚನೆ ನೆರವೇರಿಸಿದರು. ವಿಧಾನ ಪರಿಷತ್ ಮಾಜಿ ಸದಸ್ಯ ಕೆ.ಸಿ.ಪುಟ್ಟಸಿದ್ದಶೆಟ್ಟಿ, ಗ್ರೇಡ್-2 ತಹಸೀಲ್ದಾರ್ ಚಂದ್ರಶೇಖರ್, ಪುರಸಭೆ ಮಾಜಿ ಅಧ್ಯಕ್ಷ ನರಸಿಂಹರಾಜು, ಎಡತೊರೆ ಬಣಜಿಗ ಸಂಘದ ತಾಲೂಕು ಅಧ್ಯಕ್ಷ ಟಿ.ಎನ್.ದಯಾನಂದ್, ಪ್ರಧಾನ ಕಾರ್ಯದರ್ಶಿ ಮಳಲಿರಾಘು ಇನ್ನಿತರರು ಇದ್ದರು.
Published on
ಕೆ.ಆರ್.ನಗರ: ಕಾಲಜ್ಞಾನಿ, ಬ್ರಹ್ಮ ಜ್ಞಾನಿಗಳಾದ ಕೈವಾರ ತಾತಯ್ಯ ಅವರ ಚಿಂತನೆಗಳು, ದೂರದೃಷ್ಟಿಯು ಮಾನವ ಸಮಾಜದ ಸಮಗ್ರ ಕಲ್ಯಾಣ ಹಾಗೂ ಬದುಕುವ ರೀತಿಗೆ ಉತ್ತಮ ಮಾರ್ಗದರ್ಶನವಾಗಿದೆ ಎಂದು ವಿಧಾನಪರಿಷತ್ ಮಾಜಿ ಸದಸ್ಯ ಕೆ.ಸಿ.ಪುಟ್ಟಸಿದ್ದಶೆಟ್ಟಿ ಬಣ್ಣಿಸಿದರು.
ಪಟ್ಟಣದ ತಾಲೂಕು ಆಡಳಿತಸೌಧದ ಕಚೇರಿಯಲ್ಲಿ ನಾಡ ಹಬ್ಬಗಳ ಸಮಿತಿಯಿಂದ ಮಂಗಳವಾರ ಆಯೋಜಿಸಿದ್ದ ಶ್ರೀ ಕೈವಾರ ತಾತಯ್ಯ ಶ್ರೀ ಯೋಗಿ ನಾರಾಯಣ ಯತೀಂದ್ರ ಅವರ ಜಯಂತಿ ಆಚರಣೆ ಕಾರ್ಯಕ್ರಮದಲ್ಲಿ ಭಾವಚಿತ್ರಕ್ಕೆ ಪುಷ್ಪಾರ್ಚನೆ ನೆರವೇರಿಸಿ ಮಾತನಾಡಿದರು.

ಕೈವಾರ ತಾತಯ್ಯನವರು ಕಾಲಜ್ಞಾನಿಗಳಾಗಿ ಭವಿಷ್ಯವಾಣಿಯನ್ನು ನುಡಿದವರು. ಮಾನವ ಪ್ರೀತಿಯನ್ನು ಹಂಚಿದರು. ಭಕ್ತಿ ಮತ್ತು ಯೋಗಗಳ ಮೂಲಕ ಬಹು ಎತ್ತರಕ್ಕೆ ಏರಿದರು ಎಂದರು.
300 ವರ್ಷಗಳ ಹಿಂದೆಯೇ ಮಾನವ ಹೇಗೆ ಬದುಕಬೇಕು ಎಂಬುದರ ಬಗ್ಗೆ ತಮ್ಮದೇ ಆದ ಸರಳ ತತ್ವಗಳ ಮೂಲಕ ಅರ್ಥ ಮಾಡಿಸಿದರು. ಅವರ ಪವಾಡಗಳು ಮಾನವನ ಶ್ರೇಷ್ಠ ಸನ್ಮಾರ್ಗದ ಹಾದಿಗೆ ಮಾರ್ಗದರ್ಶಕವಾಗಿವೆ. ತತ್ವಪದಗಳು ಕಾವ್ಯದ ಪ್ರಕಾರವಾಗಿದ್ದು, ಜೀವನ ವಿಧಾನವನ್ನು ತಿಳಿಸುವ ಸಾಧನ ಮಾರ್ಗವಾಗಿದೆ. ತತ್ವಪದಗಳನ್ನು ಅರ್ಥ ಮಾಡಿಕೊಂಡರೆ ಸಂತೋಷವಾಗಿ, ಮೋಸವಿಲ್ಲದ, ಅಹಂಕಾರವಿಲ್ಲದ ಜೀವನ ನಡೆಸಬಹುದು ಎಂದರು.
ಸತ್ಯ, ಶುದ್ಧ ಹಾಗೂ ಸರಳ ಮಾರ್ಗದ ಮೂಲಕ ಜೀವನವನ್ನು ನಡೆಸಬಹುದು. ಅವರ ತತ್ವಪದಗಳಲ್ಲಿ ಬಡತನದ ನೋವು, ಸುಖ-ದುಃಖ, ಸಾಂತ್ವನ, ಮಾನವ ಪ್ರೀತಿ ಎಲ್ಲವೂ ಸಿಗುತ್ತದೆ. ಕೈವಾರ ತಾತಯ್ಯನವರ ಮಾನವ ಪ್ರೀತಿಯನ್ನು ನಾವೆಲ್ಲರೂ ಅರಿಯಬೇಕು. ಇಂತಹ ಮಹಾಪುರುಷರನ್ನು ಒಂದು ಜಾತಿಗೆ ಸೀಮಿತಗೊಳಿಸದೆ, ಅವರು ಯಾವ ಜಾತಿಯಲ್ಲಿ ಹುಟ್ಟಿದರು ಎನ್ನುವ ಬದಲು ಅವರ ಮೌಲ್ಯದ ಸಿದ್ಧಾಂತವನ್ನು ಅರಿತು ಕೊಂಡು ನಡಿಯೋಣ ಎಂದರು.
ಎಡತೊರೆ ಬಣಜಿಗ ಸಂಘದ ತಾಲೂಕು ಅಧ್ಯಕ್ಷ ಟಿ.ಎನ್.ದಯಾನಂದ್ ಮಾತನಾಡಿ, ಕೈವಾರ ತಾತಯ್ಯ ಅವರು ಮಹಾನ್ ಸಿದ್ದಿ ಹಾಗೂ ಪವಾಡ ಪುರುಷರು, ಆದ್ದರಿಂದಲೇ ಕೈವಾರ ಕ್ಷೇತ್ರ ರಾಜ್ಯದಲ್ಲಿ ಎರಡನೇ ಧರ್ಮಸ್ಥಳ ಕ್ಷೇತ್ರವಾಗಿ ಬೆಳೆಯುತ್ತಿದೆ. ಬಲಿಜ ಸಮಾಜ ಇದುವರೆಗೂ ಪೂರ್ಣ ಪ್ರಮಾಣದಲ್ಲಿ ಸಂಘಟಿತವಾಗಿಲ್ಲ. ಸಂಘಟಿತವಾದರೆ ಆರ್ಥಿಕ ಹಾಗೂ ಶೈಕ್ಷಣಿಕ, ರಾಜಕೀಯವಾಗಿ ಬಲಿಷ್ಠವಾಗಬಹುದು. ಸಮಾಜದ ಜನರನ್ನು ಮೇಲೆತ್ತಲು ಕೈಜೋಡಿಸಬೇಕು. ಪ್ರತಿಯೊಂದು ಸಮಾಜದ ಅಭಿವೃದ್ಧಿಗೆ ಆ ಸಮಾಜದ ಹಲವು ಗಣ್ಯರು, ಗುರುಗಳು ಶ್ರಮಿಸಿದ್ದಾರೆ ಎಂದರು.
ಗ್ರೇಡ್-2 ತಹಸೀಲ್ದಾರ್ ಚಂದ್ರಶೇಖರ್, ಪುರಸಭೆ ಮಾಜಿ ಅಧ್ಯಕ್ಷ ನರಸಿಂಹರಾಜು, ಎಡತೊರೆ ಬಣಜಿಗ ಸಂಘದ ಉಪಾಧ್ಯಕ್ಷ ಬಿ.ವಿ.ರಘುನಾಥ್, ಪ್ರಧಾನ ಕಾರ್ಯದರ್ಶಿ ಮಳಲಿರಾಘು, ಮುಖಂಡರಾದ ಯೋಗೇಶ್ ಕುಮಾರ್, ಬಿ.ವಿ.ನಾಗೇಂದ್ರ, ಬಿ.ವಿ.ನಾಗೇಶ್, ಕರ್ಪೂರವಳ್ಳಿ ಮಂಜುನಾಥ್, ಚೆಲುವರಾಜ್, ಹೊಸೂರು ಕಲ್ಲಹಳ್ಳಿ ರಾಜೇಶ್, ರಾಮಕೃಷ್ಣ, ಸಿ.ವಿ.ಮಂಜುನಾಥ್, ಹೆಚ್.ಡಿ.ಪುಟ್ಟಸ್ವಾಮಿ, ಪೊಸ್ಟ್ ರಾಜೇಶ್, ಸಾ.ರಾ.ನಾಗೇಶ್, ಉಮಾಮಂಜುನಾಥ್, ಮಿರ್ಲೆ ತಿಮ್ಮಶೆಟ್ಟಿ, ಕೃಷ್ಣಪ್ಪ ಇನ್ನಿತರರು ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net