ಉದಯರವಿ ಸ್ಮಾರಕವಾಗಿಸಲಿ

ವಿಜಯನಗರದ ಕನ್ನಡ ಸಾಹಿತ್ಯಭವನದಲ್ಲಿ ಬುಧವಾರ ಉದಯರವಿ ಕುವೆಂಪು ಸ್ಮಾರಕ ಹೋರಾಟ ಸಮಿತಿಯ ಸಭೆ ನೆರವೇರಿತು. ಪ್ರೊ.ಸಿ.ಪಿ.ಕೃಷ್ಣಕುಮಾರ್, ಎಂ.ಮೋಹನ್ ಕುಮಾರ್ ಗೌಡ, ರಾಮ್ ಪ್ರಸಾದ್,ಬೆಳ್ಳಾಳ ಬೆಟ್ಟೇಗೌಡ, ರಂಗಯ್ಯ ಇದ್ದರು.
ವಿಜಯನಗರದ ಕನ್ನಡ ಸಾಹಿತ್ಯಭವನದಲ್ಲಿ ಬುಧವಾರ ಉದಯರವಿ ಕುವೆಂಪು ಸ್ಮಾರಕ ಹೋರಾಟ ಸಮಿತಿಯ ಸಭೆ ನೆರವೇರಿತು. ಪ್ರೊ.ಸಿ.ಪಿ.ಕೃಷ್ಣಕುಮಾರ್, ಎಂ.ಮೋಹನ್ ಕುಮಾರ್ ಗೌಡ, ರಾಮ್ ಪ್ರಸಾದ್,ಬೆಳ್ಳಾಳ ಬೆಟ್ಟೇಗೌಡ, ರಂಗಯ್ಯ ಇದ್ದರು.
Published on
ಮೈಸೂರು: ಕುಪ್ಪಳಿ ಕುವೆಂಪು ಅವರ ಜನ್ಮಭೂಮಿಯಾದರೆ ಮೈಸೂರು ಕರ್ಮಭೂಮಿ. ರಾಜ್ಯ ಸರ್ಕಾರಕ್ಕೆ ಅವರ ಮನೆಯನ್ನು ಸ್ಮಾರಕವಾಗಿಸುವ ಇಚ್ಛಾಶಕ್ತಿ ಇಲ್ಲವಾಗಿದೆ. ಹೀಗಾಗಿ ಹೋರಾಟ ನಡೆಸುವುದು ಅನಿವಾರ್ಯ ಎಂದು ಸಾಹಿತಿ ಪ್ರೊ.ಸಿ.ಪಿ.ಕೃಷ್ಣಕುಮಾರ್ ಹೇಳಿದರು.
ವಿಜಯನಗರದ ಕನ್ನಡ ಸಾಹಿತ್ಯ ಭವನದಲ್ಲಿ ಉದಯರವಿ ಕುವೆಂಪು ಸ್ಮಾರಕ ಹೋರಾಟ ಸಮಿತಿಯು ಬುಧವಾರ ಆಯೋಜಿಸಿದ್ದ ಚಿಂತಕರ ಚಿಂತನಾ ಸಭೆಯಲ್ಲಿ ಮಾತನಾಡಿದರು.
ಕರ್ನಾಟಕ ನವ ನಿರ್ಮಾಣ ಸೇನೆ ಅಧ್ಯಕ್ಷ ಭೀಮಾ ಶಂಕರ್ ಪಾಟೀಲ, ಕುವೆಂಪು ವಿಚಾರದಲ್ಲಿ ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ಅಸಡ್ಡೆ ಮಾಡುತ್ತಿವೆ. ಧಾರವಾಡದಲ್ಲಿ ಬೇಂದ್ರೆ ಮನೆ ಅಭಿವೃದ್ಧಿ ಪಡಿಸಲಾಗಿದೆ. ಕುವೆಂಪು ಮನೆ ಬಗ್ಗೆ ತಾತ್ಸಾರವೇಕೆ? ಕುವೆಂಪು ಅವರನ್ನು ಜಾತಿಗೆ ಸೀಮಿತ ಮಾಡಬಾರದು ಎಂದು ಅಭಿಪ್ರಾಯಪಟ್ಟರು.
ವಾಣಿವಿಲಾಸ ಮೊಹಲ್ಲಾದ ಕುವೆಂಪು ಬಾಳಿದ ಮನೆ ಉದಯರವಿ ಅನ್ನು ರಾಷ್ಟ್ರೀಯ ಸ್ಮಾರಕವಾಗಿ ಅಭಿವೃದ್ಧಿ ಪಡಿಸಲು ರಾಜ್ಯ ಸರ್ಕಾರವು ಬಜೆಟ್‌ನಲ್ಲಿ ಅನುದಾನ ಮೀಸಲಿಡಬೇಕು. ಮರಣೋತ್ತರ ಭಾರತ ರತ್ನ ಶೀಘ್ರದಲ್ಲಿ ಘೋಷಣೆ ಆಗಲಿದ್ದು, ಅಷ್ಟರೊಳಗೆ ಸ್ಮಾರಕ ನಿರ್ಮಾಣವಾಗಲಿ ಎಂದು ಆಗ್ರಹಿಸಿದರು.
ಕರ್ನಾಟಕ ಕಾವಲು ಪಡೆ ಅಧ್ಯಕ್ಷ ಎಂ.ಮೋಹನ್ ಕುಮಾರ್ ಗೌಡ ಮಾತನಾಡಿ, ಸ್ಮಾರಕ ನಿರ್ಮಿಸುವ ಕಾರ್ಯಕ್ಕೆ ಸರ್ಕಾರದ ಅನಾಸಕ್ತಿ ಸಲ್ಲ. ಇದು ಕನ್ನಡಿಗರು ಸಹಿಸಿಕೊಳ್ಳಲಾರದ ಬೆಳವಣಿಗೆ ಎಂದರು.
ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾ ಘಟಕದ ಅಧ್ಯಕ್ಷ ಮಡ್ಡೀಕೆರೆ ಗೋಪಾಲ್, ಕುವೆಂಪು ಮನೆ ಕನ್ನಡಿಗರಿಗೆ ದೇವರ ಮನೆ.ಸ್ಮಾರಕ ಮಾಡಿ ಎಂದು ಹೋರಾಟ ಮಾಡಬೇಕಿರುವುದು ವಿಪರ್ಯಾಸ ಎಂದರು.
ಯುವ ಕನ್ನಡಿಗರ ಸೇನೆ ಸಂಸ್ಥಾಪಕ ರಾಜ್ಯಾಧ್ಯಕ್ಷ ರಾಮ್ ಪ್ರಸಾದ್, ಕರ್ನಾಟಕ ಕ್ರಾಂತಿ ರಂಗ ಅಧ್ಯಕ್ಷ ಮಂಚೇಗೌಡ, ಕಾಂಗ್ರೆಸ್ ಮುಖಂಡ ವೆಂಕಟೇಶ್, ಕರ್ನಾಟಕ ನವ ನಿರ್ಮಾಣ್ ಪಕ್ಷದ ಪಾಟೀಲ್, ಎಎಪಿ ಜಿಲ್ಲಾಧ್ಯಕ್ಷ ರಂಗಯ್ಯ, ಬೆಳ್ಳಾಳ ಬೆಟ್ಟೇಗೌಡ, ಅದಮ್ಯ ಚಂದ್ರು, ವಿದ್ಯಾಸಾಗರ್, ಅರವಿಂದ ಶರ್ಮ ಪಾಲ್ಗೊಂಡಿದ್ದರು.
ವಾಣಿವಿಲಾಸ ಮೊಹಲ್ಲಾದ ಕುವೆಂಪು ಬಾಳಿದ ಮನೆ ಉದಯರವಿ ಅನ್ನು ರಾಷ್ಟ್ರೀಯ ಸ್ಮಾರಕವಾಗಿ ಅಭಿವೃದ್ಧಿ ಪಡಿಸಲು ರಾಜ್ಯ ಸರ್ಕಾರವು ಬಜೆಟ್‌ನಲ್ಲಿ ಅನುದಾನ ಮೀಸಲಿಡಬೇಕು. ಆದಷ್ಟು ಬೇಗ ಈ ಕೆಲಸ ಪೂರ್ಣಗೊಳ್ಳಬೇಕು ಎಂಬ ಬೇಡಿಕೆಗಳನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಸಲ್ಲಿಸಲು ತೀರ್ಮಾನಿಸಲಾಯಿತು. ಜತೆಗೆ ಈ ಸಂಬಂಧ ನಿರ್ಧಾರಕ ಕೈಗೊಳ್ಳಲು 3 ತಿಂಗಳ ಗಡುವು ನೀಡಲು ತೀರ್ಮಾನಿಸಲಾಯಿತು. ಅನುಷ್ಠಾನಗೊಳ್ಳದಿದ್ದರೆ ಬೃಹತ್ ಹೋರಾಟ ನಡೆಸಲು ಮುಖಂಡರು ನಿರ್ಧರಿಸಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net