ರೈತ ಸಂಘಕ್ಕೆ ರಾಜಕೀಯ ತಾಕದಿರಲಿ

 ಕೊಪ್ಪ ಗ್ರಾಮದಲ್ಲಿ ಅಹಿಂದ ರೈತ ಸಂಘದ ಶಾಖೆಯನ್ನು ವಿಧಾನಪರಿಷತ್ ಸದಸ್ಯ ಎಚ್ ವಿಶ್ವನಾಥ್ ಉದ್ಘಾಟಿಸಿದರು. ಸೋಮನಹಳ್ಳಿ ಶಿವಶೇಖರ್, ನವಿಲೂರು ಚೆನ್ನಪ್ಪ, ಲೋಕೇಶ್ ಸಾಗರ್ ಇತರರು ಇದ್ದರು.
ಕೊಪ್ಪ ಗ್ರಾಮದಲ್ಲಿ ಅಹಿಂದ ರೈತ ಸಂಘದ ಶಾಖೆಯನ್ನು ವಿಧಾನಪರಿಷತ್ ಸದಸ್ಯ ಎಚ್ ವಿಶ್ವನಾಥ್ ಉದ್ಘಾಟಿಸಿದರು. ಸೋಮನಹಳ್ಳಿ ಶಿವಶೇಖರ್, ನವಿಲೂರು ಚೆನ್ನಪ್ಪ, ಲೋಕೇಶ್ ಸಾಗರ್ ಇತರರು ಇದ್ದರು.
Published on

ಪ್ರಮುಖ ಮುಖ್ಯಾಂಶಗಳು

  • farmers' association.
ಬೈಲುಕುಪ್ಪೆ: ಕರ್ನಾಟಕ ಅಹಿಂದ ರೈತ ಸಂಘ ಕಟ್ಟಿ ಬೆಳೆಸುವುದು ಒಳ್ಳೆಯ ಕಾರ್ಯ. ಇದಕ್ಕೆ ರಾಜಕೀಯ ತರಬಾರದು ಎಂದು ವಿಧಾನಪರಿಷತ್ ಸದಸ್ಯ ಎಚ್. ವಿಶ್ವನಾಥ್ ತಿಳಿಸಿದರು.
ಪಿರಿಯಾಪಟ್ಟಣ ತಾಲೂಕಿನ ಕೊಪ್ಪ ಗ್ರಾಮದಲ್ಲಿ ಮಂಗಳವಾರ ಕರ್ನಾಟಕ ರಾಜ್ಯ ಅಹಿಂದ ರೈತ ಸಂಘದ ತಾಲೂಕು ಶಾಖೆ ಉದ್ಘಾಟಿಸಿ ಮಾತನಾಡಿದ ಅವರು, ಪ್ರೊ.ಎಂ.ಡಿ. ನಂಜುಂಡಸ್ವಾಮಿ ಕರ್ನಾಟಕ ರಾಜ್ಯ ರೈತ ಸಂಘ ಕಟ್ಟಿ ಬೆಳೆಸಿದಾಗ ಸರ್ಕಾರವೇ ನಡುಗುವಂತಹ ಚಳವಳಿ ಪ್ರಾರಂಭಿಸಿದರು. ಇದಕ್ಕೆ ರಾಜಕೀಯ ಬೆರೆತಾಗ ಸಂಘವೇ ಒಡೆದ ಮನೆಯಾಯಿತು. ಅಹಿಂದ ರೈತ ಸಂಘ ಉತ್ತಮ ರೀತಿಯಲ್ಲಿ ಮುನ್ನಡೆಯಲಿ ಎಂದು ತಿಳಿಸಿದರು.
ರಾಜ್ಯದಲ್ಲಿ ಸರ್ಕಾರಿ ಶಾಲೆಗಳು ಮುಚ್ಚುತ್ತಿವೆ. ಸರ್ಕಾರ ಇಂದು ಅನ್ನ ಕೊಟ್ಟು ಅಕ್ಷರ ಕೊಡುತ್ತಿಲ್ಲ. ಅಕ್ಷರ, ಆರೋಗ್ಯ ಉಚಿತವಾಗಿ ಕೊಟ್ಟರೆ ಅನ್ನ ಹುಟ್ಟುತ್ತದೆ. ದೇವರಾಜ ಅರಸು ಅವರು 21 ಲಕ್ಷ ಎಕರೆ ಭೂಮಿಯನ್ನು ಉಳುವವನು ಒಡೆಯ ಪದ್ಧತಿಯಲ್ಲಿ ಬಡ ರೈತರಿಗೆ ನೀಡಿದರು. ಅವರು ಎಂದಿಗೂ ನಾನು ಕೊಟ್ಟಿದ್ದು ಎನ್ನಲಿಲ್ಲ. ಈಗ ಕೇಂದ್ರದಿಂದ ಆಹಾರ ಪದಾರ್ಥಗಳನ್ನು ಉಚಿತವಾಗಿ ಪಡೆದು ‘ನಾನು ಕೊಡುತ್ತಿದ್ದೇನೆ’ ಎಂದು ಸಿಎಂ ಸಿದ್ದರಾಮಯ್ಯ ಸುಳ್ಳು ಹೇಳುತ್ತಾರೆ ಎಂದು ವ್ಯಂಗ್ಯವಾಡಿದರು.
ಅಹಿಂದ ರೈತ ಸಂಘದ ಅಧ್ಯಕ್ಷ ಸೋಮನಹಳ್ಳಿ ಶಿವಶೇಖರ್ ಮಾತನಾಡಿ, ಮಹನೀಯರ ಆದರ್ಶಗಳ ಅಡಿ ಸಂಘಟನೆ ಪ್ರಾರಂಭಿಸುತ್ತೇವೆ. ಜನಸಾಮಾನ್ಯರಿಗೆ ನ್ಯಾಯ ಕೊಡಿಸುವುದು ನಮ್ಮ ಗುರಿಯಾಗಿದೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ನಿವೃತ್ತ ಯೋಧ ಬೋಪಯ್ಯ, ಪ್ರಗತಿಪರ ರೈತ ಮಂಚದೇವನಹಳ್ಳಿ ಭರತ್ ರಾಜ್ ಅರಸ್, ಫ್ರಾನ್ಸ್ ಶಿವಪ್ಪ ಅವರನ್ನು ಸನ್ಮಾನಿಸಲಾಯಿತು.
ಸಂಘದ ರಾಜ್ಯ ಮಹಿಳಾ ಕಾರ್ಯದರ್ಶಿಯಾಗಿ ಮಮತಾ ಮತ್ತು ಜಿಲ್ಲಾ ಮಹಿಳಾ ಅಧ್ಯಕ್ಷರಾಗಿ ಕೊಪ್ಪ ಅನುಪಮಾ ಅವರನ್ನು ಆಯ್ಕೆ ಮಾಡಲಾಯಿತು. ಡಾ. ಲೋಹಿತ್, ಕಸಾಪ ಕೊಡಗು ಜಿಲ್ಲಾಧ್ಯಕ್ಷ ಲೋಕೇಶ ಸಾಗರ್, ರಾಜ್ಯ ಉಪಾಧ್ಯಕ್ಷ ನವಿಲೂರು ಚೆನ್ನಪ್ಪ, ಪ್ರಧಾನ ಕಾರ್ಯದರ್ಶಿ ವಾಸುದೇವ ರೆಡ್ಡಿ ,ರಾಜ್ಯ ಮಹಿಳಾ ಅಧ್ಯಕ್ಷ ಉಮಾಕ್ಷಿ ಗೌಡ, ಉಪಾಧ್ಯಕ್ಷೆ ಭಾಗ್ಯ ಗೌಡ, ದಿವ್ಯ, ಜ್ಯೋತಿ, ಬೆಂಬತ್ತಿ ಚಂದ್ರು, ತಾಲೂಕ ಅಧ್ಯಕ್ಷ ಸಿದ್ದೇಗೌಡ, ಮುಖಂಡರಾದ ಟಿ. ಈರಯ್ಯ, ವಿಜಯಕುಮಾರ್, ಮಂಜೇಶ್, ಶಿವು, ದೇವಿ ಕುಮಾರ್, ವೀಣಾ, ಮಹದೇವ್, ಸುಜಾತಾ ಇತರರು ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net