ಹೊಸ ಹುರುಪಿನಿಂದ ಯುವಕರು ಸಂಘಟನೆಯಲ್ಲಿ ತೊಡಗಿಕೊಳ್ಳಲಿ

ಎಚ್.ಡಿ.ಕೋಟೆಯ ತಾಲೂಕು ಆಡಳಿತ ಸೌಧದ ಆವರಣದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ವಿದ್ಯಾಸಾಗರ್ ಮಾತನಾಡಿದರು.
ಎಚ್.ಡಿ.ಕೋಟೆಯ ತಾಲೂಕು ಆಡಳಿತ ಸೌಧದ ಆವರಣದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ವಿದ್ಯಾಸಾಗರ್ ಮಾತನಾಡಿದರು.
Published on

ಪ್ರಮುಖ ಮುಖ್ಯಾಂಶಗಳು

  • ರೈತ ಸಂಘದ ರಾಜ್ಯ ಕಾರ್ಯಾಧ್ಯಕ್ಷ ವಿದ್ಯಾಸಾಗರ್
  • ತಾಲೂಕು ಆಡಳಿತ ಸೌಧದ ಆವರಣ
ಎಚ್.ಡಿ.ಕೋಟೆ: ಹೊಸ ಹುರುಪಿನಿಂದ ಯುವಕರು ರೈತ ಸಂಘಟನೆಯನ್ನು ಕಟ್ಟಬೇಕಿದ್ದು, ಹೋರಾಟಕ್ಕೆ ಕರೆ ನೀಡಿದಾಗ ಹತ್ತು ಸಾವಿರ ಜನರು ಬರುವಂತಾಗಬೇಕು ಎಂದು ರೈತ ಸಂಘದ ರಾಜ್ಯ ಕಾರ್ಯಾಧ್ಯಕ್ಷ ವಿದ್ಯಾಸಾಗರ್ ತಿಳಿಸಿದರು.
ಪಟ್ಟಣದ ತಾಲೂಕು ಆಡಳಿತ ಸೌಧದ ಆವರಣದಲ್ಲಿ ರಾಜ್ಯ ರೈತ ಸಂಘ-ಹಸಿರು ಸೇನೆ ವತಿಯಿಂದ ಸೋಮವಾರ ಆಯೋಜಿಸಿದ್ದ ರೈತರ ಕುಂದುಕೊರತೆ ಹಾಗೂ ಹಕ್ಕೊತ್ತಾಯ ಮಂಡನೆ ಕಾರ್ಯಕ್ರಮದಲ್ಲಿ ಮಾತನಾಡಿದರು. ರೈತ ಸಂಘದಿಂದ ಸಾವಿರಾರು ಕುಟುಂಬದಲ್ಲಿ ಬೆಳಕು ಮೂಡಿದ್ದು, ಸಂಘಟನೆಗೆ ಪ್ರಾಮುಖ್ಯ ಇರುವವರು ಬರಬೇಕು ಎಂದರು.
ಉದ್ಯೋಗ ಖಾತ್ರಿ ಯೋಜನೆಯನ್ನು ಬದಲಾವಣೆ ಮಾಡಿ ರೈತರ ಬದುಕು ಕಸಿದುಕೊಳ್ಳಲಾಗಿದೆ. ಸರ್ಕಾರ ನೀಡಿದಾಗ ಮಾತ್ರ ಈಗ ಉದ್ಯೋಗ ಮಾಡಬೇಕು. ಮೊದಲು ಹಾಗೆ ಇರಲಿಲ್ಲ. ನಾವೇ ನಿರ್ಧಾರ ಮಾಡಬಹುದಾಗಿತ್ತು ಎಂದು ತಿಳಿಸಿದರು.
ರೈತ ಮುಖಂಡ ಇಮ್ಮಾವು ರಘು ಮಾತನಾಡಿ, ಲಂಚ ಇಲ್ಲದೆ ಕೆಲಸ ಆಗುತ್ತಿಲ್ಲ. ತಳಮಟ್ಟದಿಂದ ಸಂಘಟನೆ ಬಲವರ್ಧನೆ ಮಾಡಬೇಕು. ಸಂಘಟನೆ ದನಿ ಇಲ್ಲದವರಿಗೆ ಕೆಲಸ ಮಾಡಿಕೊಡಬೇಕು ಎಂದು ತಿಳಿಸಿದರು.
ಇದೇ ಸಂದರ್ಭದಲ್ಲಿ ತಹಸೀಲ್ದಾರ್ ಶ್ರೀನಿವಾಸ್ ಅವರಿಗೆ ವಿವಿಧ ಬೇಡಿಕೆ ಪತ್ರ ಇರುವ ಮನವಿ ಪತ್ರವನ್ನು ಸಲ್ಲಿಸಲಾಯಿತು. ಮುಖಂಡರಾದ ಸತೀಶ್, ತಿಮ್ಮನಾಯಕ, ಮಾದೇವನಾಯಕ, ನಂಜುಂಡ ಮೂರ್ತಿ, ಚೌಡಹಳ್ಳಿ ಜವರಯ್ಯ ಇದ್ದರು.
ನೂತನ ತಾಲೂಕು ಸಮಿತಿ ಆಯ್ಕೆ: ಅಧ್ಯಕ್ಷರಾಗಿ ಬೋರೇಗೌಡ, ಉಪಾಧ್ಯಕ್ಷರಾಗಿ ಚಿಕ್ಕಬೋರೇಗೌಡ, ಖಜಾಂಚಿ ಯಾಗಿ ಮಲ್ಲೇಶ್, ಕಾರ್ಯದರ್ಶಿಯಾಗಿ ಶಿವನಂದ, ಕಾರ್ಯ ಅಧ್ಯಕ್ಷರಾಗಿ ನಾಗರಾಜು ಪಿ, ಸಂಘಟನಾ ಕಾರ್ಯದರ್ಶಿಯಾಗಿ ಕೆ.ನಾರಾಯಣ ಸ್ವಾಮಿ, ಚಿನ್ನರಾಜು, ಚೌಡನಾಯಕ, ರಾಜಣ್ಣ, ವಿನೋದ್, ಶಾಂತ ಕುಮಾರಿ, ಚೌರಮ್ಮ, ನಂದೀಶ್, ಕಾರ್ತಿಕ್ ಅವರನ್ನು ಆಯ್ಕೆ ಮಾಡಲಾಯಿತು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net