ನಾಯಕತ್ವ ಬದಲಾವಣೆ ಗೊಂದಲ ಹೈಕಮಾಂಡ್ ಬಗೆಹರಿಸಲಿ: ಶಾಸಕ ರಾಜಣ್ಣ ಆಗ್ರಹ

 ಮಧುಗಿರಿ ಕ್ಷೇತ್ರದ ಕಾಂಗ್ರೆಸ್ ಶಾಸಕ ಕೆ.ಎನ್.ರಾಜಣ್ಣ
ಮಧುಗಿರಿ ಕ್ಷೇತ್ರದ ಕಾಂಗ್ರೆಸ್ ಶಾಸಕ ಕೆ.ಎನ್.ರಾಜಣ್ಣ
Published on

ಪ್ರಮುಖ ಮುಖ್ಯಾಂಶಗಳು

  • ಮಧುಗಿರಿ ಕ್ಷೇತ್ರದ ಕಾಂಗ್ರೆಸ್ ಶಾಸಕ ಕೆ.ಎನ್.ರಾಜಣ್ಣ ಹೇಳಿಕೆ
  • ತೀರ್ಮಾನ ತಡವಾದಷ್ಟು ಅದು ಪಕ್ಷಕ್ಕೆ ಮತ್ತು ಸರ್ಕಾರದ ಮೇಲೆ ಪರಿಣಾಮ ಬೀರುತ್ತದೆ
  • ಎರಡು ಆಯ್ಕೆಯನ್ನು ಬಿಟ್ಟು ಬರೀ ಗೊಂದಲವೇ ಇದ್ದರೆ ಅದು ಎಲ್ಲ ರೀತಿಯ ಸಮಸ್ಯೆಗೂ ಕಾರಣ
ಮೈಸೂರು: ಸಿಎಂ ಬದಲಾಗುತ್ತಾರೆ ಎಂದು ಹೇಳಲ್ಲ. ಅವರೇ ಇರುತ್ತಾರೆ ಎಂದೂ ಹೇಳಲ್ಲ ಎಂದು ಮಧುಗಿರಿ ಕ್ಷೇತ್ರದ ಕಾಂಗ್ರೆಸ್ ಶಾಸಕ ಕೆ.ಎನ್.ರಾಜಣ್ಣ ಹೇಳಿದರು.
ನಗರದಲ್ಲಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಮನೆಗೆ ಗುರುವಾರ ಭೇಟಿ ನೀಡಿ ಮಾತುಕತೆ ನಡೆಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿ, ಕಾಂಗ್ರೆಸ್ ಹೈಕಮಾಂಡ್ ಅತಿ ಬೇಗ ಜಾಗರೂಕವಾಗಿ ನಿರ್ಧಾರ ತೆಗೆದುಕೊಳ್ಳಲಿ.
 ಆದರೆ, ತೀರ್ಮಾನ ತಡವಾದಷ್ಟು ಅದು ಪಕ್ಷಕ್ಕೆ ಮತ್ತು ಸರ್ಕಾರದ ಮೇಲೆ ಪರಿಣಾಮ ಬೀರುತ್ತದೆ ಎಂದು ಆತಂಕವ್ಯಕ್ತಪಡಿಸಿದರು. 
ಸಿದ್ದರಾಮಯ್ಯ ಅವರಿಗೆ ‘ನೀವೇ ಸಿಎಂ ಸ್ಥಾನದಲ್ಲಿ ಮುಂದುವರಿಯಿರಿ’ ಎಂದು ಹೈಕಮಾಂಡ್ ಹಸಿರು ನಿಶಾನೆ ತೋರಿಸಲಿ. ಇಲ್ಲವೇ ಸಿಎಂ ಬದಲಾವಣೆ ಮಾಡುತ್ತೇವೆ ಎಂಬುದಾದರೂ ಹೇಳಲಿ.
ಎರಡು ಆಯ್ಕೆಯನ್ನು ಬಿಟ್ಟು ಬರೀ ಗೊಂದಲವೇ ಇದ್ದರೆ ಅದು ಎಲ್ಲ ರೀತಿಯ ಸಮಸ್ಯೆಗೂ ಕಾರಣವಾಗುತ್ತದೆ ಎಂದು ಎಚ್ಚರಿಸಿದರು.
ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್‌ರಿಗೆ ಅಧಿಕಾರದ ಆಸೆ ಇರುವುದು ಸಹಜ. ಅವರು ನಮ್ಮ ಪಕ್ಷದ ಅಧ್ಯಕ್ಷರು. ಹೀಗಾಗಿ, ಸಿಎಂ ಕುರ್ಚಿ ಮೇಲೆ ಜಾಸ್ತಿಯೇ ಆಸೆ ಇದೆ. ಅದು ತಪ್ಪು ಕೂಡ ಅಲ್ಲ ಎಂದು ಹೇಳಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net