ವಿದ್ಯಾರ್ಥಿಗಳು ನೀರಿನ ಮಹತ್ವ ಕುರಿತು ಅರಿವು ಮೂಡಿಸಲಿ

ಹುಣಸೂರು ತಾಲೂಕು ಹುಲ್ಯಾಳು ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ವತಿಯಿಂದ ಜಲಸಂರಕ್ಷಣೆ ಕುರಿತು ಅರಿವು ಜಾಥಾ ನಡೆಸಲಾಯಿತು. ವಸಂತಕುಮಾರ್, ಬಿ.ವಿ.ದೇವಪ್ಪ, ಉಮೇಶ್‌ರಾವ್ ಶಿಂಧೆ, ಬಸವರಾಜು ಇತರರಿದ್ದರು.
ಹುಣಸೂರು ತಾಲೂಕು ಹುಲ್ಯಾಳು ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ವತಿಯಿಂದ ಜಲಸಂರಕ್ಷಣೆ ಕುರಿತು ಅರಿವು ಜಾಥಾ ನಡೆಸಲಾಯಿತು. ವಸಂತಕುಮಾರ್, ಬಿ.ವಿ.ದೇವಪ್ಪ, ಉಮೇಶ್‌ರಾವ್ ಶಿಂಧೆ, ಬಸವರಾಜು ಇತರರಿದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಮುಳ್ಳೂರು ಕ್ಲಸ್ಟರ್‌ನ ಸಂಪನ್ಮೂಲ ವ್ಯಕ್ತಿ ವಸಂತಕುಮಾರ ಸಲಹೆ
ಹುಣಸೂರು : ನೀರು ಕೇವಲ ಜೀವಜಲ ಮಾತ್ರವಲ್ಲ, ಅದು ಸಕಲ ಜೀವರಾಶಿಗಳ ಉಸಿರಿನ ತಾಣ ಎಂದು ಮುಳ್ಳೂರು ಕ್ಲಸ್ಟರ್‌ನ ಸಂಪನ್ಮೂಲ ವ್ಯಕ್ತಿ ಎಸ್.ವಸಂತಕುಮಾರ ಅಭಿಪ್ರಾಯಪಟ್ಟರು. 
ತಾಲೂಕಿನ ಗಾವಡಗೆರೆ ಹೋಬಳಿಯ ಹುಲ್ಯಾಳು ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ಇಕೋಕ್ಲಬ್ ವತಿಯಿಂದ ಗ್ರಾಮದ ಹುಲ್ಯಾಳು ಕೆರೆಯಂಗಳದಲ್ಲಿ ಶನಿವಾರ ಆಯೋಜಿಸಿದ್ದ ಜಲಸಂರಕ್ಷಣೆ ಅರಿವು ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು.
ಭೂಗ್ರಹ ಶೇ.70 ರಷ್ಟು ನೀರಿನಿಂದ ಆವೃತ್ತವಾಗಿದ್ದು, ಅದರಲ್ಲಿ ಶೇ.97 ರಷ್ಟು ಉಪ್ಪು ನೀರಿನಿಂದ ಕೂಡಿದೆ. ಉಳಿದ ಶೇ.3 ರಷ್ಟು ಸಿಹಿ ನೀರಿನಿಂದ ಕೂಡಿದೆ. ಸಿಹಿನೀರಿನ ಶೇ. 79ರಷ್ಟು ಹಿಮ ನೀರಿನಿಂದ ಕೂಡಿದ್ದು, ಉಳಿದ ಶೇ. 20 ರಷ್ಟು ಅಂತರ್ಜಲವಾಗಿದೆ. ಈ ಪೈಕಿ  ಕೇವಲ ಶೇ.1ರಷ್ಟು ಮಾತ್ರ ದಿನನಿತ್ಯ ಕುಡಿಯಲು ಯೋಗ್ಯವಾದ ನೀರು ಆಗಿದ್ದು, ನೀರಿನ ಮಹತ್ವ ಎಷ್ಟಿದೆ ಎಂಬುದನ್ನು ಇದರಿಂದ ಅರಿತುಕೊಳ್ಳಬಹುದಾಗಿದೆ. ಪ್ರತಿಹನಿ ನೀರು ಒಂದು ಕುಟುಂಬದ ಆಸ್ತಿಯಾಗುತ್ತದೆ. ವಿದ್ಯಾರ್ಥಿಗಳು ತಮ್ಮ ಮನೆಗಳಲ್ಲಿ ನೀರಿನ ಮಹತ್ವ ಮತ್ತು ಅದರ ಸದ್ಬಳಕೆ ಕುರಿತು ಪಾಲಕರು ಮತ್ತು ಗ್ರಾಮಸ್ಥರಿಗೆ ಅರಿವು ಮೂಡಿಸಬೇಕೆಂದರು.
ಕಾರ್ಯಕ್ರಮದ ಅಂಗವಾಗಿ ಗ್ರಾಮದ ಪ್ರಮುಖ ಬೀದಿಗಳಲ್ಲಿ ಎಸ್‌ಡಿಎಂಸಿ ಸಹಯೋಗದೊಂದಿಗೆ ಪರಿಸರ ರಕ್ಷಣೆ ಕುರಿತಂತೆ ಜಾಥಾ ಮಾಡಿ ಬಿತ್ತಿಪತ್ರಗಳನ್ನು ಮನೆಮನೆಗೆ ವಿತರಿಸಲಾಯಿತು. ಕಾರ್ಯಕ್ರಮದಲ್ಲಿ ಎಸ್‌ಡಿಎಂಸಿ ಅಧ್ಯಕ್ಷ ಉಮೇಶರಾವ್ ಶಿಂಧೆ, ಮುಖ್ಯ ಶಿಕ್ಷಕ ಬಿ.ವಿ.ದೇವಪ್ಪ, ಸಹಶಿಕ್ಷಕ ಬಸವರಾಜು, ಪಾಲಕರು, ಗ್ರಾಮಸ್ಥರು, ಶಾಲಾ ಮಕ್ಕಳು ಉಪಸ್ಥಿತರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net