ಭಾಷೆ ಉಳಿವಿಗಾಗಿ ಕನ್ನಡಪರ ಸಂಘಟನೆಗಳು ಒಂದಾಗಲಿ

 ಕಿರು ರಂಗಮಂದಿರದಲ್ಲಿ ಆಯೋಜಿಸಿದ್ದ ಕನ್ನಡ ಜಾಗೃತಿ ಸಮಾವೇಶದಲ್ಲಿ ಸಾಧಕರಿಗೆ ಕನ್ನಡ ಮಾಣಿಕ್ಯ ವಿಶೇಷ ಪ್ರಶಸ್ತಿ ಪ್ರದಾನ ಮಾಡಲಾಯಿತು. ಜಿ.ಟಿ.ದೇವೇಗೌಡ, ಎಂ.ಕೆ.ಸೋಮಶೇಖರ್, ಕೆ.ಆರ್.ಕುಮಾರ್, ಎಂ.ಯು.ಶೈಲಜಾ, ಬಿ.ಸುಂದರ್, ಕಮಲಾ ನಟರಾಜು ಇನ್ನಿತರರಿದ್ದರು.
ಕಿರು ರಂಗಮಂದಿರದಲ್ಲಿ ಆಯೋಜಿಸಿದ್ದ ಕನ್ನಡ ಜಾಗೃತಿ ಸಮಾವೇಶದಲ್ಲಿ ಸಾಧಕರಿಗೆ ಕನ್ನಡ ಮಾಣಿಕ್ಯ ವಿಶೇಷ ಪ್ರಶಸ್ತಿ ಪ್ರದಾನ ಮಾಡಲಾಯಿತು. ಜಿ.ಟಿ.ದೇವೇಗೌಡ, ಎಂ.ಕೆ.ಸೋಮಶೇಖರ್, ಕೆ.ಆರ್.ಕುಮಾರ್, ಎಂ.ಯು.ಶೈಲಜಾ, ಬಿ.ಸುಂದರ್, ಕಮಲಾ ನಟರಾಜು ಇನ್ನಿತರರಿದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಭಾಷೆ ಉಳಿದರೆ ನಾಡು ಉಳಿಯಲಿದೆ.
  • ಭಾಷೆಯ ಉಳಿವಿಗೆ ಹೋರಾಟ ಮಾಡುವ ಅನಿವಾರ್ಯತೆ ರಾಜ್ಯದಲ್ಲಿ ಮಾತ್ರ
  • ಕನ್ನಡಿಗರಿಗೆ ಸರಿಯಾದ ರೀತಿಯಲ್ಲಿ ಉದ್ಯೋಗ ಸಿಗುವುದಿಲ್ಲ.
ಮೈಸೂರು: ರಾಜ್ಯದಲ್ಲಿರುವ ಎಲ್ಲ ಕನ್ನಡಪರ ಸಂಘಟನೆಗಳು ಭಾಷೆಯ ಉಳಿವಿಗಾಗಿ ಒಂದಾಗಬೇಕು ಎಂದು ಶಾಸಕ ಜಿ.ಟಿ.ದೇವೇಗೌಡ ಹೇಳಿದರು.
ಕನ್ನಡ ಸೇನೆ ವತಿಯಿಂದ ಕಿರುರಂಗಮಂದಿರದಲ್ಲಿ ಸೋಮವಾರ ಆಯೋಜಿಸಿದ್ದ ಕನ್ನಡ ಜಾಗೃತಿ ಸಮಾವೇಶ, ಕನ್ನಡ ರಾಜ್ಯೋತ್ಸವ, ಕನ್ನಡ ಮಾಣಿಕ್ಯ ವಿಶೇಷ ಪ್ರಶಸ್ತಿ ಪ್ರದಾನ ಕಾರ್ಯಕ್ರಮದಲ್ಲಿ ಮಾತನಾಡಿದರು. 
ಕನ್ನಡ  ನಾಡು-ನುಡಿ, ಜಲ-ನೆಲ, ಭಾಷೆಯ ಬಗ್ಗೆ ಅಪಾರವಾದ ಅಭಿಮಾನ ಇಟ್ಟುಕೊಂಡು ಭಾಷೆಯನ್ನು ಉಳಿಸಲು ಪ್ರಯತ್ನ ಮಾಡಲಾಗುತ್ತಿದೆ. ಭಾಷೆ ಉಳಿದರೆ ನಾಡು ಉಳಿಯಲಿದೆ. ಕನ್ನಡಕ್ಕೆ ಎರಡೂವರೆ ಸಾವಿರ ವರ್ಷಗಳಿಗೂ ಹೆಚ್ಚು ಇತಿಹಾಸವಿದೆ. ಕನ್ನಡ ಭಾಷೆಗೆ ತನ್ನದೇ ಆದ ಮಹತ್ವ ಇರುವುದನ್ನು ಅರಿತುಕೊಳ್ಳಬೇಕು ಎಂದರು. 
ಕನ್ನಡಿಗರು ಸಹೃದಯಿಗಳು. ಬೇರೆಯವರನ್ನು ಪ್ರೀತಿಸುವ, ಅಪ್ಪಿಕೊಳ್ಳುವ ಕೆಲಸವನ್ನು ಮೊದಲಿನಿಂದಲೂ ಮಾಡಿಕೊಂಡು ಬಂದಿದ್ದು, ಬೇರೆ ರಾಜ್ಯಗಳಲ್ಲಿ ಬೇರೆಯವರನ್ನು ಪ್ರೀತಿಸುವ ಕಾಯಕ ಇಲ್ಲ. ಅವರವರ ಭಾಷೆಗೆ ಗಮನಹರಿಸುತ್ತಾರೆ. ಭಾಷೆಯ ಉಳಿವಿಗೆ ಹೋರಾಟ ಮಾಡುವ ಅನಿವಾರ್ಯತೆ ರಾಜ್ಯದಲ್ಲಿ ಮಾತ್ರ ಇದೆ. ಬೇರೆ ರಾಜ್ಯಗಳಲ್ಲಿ ಅಂತಹ ಸನ್ನಿವೇಶ ಕಾಣಿಸುತ್ತಿಲ್ಲ ಎಂದು ಹೇಳಿದರು.
ಬೆಂಗಳೂರಿನಲ್ಲಿ ಇಂದಿಗೂ ಕನ್ನಡಕ್ಕೆ ಹೋರಾಟ ಮಾಡಬೇಕಾಗಿದೆ. ಅನ್ಯಭಾಷಿಕರ ಹಾವಳಿ ತಡೆಯುವುದು, ಕನ್ನಡ ನಾಮಫಲಕ ಅಳವಡಿಕೆಗೆ ಹೋರಾಟ ಮಾಡಬೇಕಿದೆ. 
ರಾಜ್ಯದಲ್ಲಿ ಆರಂಭಿಸುವ ಕೈಗಾರಿಕೆಗಳಲ್ಲಿ ಬೇರೆ ರಾಜ್ಯದವರಿಗೆ ಉದ್ಯೋಗ ಸಿಗುತ್ತದೆಯೇ ಹೊರತು ಕನ್ನಡಿಗರಿಗೆ ಸರಿಯಾದ ರೀತಿಯಲ್ಲಿ ಉದ್ಯೋಗ ಸಿಗುವುದಿಲ್ಲ. ಕನ್ನಡಿಗರು ತಂತ್ರಜ್ಞಾನ ಕಲಿಯಬೇಕು. ನಾವು ಎಲ್ಲ ರೀತಿಯ ಶಿಕ್ಷಣ ಕಲಿತು ಸಮರ್ಥವಾಗಿ ಕೆಲಸ ಮಾಡುತ್ತೇವೆ ಎನ್ನುವುದನ್ನು ಪ್ರದರ್ಶಿಸಬೇಕು ಎಂದು ಸಲಹೆ ನೀಡಿದರು.
ವಿವಿಧ ಕ್ಷೇತ್ರಗಳ ಸಾಧಕರಾದ ಡಾ.ವಿಕ್ರಮ್, ಜಯಕೀರ್ತಿ, ಸರ್ವಮಂಗಳಾ, ಕೆ.ಸೌಭಾಗ್ಯವತಿ, ಕೆ.ಸಂಗೀತಾ, ಪುನೀತ್, ಚಂದನ್‌ಗೌಡ, ಜಯಮ್ಮ, ಪ್ರಣತಿ ಪ್ರಕಾಶ್, ಲೋಹಿತ್ ಹನುಮಂತಪ್ಪ, ಕಾರ್ತಿಕ್ ನಾಯಕ್, ರಾಚಪ್ಪ ಮತ್ತಿತರಿಗೆ ಕನ್ನಡ ಮಾಣಿಕ್ಯ ವಿಶೇಷ ಪ್ರಶಸ್ತಿ ಪ್ರದಾನ ಮಾಡಲಾಯಿತು. 
ಮಾಜಿ ಶಾಸಕ ಎಂ.ಕೆ.ಸೋಮಶೇಖರ್, ಕನ್ನಡ ಸೇನೆಯ ಅಧ್ಯಕ್ಷ ಕೆ.ಆರ್.ಕುಮಾರ್, ಜಿಲ್ಲಾಧ್ಯಕ್ಷರಾದ ಎಂ.ಯು.ಶೈಲಜಾ, ಬಿ.ಸುಂದರ್, ಗೌರವಾಧ್ಯಕ್ಷೆ ಕಮಲಾ ನಟರಾಜು, ಜಿಲ್ಲಾ ಉಪಾಧ್ಯಕ್ಷರಾದ ಹರೀಶ್, ಎಂ.ಮಲ್ಲೇಶ್, ಪದಾಧಿಕಾರಿಗಳಾದ ಶಶಿಕಲಾ, ಯಶೋಧಮ್ಮ, ಶಶಿ, ಸಿದ್ದರಾಜು, ದ್ರಾಕ್ಷಾಯಿಣಿ, ಸುನೀಲ್ ನಾಗ್, ಪ್ರಜ್ವಲ್, ರಾಚು, ಕಾಳಸ್ವಾಮಿ ಇನ್ನಿತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net