ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಹಿರಿಯ ವಕೀಲ ಎನ್.ಸುಂದರ್ ರಾಜ್ ಮಾತನಾಡಿ, 2025ರ ಸಮೀಕ್ಷೆಯ ಪ್ರಕಾರ ದೇಶದಲ್ಲಿ ಇನ್ನೂ 74.3 ಲಕ್ಷ ಮಕ್ಕಳು ಬಾಲಕಾರ್ಮಿಕರಾಗಿ ದುಡಿಯುತ್ತಿರುವುದು ಕಂಡುಬಂದಿದೆ. ಈ ಪೈಕಿ ಉತ್ತರ ಪ್ರದೇಶ ಶೇ.30ರಷ್ಟು ಬಾಲಕಾರ್ಮಿಕರೊಂದಿಗೆ ಮೊದಲ ಸ್ಥಾನದಲ್ಲಿದ್ದರೆ, ಬಿಹಾರ (ಶೇ.12), ಮಹಾರಾಷ್ಟ್ರ (ಶೇ.8), ರಾಜಸ್ತಾನ (ಶೇ.6) ನಂತರದ ಸ್ಥಾನಗಳಲ್ಲಿವೆ. ಆದರೆ, ಆಶಾದಾಯಕ ಬೆಳವಣಿಗೆಯಾಗಿ 2025ರಲ್ಲೇ ಸುಮಾರು 44,902 ಬಾಲಕಾರ್ಮಿಕರನ್ನು ವಿವಿಧ ಕಡೆಗಳಿಂದ ರಕ್ಷಿಸಿ, ಮುಖ್ಯವಾಹಿನಿಗೆ ತರಲಾಗಿದೆ ಎಂದು ಹೇಳಿದರು.