ವಿದ್ಯಾರ್ಥಿಗಳಿಗೆ ಕಲಿಕೆ ಮನೋಭಾವ ಮುಖ್ಯ

 ಬೆಟ್ಟದಪುರ ಎಸ್‌ಎಂಎಸ್ ಪದವಿ ಪೂರ್ವ ಕಾಲೇಜಿನಲ್ಲಿ ಆಯೋಜಿಸಿದ್ದ ರಾಷ್ಟ್ರೀಯ ಸೇವಾ ಯೋಜನೆ ಘಟಕ-2ನ್ನು ಗಣ್ಯರು ಉದ್ಘಾಟಿಸಿದರು.ಎಚ್.ಎಂ.ನಾಗರಾಜರಾವ್ ಕಲ್ಕಟ್ಟೆ,  ಬಿ.ವಿ.ಮಂಜುನಾಥ್, ಎ.ವಿ.ಛಾಯಾ, ರೇಖಾ ನಾಗರಾಜರಾವ್ ಇತರರು ಇದ್ದರು.
ಬೆಟ್ಟದಪುರ ಎಸ್‌ಎಂಎಸ್ ಪದವಿ ಪೂರ್ವ ಕಾಲೇಜಿನಲ್ಲಿ ಆಯೋಜಿಸಿದ್ದ ರಾಷ್ಟ್ರೀಯ ಸೇವಾ ಯೋಜನೆ ಘಟಕ-2ನ್ನು ಗಣ್ಯರು ಉದ್ಘಾಟಿಸಿದರು.ಎಚ್.ಎಂ.ನಾಗರಾಜರಾವ್ ಕಲ್ಕಟ್ಟೆ, ಬಿ.ವಿ.ಮಂಜುನಾಥ್, ಎ.ವಿ.ಛಾಯಾ, ರೇಖಾ ನಾಗರಾಜರಾವ್ ಇತರರು ಇದ್ದರು.
Published on
ಬೆಟ್ಟದಪುರ: ವಿದ್ಯಾರ್ಥಿ ಜೀವನದಲ್ಲಿ ಯಶಸ್ಸು ಸಾಧಿಸಲು ಕಲಿಯುವ ಮನೋಭಾವ ಮುಖ್ಯ. ಜೀವನದ ಪ್ರತಿಯೊಂದು ಹಂತದಲ್ಲೂ ಕಲಿಕೆಯ ಅವಕಾಶಗಳಿರುತ್ತವೆ ಎಂದು ಕಳಸಾಪುರ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಎಚ್.ಎಂ.ನಾಗರಾಜರಾವ್ ಕಲ್ಕಟ್ಟೆ ಹೇಳಿದರು.
ಪಿರಿಯಾಪಟ್ಟಣ ತಾಲೂಕಿನ ಬೆಟ್ಟದಪುರ ಎಸ್‌ಎಂಎಸ್ ಪದವಿ ಪೂರ್ವ ಕಾಲೇಜಿನಲ್ಲಿ ಶನಿವಾರ ಆಯೋಜಿಸಿದ್ದ ರಾಷ್ಟ್ರೀಯ ಸೇವಾ ಯೋಜನೆ 2ನೇ ಘಟಕ ಉದ್ಘಾಟನೆ ಕಾರ್ಯಕ್ರಮದಲ್ಲಿ ಮಾತನಾಡಿ, ಕಲಿಯುವ ಆಸಕ್ತಿ ಇದ್ದರೆ ಯಾವುದೇ ಕ್ಷೇತ್ರದಲ್ಲೂ ಸಾಧನೆ ಮಾಡಲು ಸಾಧ್ಯವಿದೆ. ರಾಷ್ಟ್ರೀಯ ಸೇವಾ ಯೋಜನೆ ನನಗೆ ನಾಯಕತ್ವ, ವ್ಯಕ್ತಿತ್ವ ವಿಕಸನ ಹಾಗೂ ಆತ್ಮವಿಶ್ವಾಸ ಬೆಳೆಸಿತು. ಸೋತಾಗ ಬೇರೆಯವರ ಮೇಲೆ ಆರೋಪಿಸದೆ ನಮ್ಮಲ್ಲಿರುವ ತಪ್ಪುಗಳನ್ನು ತಿದ್ದಿಕೊಳ್ಳಬೇಕು. ಸಮಸ್ಯೆಗೆ ಪರಿಹಾರ ಕಂಡುಕೊಂಡು ಮುಂದೆ ಸಾಗುವ ಮನೋಭಾವ ಪ್ರತಿಯೊಬ್ಬ ವಿದ್ಯಾರ್ಥಿಯೂ ಬೆಳೆಸಿಕೊಳ್ಳಬೇಕು ಎಂದು ಕಿವಿಮಾತು ಹೇಳಿದರು.
ನಿವೃತ್ತ ಮುಖ್ಯಶಿಕ್ಷಕ ಎಂ.ಮಲ್ಲೇಶ್ ಮಾತನಾಡಿ, ಪ್ರತಿಯೊಬ್ಬ ವಿದ್ಯಾರ್ಥಿಯೂ ಗುರುಗಳು ಮತ್ತು ಹಿರಿಯರಿಗೆ ಗೌರವ ನೀಡುವುದು ಮುಖ್ಯ. ಗುರುಗಳು ನಮಗೆ ಕೇವಲ ಪಾಠವನ್ನಷ್ಟೇ ಅಲ್ಲ, ಉತ್ತಮ ಸಂಸ್ಕಾರ, ಶಿಸ್ತು ಮತ್ತು ಜೀವನದ ಮೌಲ್ಯ ಕಲಿಸುತ್ತಾರೆ. ಹಿರಿಯರ ಅನುಭವ ಮತ್ತು ಮಾರ್ಗದರ್ಶನ ನಮ್ಮ ಭವಿಷ್ಯ ಉತ್ತಮಗೊಳಿಸುತ್ತದೆ ಎಂದರು.
ಶಿಸ್ತು, ಪರಿಶ್ರಮ ಮತ್ತು ಪ್ರಾಮಾಣಿಕತೆಯಿಂದ ವಿದ್ಯಾಭ್ಯಾಸ ಮಾಡಿ ಜೀವನದಲ್ಲಿ ಯಶಸ್ಸು ಸಾಧಿಸಬೇಕು. ವಿದ್ಯೆಯೇ ಯಶಸ್ಸಿನ ಸಾಧನ ಎಂಬುದನ್ನು ಮರೆಯಬಾರದು ಎಂದರು.
ಸಂಸ್ಥೆಯ ಅಧ್ಯಕ್ಷ ಬಿ.ವಿ.ಮಂಜುನಾಥ್, ಕಾರ್ಯದರ್ಶಿ ಎ.ವಿ.ಛಾಯಾ, ಆವತಿ ಸರ್ಕಾರಿ ಪ್ರೌಢಶಾಲೆ ಶಿಕ್ಷಕಿ ರೇಖಾ ನಾಗರಾಜರಾವ್, ಈಶ ಫೌಂಡೇಷನ್ ಸ್ವಯಂ ಸೇವಕಿ ಸುಜಾತಾ, ಪ್ರಾಂಶುಪಾಲ ಎಸ್.ಕೆ.ರಾಜು, ಮುಖ್ಯಶಿಕ್ಷಕರಾದ ಎಸ್.ಆರ್.ವೆಂಕಟೇಶ್, ಕುಮಾರ್, ರಾಷ್ಟ್ರೀಯ ಸೇವಾ ಯೋಜನೆ ಕಾರ್ಯಕ್ರಮಾಧಿಕಾರಿಗಳಾದ ಯಶವಂತ ಕುಮಾರ್, ಸತೀಶ್, ಸಹಶಿಬಿರಾಧಿಕಾರಿಗಳಾದ ಕುಬೇರ್, ಬಸವರಾಜ್, ಉಪನ್ಯಾಸಕರಾದ ಹರ್ಷಿತಾ ಶಿವಕುಮಾರ್, ವಸಂತ್, ಸುನೀಲ್, ರಾಮೇಗೌಡ, ಪ್ರತಾಪ್, ಶಿವನಂಜು, ರಶ್ಮಿ, ಅರುಣ್, ಸೈಫುಲ್ಲಾಖಾನ್, ಅಕ್ಷತಾ, ರಮ್ಯಾ ಹಾಗೂ ವಿದ್ಯಾರ್ಥಿಗಳು ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net