ನನಗೇ ಪಕ್ಷ ಟಿಕೆಟ್ ನೀಡಬೇಕೆಂದು ಮುಖಂಡ ಜಯಪ್ರಕಾಶ್ ಮನವಿ

ಪ್ರತಾಪ್ ಸಿಂಹ
ಪ್ರತಾಪ್ ಸಿಂಹ
Published on
ಮೈಸೂರು: ಮಾಜಿ ಸಂಸದ ಪ್ರತಾಪ್‌ಸಿಂಹ ಚಾಮರಾಜ ಕ್ಷೇತ್ರದಿಂದ ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸುವುದಾಗಿ ಹೇಳಿರುವುದು ಸರಿಯಲ್ಲ. ಈ ಕ್ಷೇತ್ರದಲ್ಲಿ ಮೊದಲಿನಿಂದಲೂ ಬಿಜೆಪಿ ಪಕ್ಷದಲ್ಲಿ ಸೇವೆ ಸಲ್ಲಿಸುತ್ತಿರುವ ನನಗೇ ಪಕ್ಷ ಟಿಕೆಟ್ ನೀಡಬೇಕೆಂದು ಮುಖಂಡ ಜಯಪ್ರಕಾಶ್ ವರಿಷ್ಠರಲ್ಲಿ ಮನವಿ ಮಾಡಿದರು.
ಈ ಹಿಂದೆ ಶಂಕರಲಿಂಗೇಗೌಡ ಮೊದಲಾದವರಿಗೆಲ್ಲ ನಾವು ಟಿಕೆಟ್ ಬಿಟ್ಟುಕೊಟ್ಟಿದ್ದೇವೆ. ಸೆನೆಟ್ ಸದಸ್ಯರಾಗಿ, ಚಲನಚಿತ್ರ ನಟರಾಗಿ ಅಪಾರ ಬೆಂಬಲಿಗರನ್ನು ಹೊಂದಿದ್ದೇವೆ. 1994-2023ರ ಚುನಾವಣೆ ವೇಳೆ ಪಕ್ಷದ ಟಿಕೆಟ್ ಬೇರೆಯವರಿಗೆ ಸಿಕ್ಕಾಗ ತ್ಯಾಗ ಮಾಡಿದ್ದೇವೆ. ಈ ಬಾರಿ ಪಕ್ಷದ ಹಿತದೃಷ್ಟಿಯಿಂದ ವರಿಷ್ಠರು ನಮಗೇ ಟಿಕೆಟ್ ನೀಡಬೇಕೆಂದು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಕೋರಿದರು.
ಹಿರಿಯ ನಾಯಕರಾಗಿದ್ದ ಅನಂತಕುಮಾರ್, ಡಾ.ಜೀವರಾಜ್ ಆಳ್ವ ಜತೆ ಸೇರಿ ಈ ಹಿಂದೆ ಪಕ್ಷದ ಸಮಾವೇಶವನ್ನು ದೊಡ್ಡ ಮಟ್ಟದಲ್ಲಿ ಆಯೋಜಿಸಿದ್ದ ಯಶಸ್ಸು ನಮಗಿದೆ. ಇದನ್ನು ಯಾರೂ ಮರೆತಿಲ್ಲ. ಹೀಗಾಗಿ ಪಕ್ಷದ ಸಂಘಟನೆಯಲ್ಲಿ ತೊಡಗಿಸಿಕೊಂಡಿರುವ ನಮಗೆ ಟಿಕೆಟ್ ದೊರೆಯುವ ವಿಶ್ವಾಸವಿದೆ ಎಂದು ಹೇಳಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net