‘ಸರಿಗಮ-ಪದನಿಸ’ ಸಂಗೀತ ಕಾರ್ಯಕ್ರಮಕ್ಕೆ ಚಾಲನೆ

ಜನ ಚೈತನ್ಯ ಫೌಂಡೇಷನ್‌ನಿಂದ ನಗರದಲ್ಲಿ ಆಯೋಜಿಸಿದ್ದ ವಿಶೇಷ ಸಂಗೀತ ಕಾರ್ಯಕ್ರಮದಲ್ಲಿ ನಾಗರಾಜ್ ವಿ. ಬೈರಿ,  ಅಂಶಿ ಪ್ರಸನ್ನಕುಮಾರ, ಕೆ. ರಘುರಾಂ ವಾಜಪೇಯಿ,  ಆನಂದ್ ಶೆಟ್ಟಿ ಅವರನ್ನು ಸನ್ಮಾನಿಸಲಾಯಿತು. ಆರ್. ಲಕ್ಷ್ಮಣ್, ರೇಖಾ ಗೌತಮ್  ಇತರರು ಇದ್ದರು.
ಜನ ಚೈತನ್ಯ ಫೌಂಡೇಷನ್‌ನಿಂದ ನಗರದಲ್ಲಿ ಆಯೋಜಿಸಿದ್ದ ವಿಶೇಷ ಸಂಗೀತ ಕಾರ್ಯಕ್ರಮದಲ್ಲಿ ನಾಗರಾಜ್ ವಿ. ಬೈರಿ, ಅಂಶಿ ಪ್ರಸನ್ನಕುಮಾರ, ಕೆ. ರಘುರಾಂ ವಾಜಪೇಯಿ, ಆನಂದ್ ಶೆಟ್ಟಿ ಅವರನ್ನು ಸನ್ಮಾನಿಸಲಾಯಿತು. ಆರ್. ಲಕ್ಷ್ಮಣ್, ರೇಖಾ ಗೌತಮ್ ಇತರರು ಇದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಸಂಗೀತವನ್ನು ಮೊಬೈಲ್, ಟಿವಿ, ರೇಡಿಯೋ, ಟೇಪ್ ರೆಕಾರ್ಡರ್‌ನಲ್ಲಿ ಕೇಳುವುದಕ್ಕೂ ನೇರವಾಗಿ ಕೇಳುವುದೇ ಆನಂದ
  • ಸಾಧಕರಿಗೆ ಸನ್ಮಾನ
ಮೈಸೂರು:ಜನ ಚೈತನ್ಯ ಫೌಂಡೇಷನ್‌ನಿಂದ ನಗರದ ಜೆಎಲ್ಬಿ ರಸ್ತೆಯ ನಾದಬ್ರಹ್ಮ ಸಭಾದಲ್ಲಿ ಎರಡು ದಿನಗಳ ಕಾಲ ‘ಸರಿಗಮ- ಪದನಿಸ’ ಎರಡು ದಿನಗಳ ವಿಶೇಷ ಸಂಗೀತ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.
ಖ್ಯಾತ ಸಂಗೀತ ನಿರ್ದೇಶಕರು, ಗಾಯಕರಾದ ಆರ್.ಡಿ.ಬರ್ಮನ್, ಇಳಯರಾಜ, ಎಸ್.ಪಿ.ಬಾಲಸುಬ್ರಹ್ಮಣ್ಯಂ, ಡಾ.ರಾಜ್‌ಕುಮಾರ್, ಪಿ.ಬಿ.ಶ್ರೀನಿವಾಸ್, ಎಸ್.ಜಾನಕಿ, ಆಶಾ ಬೋಸ್ಲೆ, ಪಿ.ಸುಶೀಲಾ, ವಾಣಿ ಜಯರಾಂ ಮೊದಲಾದವರು ಹಾಡಿರುವ ಕನ್ನಡ, ಹಿಂದಿ, ತೆಲುಗು, ತಮಿಳು, ಇಂಗ್ಲಿಷ್ ಸೇರಿದಂತೆ ಬಹು ಭಾಷಾ ಗೀತೆಗಳನ್ನು ಪ್ರಸ್ತುತಪಡಿಸಲಾಯಿತು.
ಗಾಯಕರಾದ ಆರ್.ಲಕ್ಷ್ಮಣ್, ಜಾಯ್ಸ್ ವೈಶಾಕ್, ಡಾ.ಎ.ಎಸ್. ಪೂರ್ಣಿಮಾ, ಬಿ.ಎಸ್.ವಿಜಯ ಆನಂದ್, ಡಾ.ದೇವಿ ಆನಂದ್, ಶಾಂತಾ ಶಿವಕುಮಾರ್, ರೇಖಾ ಗೌತಮ್ ಅವರು ಗಾಯನ ನಡೆಸಿಕೊಟ್ಟರು.
ಕರ್ನಾಟಕ ಸುಗಮ ಸಂಗೀತ ಪರಿಷತ್ ಜಿಲ್ಲಾಧ್ಯಕ್ಷ ನಾಗರಾಜ್ ವಿ.ಬೈರಿ ಮಾತನಾಡಿ, ಸಂಗೀತವನ್ನು ಮೊಬೈಲ್, ಟಿವಿ, ರೇಡಿಯೋ, ಟೇಪ್ ರೆಕಾರ್ಡರ್‌ನಲ್ಲಿ ಕೇಳುವುದಕ್ಕೂ ನೇರವಾಗಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಕೇಳುವುದಕ್ಕೂ ವ್ಯತ್ಯಾಸವಿದೆ. ಮನೆಯಲ್ಲಿ ಕೇಳುವುದರಲ್ಲಿ ತನ್ಮಯತೆ ಇರುವುದಿಲ್ಲ. ನೇರವಾಗಿ ಸಮಾರಂಭದಲ್ಲಿ ಕುಳಿತು ಸಂಗೀತಾಸಕ್ತರ ನಡುವೆ ಕೇಳಿದರೆ ಖುಷಿ ಸಿಗುತ್ತದೆ, ಸಮಯ ಹೋಗುವುದೇ ಗೊತ್ತಾಗುವುದಿಲ್ಲ ಎಂದರು.
ಸಮಾಜ ಸೇವಕ ಕೆ.ರಘುರಾಂ ವಾಜಪೇಯಿ ಮಾತನಾಡಿ, ಇದೊಂದು ವಿನೂತನ ಕಾರ್ಯಕ್ರಮ, ಕನ್ನಡ, ಹಿಂದಿ, ಇಂಗ್ಲಿಷ್, ತಮಿಳು, ತೆಲುಗು ಹಾಡುಗಳನ್ನು ಒಂದೇ ಕಾರ್ಯಕ್ರಮ ಹಾಡುತ್ತಿರುವುದು ವಿನೂತನವಾದುದು ಎಂದರು.
ಹಿರಿಯ ಪತ್ರಕರ್ತ ಅಂಶಿ ಪ್ರಸನ್ನಕುಮಾರ್, ರಾಗ ಕ್ರಿಯೇಟರ್ಸ್ ಅಧ್ಯಕ್ಷ ಆನಂದ್ ಶೆಟ್ಟಿ ಅತಿಥಿಗಳಾಗಿದ್ದರು. ಫೌಂಡೇಷನ್ ಅಧ್ಯಕ್ಷ ಆರ್.ಲಕ್ಷ್ಮಣ್, ರೇಖಾ ಗೌತಮ್ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net