ಅಧ್ಯಕ್ಷತೆ ವಹಿಸಿದ್ದ ವಿ.ಕೆ. ಪಬ್ಲಿಕ್ ಸ್ಕೂಲ್ ನ ಕಾರ್ಯದರ್ಶಿ ರವಿಕುಮಾರ್ ಬೆಕ್ಯಾ ಮಾತನಾಡಿ, ಪಠ್ಯೇತರ ವಿಷಯಗಳಾದ ಹಾಡು, ನಾಟಕ, ಕತೆ, ನೃತ್ಯ, ಸಂಗೀತ ಮೊದಲಾದ ವಿಷಯಗಳನ್ನು ಮಕ್ಕಳು ಕಲಿತು ಪ್ರಕಟಿಸುವುದರಿಂದ ಆತ್ಮವಿಶ್ವಾಸ ಬೆಳೆಯುತ್ತದೆ. ಧೈರ್ಯದ ಮನೋಭಾವ ಮೈಗೂಡುತ್ತದೆ. ಜೀವನವನ್ನು ಆನಂದದಾಯಕವಾಗಿ ಕಳೆಯಲು ಸಾಧ್ಯವಾಗುತ್ತದೆ. ಮನಸ್ಸಿನ ವಿಕಾಸದ ಜೊತೆಗೆ ತಿಳಿವಳಿಕೆ ಹೆಚ್ಚುತ್ತದೆ ಎಂದರು.