ಅಂದು ಬೆಳಗ್ಗೆ 10ಕ್ಕೆ ನಗರದ ಗಾಂಧಿ ಚೌಕದಲ್ಲಿ ಬೃಹತ್ ಪ್ರತಿಭಟನಾ ಸಮಾವೇಶ ನಡೆಯಲಿದೆ. ಇದಕ್ಕೂ ಮೊದಲು ನಗರದ ವಿವಿಧೆಡೆಯಿಂದ ಕಾರ್ಮಿಕರು, ರೈತರು, ಅಂಗನವಾಡಿ ಫೆಡರೇಷನ್, ಬಿಸಿಯೂಟ ನೌಕರರ ಫೆಡರೇಷನ್ ಸೇರಿ ವಿವಿಧ ಕಾರ್ಮಿಕ ಸಂಘಟನೆಗಳಿಂದ ಬೃಹತ್ ಪ್ರತಿಭಟನಾ ರ‌್ಯಾಲಿ ನಡೆಯಲಿದೆ ಎಂದು ಭಾನುವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.