ಶನಿವಾರದಿಂದ ಮೂರು ದಿನಗಳ ಕಾಲ ನಡೆದ ವಾರ್ಷಿಕೋತ್ಸವದಲ್ಲಿ ನವೇನ್ ಪೂಜೆ ನೆರವೇರಿಸಲಾಯಿತು. ಪ್ರತಿದಿನ ಬೆಳಗ್ಗೆ 10.30ಕ್ಕೆ ಆಡಂಬರದ ಬಲಿಪೂಜೆಯನ್ನು ನಗರದ ಸಂತ ಫ್ರಾನ್ಸಿಸ್ ಚರ್ಚ್‌ನ ಧರ್ಮಗುರು ಜಾರ್ಜ್ ಮಾರ್ಟೀಸ್ ಮತ್ತು ಸಹಗುರುಗಳ ಸಹಯೋಗದಲ್ಲಿ ನೆರವೇರಿಸಲಾಯಿತು. ಸೋಮವಾರ ಬಣ್ಣಬಣ್ಣದ ಹೂವಿನ ಅಲಂಕಾರದೊಂದಿಗೆ ತೇರನ್ನು ಸಿಂಗರಿಸಿ ಮಾತೆಯ ಮೂರ್ತಿಯೊಂದಿಗೆ ಊರಿನ ಪ್ರಮುಖ ರಸ್ತೆಗಳಲ್ಲಿ ವಾದ್ಯ ತಂಡದೊಂದಿಗೆ ಮೆರವಣಿಗೆ ನಡೆಸಿ, ಚರ್ಚ್ ಆವರಣದಲ್ಲಿ ಸಂಪನ್ನಗೊಳಿಸಲಾಯಿತು. ಚರ್ಚ್ ಆವರಣದಲ್ಲಿ ಪಟಾಕಿ, ಸಿಡಿಮದ್ದುಗಳನ್ನು ಸಿಡಿಸಿ ಸಂಭ್ರಮಿಸಿದರು.