ಮಕ್ಕಳ ಪ್ರತಿಭೆ ಗುರುತಿಸಲು ಶಿಕ್ಷಣ ಇಲಾಖೆ ವಿವಿಧ ಪ್ರಯತ್ನ

 ಕೆ.ಆರ್.ನಗರದಲ್ಲಿ ದೃಶ್ಯ ಕಲಾವಿದರ ಸಂಘದಿಂದ ಕನ್ನಡ ಕಲ್ಲರವ ಕಾರ್ಯಕ್ರಮದಡಿ ಆಯೋಜಿಸಿದ್ದ  ಸ್ಥಳದಲ್ಲೇ ಚಿತ್ರ ಬರೆಯುವ ಸ್ಪರ್ಧೆಗೆ ತಹಸೀಲ್ದಾರ್ ಸುರೇಂದ್ರ ಮೂರ್ತಿ ಚಾಲನೆ ನೀಡಿದರು. ಪೊಲೀಸ್ ನಿರೀಕ್ಷಕ ಎಸ್.ಶಿವಪ್ರಸಾದ್, ವಾಲ್ಮೀಕಿ ನಾಯಕರ ಸಂಘದ ಸಾಲಿಗ್ರಾಮ ತಾಲೂಕು ಅಧ್ಯಕ್ಷ ಸಿ.ಸಿ.ಮಹದೇವ್, ಕೆ.ಆರ್.ನಗರ ತಾಲೂಕು ಸುಬ್ಬಕೃಷ್ಣ ಇನ್ನಿತರರು ಇದ್ದರು.
ಕೆ.ಆರ್.ನಗರದಲ್ಲಿ ದೃಶ್ಯ ಕಲಾವಿದರ ಸಂಘದಿಂದ ಕನ್ನಡ ಕಲ್ಲರವ ಕಾರ್ಯಕ್ರಮದಡಿ ಆಯೋಜಿಸಿದ್ದ ಸ್ಥಳದಲ್ಲೇ ಚಿತ್ರ ಬರೆಯುವ ಸ್ಪರ್ಧೆಗೆ ತಹಸೀಲ್ದಾರ್ ಸುರೇಂದ್ರ ಮೂರ್ತಿ ಚಾಲನೆ ನೀಡಿದರು. ಪೊಲೀಸ್ ನಿರೀಕ್ಷಕ ಎಸ್.ಶಿವಪ್ರಸಾದ್, ವಾಲ್ಮೀಕಿ ನಾಯಕರ ಸಂಘದ ಸಾಲಿಗ್ರಾಮ ತಾಲೂಕು ಅಧ್ಯಕ್ಷ ಸಿ.ಸಿ.ಮಹದೇವ್, ಕೆ.ಆರ್.ನಗರ ತಾಲೂಕು ಸುಬ್ಬಕೃಷ್ಣ ಇನ್ನಿತರರು ಇದ್ದರು.
Published on
ಕೆ.ಆರ್.ನಗರ: ಮಕ್ಕಳಲ್ಲಿರುವ ಪ್ರತಿಭೆಯನ್ನು ಹೊರ ಚೆಲ್ಲಲು ಶಿಕ್ಷಕರು ಮತ್ತು ಶಿಕ್ಷಣ ಇಲಾಖೆ ವಿವಿಧ ರೀತಿಯಲ್ಲಿ ಪ್ರಯತ್ನ ಪಡುತ್ತಿದೆ ಅಂತಹ ಕಾರ್ಯಕ್ರಮಗಳನ್ನು ಕನ್ನಡ ಕಲರವ ಎಂಬ ಕಾರ್ಯಕ್ರಮದಡಿ ಜಿಲ್ಲಾ ದೃಶ್ಯ ಕಲಾವಿದರ ಸಂಘದಿಂದ ಮಾಡುತಿರುವುದು ಪ್ರಶಂಸನೀಯ ಎಂದು ತಹಸೀಲ್ದಾರ್ ಜಿ.ಎಸ್.ಸುರೇಂದ್ರ ಮೂರ್ತಿ ಹೇಳಿದರು.
ಪಟ್ಟಣದ ವಾಲ್ಮೀಕಿ ಸಮುದಾಯ ಭವನದಲ್ಲಿ ಮೈಸೂರು ದೃಶ್ಯ ಕಲಾವಿದರ ಸಂಘದಿಂದ ಇತ್ತೀಚೆಗೆ  ಏರ್ಪಡಿಸಲಾಗಿದ್ದ ಸ್ಥಳದಲ್ಲೇ ಚಿತ್ರ ಬಿಡಿಸುವ ಜಿಲ್ಲಾ ಮಟ್ಟದ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಪ್ರತಿಯೊಬ್ಬ ವಿದ್ಯಾರ್ಥಿಯಲ್ಲಿ ಯಾವ ಪ್ರತಿಭೆ ಅಡಗಿದೆ ಎಂದು ಯಾರಿಗೂ ತಿಳಿದಿಲ್ಲ. ಇಂತಹ ಕಾರ್ಯಕ್ರಮಗಳ ಮೂಲಕ ಪ್ರತಿಭೆಗಳನ್ನು ಹೊರ ಹಾಕಿದಾಗ ವಿದ್ಯಾರ್ಥಿಯ ಸಾಧನೆ ಅರ್ಥ ಸಿಗುತ್ತದೆ ಎಂದರು.
ಜಿಲ್ಲಾ ದೃಶ್ಯ ಕಲಾವಿದರ ಸಂಘವು ಒಂದನೇ ತರಗತಿಯಿಂದ ನಾಲ್ಕನೇ ತರಗತಿ 5 ರಿಂದ 8ನೇ ತರಗತಿ. 9 ಮತ್ತು 10ನೇ ತರಗತಿ ವಿದ್ಯಾರ್ಥಿಗಳಿಂದ ಮೂರು ಹಂತದಲ್ಲಿ ಸ್ಥಳದಲ್ಲೇ ಚಿತ್ರ ಬರೆಯುವ ಸ್ಪರ್ಧೆ ಏರ್ಪಡಿಸಿರುವುದು ಒಳ್ಳೆಯ ಕಾರ್ಯಕ್ರಮ ಇಂತಹ ಸಂಘ ಸಂಸ್ಥೆಗಳು ಇನ್ನಷ್ಟು ಶೈಕ್ಷಣಿಕ ಮತ್ತು ಸಾಮಾಜಿಕ ಕೆಲಸಗಳನ್ನು ಮಾಡಲಿ ಎಂದು ಶುಭ ಹಾರೈಸಿದರು.
 ಪೊಲೀಸ್ ನಿರೀಕ್ಷಕ ಎಸ್.ಶಿವಪ್ರಸಾದ್ ವೇದಿಕೆ ಕಾರ್ಯಕ್ರಮಕ್ಕಿಂತ ಮುನ್ನ ಚಿತ್ರ ಬಿಡಿಸುವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಇತ್ತೀಚಿನ ದಿನಗಳಲ್ಲಿ ಕಂಪ್ಯೂಟರ್ ಡಿಜಿಟಲ್ ಚಿತ್ರಗಳು ದಿನನಿತ್ಯ ರಾರಾಜಿಸುತ್ತಿದ್ದರು ಕೈ ಬರವಣಿಗೆಯಲ್ಲಿ ಬಿಡಿಸುತ್ತಿರುವ ಚಿತ್ರಗಳಿಗೆ ಹೆಚ್ಚು ಬೇಡಿಕೆ ಇದೆ. ಅಂತಹ ಹಿರಿಯ ಕಲಾವಿದರನ್ನು ಪ್ರೀತಿಸಿ ಗೌರವಿಸುವ ಕೆಲಸ ನಾವೆಲ್ಲರೂ ಮಾಡೋಣ. ಜತೆಗೆ ಯುವ ಪ್ರತಿಭೆ ಇರುವ ವಿದ್ಯಾರ್ಥಿಗಳಿಗೂ ಪ್ರೋತ್ಸಾಹಿಸಿ ಇಂತಹ ವೇದಿಕೆಗಳನ್ನು ಕಲ್ಪಿಸಿ ಕೊಡೋಣ ಎಂದು ಸ್ಪರ್ಧಾರ್ಥಿಗಳಿಗೆ ಮತ್ತು ಪೋಷಕರಿಗೆ ಕಿವಿಮಾತು ಹೇಳಿದರು.
ದೃಶ್ಯ ಕಲಾವಿದರ ಸಂಘದ ಜಿಲ್ಲಾಧ್ಯಕ್ಷ ಬಾಲಸ್ವಾಮಿ, ಪ್ರಧಾನ ಕಾರ್ಯದರ್ಶಿ ಎಸ್.ಜೆ.ಗಣೇಶ, ಟಿ.ಎಚ್.ಡಬ್ಲ್ಯೂ ಎಚ್. ಎಲ್.ಶಂಕರಮೂರ್ತಿ, ವಾಲ್ಮೀಕಿ ನಾಯಕರ ಸಂಘದ ಕೆ.ಆರ್.ನಗರ ತಾಲೂಕು ಅಧ್ಯಕ್ಷ ಸುಬ್ಬುಕೃಷ್ಣ, ಕಾರ್ಯದರ್ಶಿ ಗಣೇಶ್, ಖಜಾಂಚಿ ಹೊಸೂರು ಸಂತೋಷ್, ಕೆ. ಎನ್.ತುಳಸಿಕುಮಾರ್ ಸೇರಿದಂತೆ ಪೋಷಕರು ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net