ವೇದಿಕೆ ಕಾರ್ಯಕ್ರಮಕ್ಕು ಮುನ್ನ ಸಂತಶ್ರೇಷ್ಠ ಕನಕದಾಸರ ಪ್ರತಿಮೆಯನ್ನು ಗಣ್ಯರೆಲ್ಲಾ ಸೇರಿ ಅನಾವರಣ ಮಾಡಿದರು. ಈ ಸಂದರ್ಭದಲ್ಲಿ ಕೆಸ್ತೂರು ಗ್ರಾ.ಪಂ. ಅಧ್ಯಕ್ಷೆ ಮಂಜುಳ ಶ್ರೀನಿವಾಸ್, ಉಪಾಧ್ಯಕ್ಷೆ ರುಕ್ಮಿಣಿರವಿ, ಸದಸ್ಯರಾದ ಸುಶೀಲಾ, ಜಗದೀಶ್, ತಾ.ಪಂ ಮಾಜಿ ಅಧ್ಯಕ್ಷೆ ಹರಿಣಿಪ್ರಕಾಶ್, ಮಾಜಿ ಉಪಾಧ್ಯಕ್ಷ ಕೆ. ಎಸ್. ಅರವಿಂದ್, ಮಾಜಿ ಸದಸ್ಯ ಲೋಕೇಶ್, ಕ್ರಾಂತಿವೀರ ಆರ್ಟ್ಸ್ ಮಾಲೀಕ ಉಗರಗೋಳ ನಂದಕುಮಾರ್, ಕವಿರತ್ನ ಕಾಳಿದಾಸ ಯುವಕರ ಸಂಘದ ಗೌರವಾಧ್ಯಕ್ಷ ಕೆ. ಎಲ್. ರಂಗಸ್ವಾಮಿ, ಅಧ್ಯಕ್ಷ ಜಿ.ರಾಜೇಂದ್ರ, ಪ್ರಧಾನ ಕಾರ್ಯದರ್ಶಿ ಕೆ. ಪಿ. ಶ್ರೀನಿವಾಸ್, ಖಜಾಂಚಿ ಮಹದೇವ ಸೇರಿದಂತೆ ಇನ್ನಿತರರು ಇದ್ದರು.