ಪ್ರತಿ ಕುಟುಂಬಕ್ಕೆ ವಿತರಿಸಲಾಗುವ ಕಿಟ್‌ನಲ್ಲಿ 14 ಕೆ.ಜಿ. ಅಕ್ಕಿ ಅಥವಾ ರಾಗಿ, 3 ಕೆ.ಜಿ. ತೊಗರಿಬೇಳೆ, 2 ಕೆ.ಜಿ. ಅಲಸಂದೆ, ಹುರುಳಿ ಕಾಳು, 1 ಕೆ.ಜಿ. ಕಡಲೇ ಬೀಜ, ಕಡಲೆಕಾಳು, ಹೆಸರುಕಾಳು, ಸಕ್ಕರೆ, ಬೆಲ್ಲ, 30 ಮೊಟ್ಟೆಗಳು, 2 ಲೀಟರ್ ರಿಫೈನ್ಡ್ ಸೂರ್ಯಕಾಂತಿ ಎಣ್ಣೆ ಹಾಗೂ ಅರ್ಧ ಕೆ.ಜಿ. ತುಪ್ಪ ಒಳಗೊಂಡಿರುತ್ತದೆ. ಈ ಪೌಷ್ಟಿಕ ಆಹಾರ ಪದಾರ್ಥಗಳು ಬುಡಕಟ್ಟು ಕುಟುಂಬಗಳ ಆರೋಗ್ಯ ಮತ್ತು ಆಹಾರ ಭದ್ರತೆಗೆ ಪ್ರಮುಖ ಸಹಕಾರಿಯಾಗಿವೆ.