ಮೈಸೂರಿನಲ್ಲಿ ಕನ್ನಡ, ಹಿಂದಿ ಗೀತೆಗಳ ಗಾನ ಸುಧೆ

ನಗರದಲ್ಲಿ ಕಪ್ಪು-ಬಿಳುಪು ರೆಟ್ರೋ ಮ್ಯೂಸಿಕ್ ಎನ್ಸೆಂಬಲ್ ನಿಂದ ಆಯೋಜಿಸಲಾಗಿದ್ದ ಅಮರ ಮಧುರ ಪ್ರೇಮ ಶೀರ್ಷಿಕೆಯ ಹಳೆಯ ಜನಪ್ರಿಯ ಚಲನಚಿತ್ರ ಗೀತೆಗಳ ಸಂಗೀತ ಕಾರ್ಯಕ್ರಮದಲ್ಲಿ ನಾಗರಾಜ್ ವಿ. ಬೈರಿ, ಉಮೇಶ್, ತ್ಯಾಗರಾಜ್, ಮಹೇಂದ್ರ, ಉಮೇಶ್, ಡಾ. ಸೋಮನಾಥ್, ರಶ್ಮಿ ಚಿಕ್ಕಮಗಳೂರು, ಲಕ್ಷ್ಮೀ ದಿನೇಶ್, ಶ್ವೇತಾ ದಿನೇಶ್, ಅನುಪಮಾ ಶ್ರೀರಾಮ್, ಸೀತಾಲಕ್ಷ್ಮೀ ಇತರರು ಇದ್ದರು.
ನಗರದಲ್ಲಿ ಕಪ್ಪು-ಬಿಳುಪು ರೆಟ್ರೋ ಮ್ಯೂಸಿಕ್ ಎನ್ಸೆಂಬಲ್ ನಿಂದ ಆಯೋಜಿಸಲಾಗಿದ್ದ ಅಮರ ಮಧುರ ಪ್ರೇಮ ಶೀರ್ಷಿಕೆಯ ಹಳೆಯ ಜನಪ್ರಿಯ ಚಲನಚಿತ್ರ ಗೀತೆಗಳ ಸಂಗೀತ ಕಾರ್ಯಕ್ರಮದಲ್ಲಿ ನಾಗರಾಜ್ ವಿ. ಬೈರಿ, ಉಮೇಶ್, ತ್ಯಾಗರಾಜ್, ಮಹೇಂದ್ರ, ಉಮೇಶ್, ಡಾ. ಸೋಮನಾಥ್, ರಶ್ಮಿ ಚಿಕ್ಕಮಗಳೂರು, ಲಕ್ಷ್ಮೀ ದಿನೇಶ್, ಶ್ವೇತಾ ದಿನೇಶ್, ಅನುಪಮಾ ಶ್ರೀರಾಮ್, ಸೀತಾಲಕ್ಷ್ಮೀ ಇತರರು ಇದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಸಂಗೀತಕ್ಕೆ ಭಾಷೆ, ಜಾತಿ, ಧರ್ಮ ಅಥವಾ ವಯಸ್ಸಿನ ಗಡಿಗಳಿಲ್ಲ
  • ಉತ್ತಮ ಸಾಹಿತ್ಯ, ಮಧುರ ಸಂಗೀತದಿಂದ ಇಂದಿಗೂ ಜನರ ಮನಸ್ಸಿನಲ್ಲಿ ಶಾಶ್ವತ ಸ್ಥಾನ ಪಡೆದಿವೆ
ಮೈಸೂರು:ನಗರದ ವಿಶ್ವೇಶ್ವರನಗರದ ಎಂಬಿಸಿಟಿ ಸಭಾಂಗಣದಲ್ಲಿ ಕಪ್ಪು-ಬಿಳುಪು ರೆಟ್ರೋ ಮ್ಯೂಸಿಕ್ ಎನ್ಸೆಂಬಲ್ ನಿಂದ ಆಯೋಜಿಸಲಾಗಿದ್ದ ಅಮರ ಮಧುರ ಪ್ರೇಮ ಶೀರ್ಷಿಕೆಯ ಹಳೆಯ ಜನಪ್ರಿಯ ಕನ್ನಡ ಮತ್ತು ಹಿಂದಿ ಚಲನಚಿತ್ರ ಗೀತೆಗಳ ಗಾನ ಸುಧೆಗೆ ಸಂಗೀತಕ್ಕೆ ಶ್ರೋತ್‌ಋಗಳು ತಲೆದೂಗಿದರು.
ತಂಡದ ಸಾರಥಿ ಉಮೇಶ್ ಅವರ ನೇತೃತ್ವದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಗಾಯಕರಾದ ತ್ಯಾಗರಾಜ್, ಮಹೇಂದ್ರ, ಉಮೇಶ್, ಡಾ. ಸೋಮನಾಥ್, ರಶ್ಮಿ ಚಿಕ್ಕಮಗಳೂರು, ಲಕ್ಷ್ಮೀ ದಿನೇಶ್, ಶ್ವೇತಾ ದಿನೇಶ್, ಅನುಪಮಾ ಶ್ರೀರಾಮ್, ಸೀತಾಲಕ್ಷ್ಮೀ ಅವರು ಕನ್ನಡ ಮತ್ತು ಹಿಂದಿ ಚಿತ್ರರಂಗದ ಆಯ್ದ ಮಧುರ ಗೀತೆಗಳನ್ನು ಮನೋಜ್ಞವಾಗಿ ಪ್ರಸ್ತುತಪಡಿಸಿದರು.
ಹಳೆಯ ಚಲನಚಿತ್ರಗಳ ಪ್ರೇಮಗೀತೆಗಳು, ಭಾವಗೀತೆಗಳು ಹಾಗೂ ಮನಸ್ಸಿನಲ್ಲಿ ಸದಾ ಹಸಿರಾಗಿರುವ ಜನಪ್ರಿಯ ಹಾಡುಗಳು ಕಾರ್ಯಕ್ರಮಕ್ಕೆ ವಿಶೇಷ ಮೆರುಗು ನೀಡಿದವು.
ಕರ್ನಾಟಕ ರಾಜ್ಯ ಸುಗಮ ಸಂಗೀತ ಸಾಹಿತ್ಯ ಪರಿಷತ್‌ನ ಜಿಲ್ಲಾಧ್ಯಕ್ಷ ನಾಗರಾಜ್ ವಿ. ಬೈರಿ ಮಾತನಾಡಿ, ಸಂಗೀತಕ್ಕೆ ಭಾಷೆ, ಜಾತಿ, ಧರ್ಮ ಅಥವಾ ವಯಸ್ಸಿನ ಗಡಿಗಳಿಲ್ಲ. ಹಳೆಯ ಕನ್ನಡ ಮತ್ತು ಹಿಂದಿ ಚಲನಚಿತ್ರ ಗೀತೆಗಳು ಉತ್ತಮ ಸಾಹಿತ್ಯ, ಮಧುರ ಸಂಗೀತ ಹಾಗೂ ಮಾನವೀಯ ಮೌಲ್ಯಗಳಿಂದ ಇಂದಿಗೂ ಜನರ ಮನಸ್ಸಿನಲ್ಲಿ ಶಾಶ್ವತ ಸ್ಥಾನ ಪಡೆದಿವೆ ಎಂದರು.
ಇಂತಹ ಕಾರ್ಯಕ್ರಮಗಳು ಹಿರಿಯರ ನೆನಪುಗಳನ್ನು ಮರುಕಳಿಸುವುದರ ಜತೆಗೆ ಯುವಪೀಳಿಗೆಗೆ ಶ್ರೇಷ್ಠ ಸಂಗೀತ ಪರಂಪರೆಯನ್ನು ಪರಿಚಯಿಸುತ್ತವೆ. ಮೈಸೂರಿನ ಸಾಂಸ್ಕೃತಿಕ ಪರಂಪರೆಯನ್ನು ಮತ್ತಷ್ಟು ಶ್ರೀಮಂತಗೊಳಿಸುವ ಇಂತಹ ಕಾರ್ಯಕ್ರಮಗಳನ್ನು ಆಯೋಜಿಸಿರುವ ತಂಡ ಅಭಿನಂದನಾರ್ಹರು ಎಂದು ಹೇಳಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net