ಕಳೆದ ದಸರಾದಲ್ಲಿ ‘ಕಂಜನ್’ ಉಳಿದ ಆನೆಗಳೊಂದಿಗೆ ಉತ್ತಮ ಸಲಿಗೆಯೊಂದಿಗೆ ಲವಲವಿಕೆಯಿಂದಲೇ ಇತ್ತು. ಜಂಬೂಸವಾರಿ ಮೆರವಣಿಗೆಯಲ್ಲಿ ಮುಂಚೂಣಿಯಲ್ಲಿದ್ದ ನಿಶಾನೆ ಆನೆ ಧನಂಜಯ, ನೌಪತ್ ಆನೆಯಾಗಿ ಗೋಪಿಯನ್ನು ಸಾಲಾನೆಗಳಾಗಿ ಮಹೇಂದ್ರ, ಶ್ರೀಕಂಠ, ಲಕ್ಷ್ಮೀ, ಭೀಮ, ಏಕಲವ್ಯ, ಪ್ರಶಾಂತ, ಸುಗ್ರೀವ, ಹೇಮಾವತಿಯೊಂದಿಗೆ ಕಂಜನ್ ಸಹ ಹೆಜ್ಜೆ ಹಾಕಿತ್ತು.