ಸಿಎ ಮಾಡಬೇಕೆಂಬ ಆಸೆ ಇದೆ. ಡಿಬೇಟ್, ವಾಲಿಬಾಲ್, ಚಿತ್ರಕಲೆಯಲ್ಲೂ ಆಸಕ್ತಿ ಇದೆ. ಪತ್ರಿಕೆಗಳಿಗೆ ಲೇಖನಗಳನ್ನೂ ಬರೆಯುತ್ತಿದ್ದೆ. ನಿತ್ಯ ನಂಜನಗೂಡಿನಿಂದ ಓಡಾಡುತ್ತಿದೆ. ರಾಜ್ಯಕ್ಕೆ ನಾಲ್ಕನೇ ರ‌್ಯಾಂಕ್ ಪಡೆದಿರುವುದಕ್ಕೆ ಖುಷಿಯಾಗಿದೆ. ಕನ್ನಡದಲ್ಲಿ ನನಗೆ 100 ಅಂಕ ಬರಬೇಕು. ಆದರೆ, 98 ಅಂಕ ಬಂದಿದ್ದು, ಕನ್ನಡವನ್ನು ಮರು ಮೌಲ್ಯ ಮಾಪನಕ್ಕೆ ಹಾಕುತ್ತೇನೆ’ ಎಂದು ಕೆ.ಚಿತ್ರಾ ಸ್ಫೂರ್ತಿ ತಿಳಿಸಿದ್ದಾಳೆ.